13 ಸಾವಿರ ಮಕ್ಕಳಿಗೆ ನೋಟ್ ಬುಕ್ ವಿತರಣೆ

13 ಸಾವಿರ ಮಕ್ಕಳಿಗೆ ನೋಟ್ ಬುಕ್ ವಿತರಣೆ

30

Get real time updates directly on you device, subscribe now.


ತುಮಕೂರು: ತ್ರಿವಿಧ ದಾಸೋಹ ಶ್ರೀ ಕ್ಷೇತ್ರ ಸಿದ್ಧಗಂಗಾ ಮಠದಲ್ಲಿ ಮಂಗಳವಾರ ಪೈ ಫೌಂಡೇಷನ್ ವತಿಯಿಂದ 18ನೇ ವರ್ಷದ ಪುಸ್ತಕ ವಿತರಣಾ ಕಾರ್ಯಕ್ರಮದಲ್ಲಿ 13 ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ನೋಟ್ ಪುಸ್ತಕ ವಿತರಣೆ ಮಾಡಲಾಯಿತು.
ಶ್ರೀಸಿದ್ದಗಂಗಾ ಮಠದ ಕಿರಿಯ ಶ್ರೀ ಶಿವಸಿದ್ದೇಶ್ವರ ಸ್ವಾಮೀಜಿ ಮತ್ತು ಫೈ ಫೌಂಡೇಷನ್ ಫೌಂಡರ್ ಹಾಗೂ ವ್ಯವಸ್ಥಾಪಕ ನಿರ್ದೇಶಕ ಎಸ್.ರಾಜಕುಮಾರ ಪೈ ಅವರು ವಿದ್ಯಾರ್ಥಿಗಳಿಗೆ ನೋಟ್ ಬುಕ್ ವಿತರಣೆ ಮಾಡಿದರು.
ನೋಟ್ ಬುಕ್ ವಿತರಣಾ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಶಿವಸಿದ್ದೇಶ್ವರ ಸ್ವಾಮೀಜಿ ಮಾತನಾಡಿ, ಪೈ ಫೌಂಡೇಷನ್ ಮಾಡಿರುವ ದಾನವನ್ನು ಮಕ್ಕಳು ಸದುಪಯೋಗ ಪಡಿಸಿಕೊಂಡು ಮಕ್ಕಳು ಸಾಧಕರಾಗಿ ಹೊರಹೊಮ್ಮಿದಾಗ ಆ ದಾನ ಸಾರ್ಥಕತೆ ಪಡೆದುಕೊಳ್ಳುತ್ತದೆ, ಹಾಗಾಗಿ ನೋಟ್ ಬುಕ್ ಗಳನ್ನ ಪಡೆದ ಮಕ್ಕಳು ತಮ್ಮ ಭವಿಷ್ಯ ಉತ್ತಮವಾಗಿಸಿ ಕೊಳ್ಳಬೇಕು, ಸಾಧಕರಾಗಿ ಹೊರ ಹೊಮ್ಮಬೇಕು ಎಂದು ಕರೆ ನೀಡಿದರು.

ಫೈ ಫೌಂಡೇಷನ್ ಫೌಂಡರ್ ಎಸ್.ರಾಜಕುಮಾರ ಪೈ ಮಾತನಾಡಿ, ನಾವು ಎಲೆಕ್ಟ್ರಾನಿಕ್ ವ್ಯವಹಾರದಲ್ಲಿ 124 ವರ್ಷದಿಂದ ಕರ್ನಾಟಕ, ತೆಲಾಂಗಣ, ಆಂಧ್ರ ಪ್ರದೇಶದಲ್ಲಿ ಸೇವೆ ನೀಡುತ್ತಿದ್ದೇವೆ, ಮಲ್ಟಿಬ್ರಾಂಡ್ ಸ್ಟೋರ್ 90, ಮೊಬೈಲ್ ಸ್ಟೋರ್ 110, ಫರ್ನಿಚರ್ 116 ಸ್ಟೋರ್ ಗಳಿದ್ದು ಎಲ್ಲಾ ಕಡೆ ಉತ್ತಮ ಗುಣಮಟ್ಟದ ಸೇವೆ ಕೊಡುತ್ತಿದ್ದೇವೆ, ಇದರ ಜೊತೆಗೆ ಸಮಾಜಮುಖಿ ಕಾರ್ಯಕ್ರಮ ಸಹ ಮಾಡಿಕೊಂಡು ಬಂದಿದ್ದೇವೆ ಎಂದರು.

ಪೈ ಫೌಂಡೇಷನ್ ನಿಂದ ಪ್ರತಿವರ್ಷ ವಿದ್ಯಾರ್ಥಿಗಳಿಗೆ ಉಚಿತವಾಗಿ ಉತ್ತಮ ಗುಣಮಟ್ಟದ ನೋಟ್ ಬುಕ್ ವಿತರಣೆ ಮಾಡುತ್ತಾ ಬಂದಿದ್ದೇವೆ, ಈ ವರ್ಷವೂ ಸಹ 36 ಸಾವಿರ ಮಕ್ಕಳಿಗೆ ಪುಸ್ತಕ ಕೊಡುತ್ತಿದ್ದೇವೆ, ಸುಮಾರು 2 ಲಕ್ಷ ನೋಟ್ ಬುಕ್ ವಿತರಿಸುತ್ತಿದ್ದೇವೆ, ಇವತ್ತು ಸಿದ್ಧಗಂಗಾ ಮಠದಲ್ಲಿ 18 ವರ್ಷದ ಪುಸ್ತಕ ವಿತರಣೆ ನಡೆಯುತ್ತಿದೆ, ಹದಿನೆಂಟು ವರ್ಷಗಳಿಂದಲೂ ಸಹ ಪುಸ್ತಕ ವಿತರಣೆ ಮಾಡುತ್ತಾ ಬಂದಿದ್ದೇವೆ ಎಂದರು.

ಪುಸ್ತಕ ವಿತರಣಾ ಕಾರ್ಯಕ್ರಮದಲ್ಲಿ ಪೈ ಫೌಂಡೇಷನ್ ಕುಟುಂಬಸ್ಥರು ಸೇರಿ ವಿವಿಧ ಗಣ್ಯರು ಹಾಜರಿದ್ದರು.

Get real time updates directly on you device, subscribe now.

Comments are closed.

error: Content is protected !!