ದೇಶದಲ್ಲೇ ಕರ್ನಾಟಕ ಪೊಲೀಸ್ ನಂಬರ್ 1

ಕೊಡಿಗೇನಹಳ್ಳಿ ಪೊಲೀಸ್ ಠಾಣೆ ಕಟ್ಟಡದ ಶಿಲಾನ್ಯಾಸ ಕಾರ್ಯಕ್ರಮದಲ್ಲಿ ಪರಂ ಹೇಳಿಕೆ

41

Get real time updates directly on you device, subscribe now.


ಕೊಡಿಗೇನಹಳ್ಳಿ: ಬಹು ದಿನಗಳ ಬೇಡಿಕೆಯಾಗಿದ್ದ ನೂತನ ಪೊಲೀಸ್ ಕಟ್ಟಡವನ್ನು ಸುಮಾರು 1.5 ಕೋಟಿ ವೆಚ್ಚದಲ್ಲಿ ನಿರ್ಮಾಣ ಮಾಡಲಾಗುತ್ತಿದೆ ಎಂದು ಜಿಲ್ಲಾ ಉಸ್ತುವಾರಿ ಹಾಗೂ ಗೃಹ ಸಚಿವ ಡಾ.ಜಿ.ಪರಮೇಶ್ವರ್ ತಿಳಿಸಿದರು.
ತಾಲೂಕಿನ ಕೊಡಿಗೇನಹಳ್ಳಿ ಪೊಲೀಸ್ ಠಾಣೆಯ ನೂತನ ಕಟ್ಟಡದ ಶಿಲಾನ್ಯಾಸ ನೆರವೇರಿಸಿ ಮಾತನಾಡಿ, 1944 ರಲ್ಲಿ ಸ್ಥಾಪಿತವಾದ ಕೊಡಿಗೇನಹಳ್ಳಿ ಪೊಲೀಸ್ ಠಾಣೆ ಕಟ್ಟಡ ದುಸ್ಥಿತಿ ತಲುಪಿರುವ ಬಗ್ಗೆ ಸಹಕಾರಿ ಸಚಿವ ಕೆ.ಎನ್.ರಾಜಣ್ಣ ಇತ್ತೀಚೆಗೆ ಚರ್ಚಿಸಿದ್ದ ಪರಿಣಾಮ ಪೊಲೀಸ್ ಇಲಾಖೆಯ ಉಳಿತಾಯದ 1.5 ಕೋಟಿ ವೆಚ್ಚದಲ್ಲಿ ಈ ಕಟ್ಟಡ ನಿರ್ಮಾಣ ಮಾಡಲಾಗುತ್ತಿದ್ದು 8 ತಿಂಗಳಲ್ಲಿ ಕಾಮಗಾರಿ ಪೂರ್ಣ ಗೊಳಿಸಬೇಕು ಎಂದರು.

ನಾನು 3ನೇ ಬಾರಿ ಗೃಹ ಸಚಿವನಾಗಿ ಕೆಲಸ ಮಾಡುತಿದ್ದೇನೆ, ಪೊಲೀಸ್ ಸಿಬ್ಬಂದಿ ಕಠಿಣ ಪರಿಸ್ಥಿತಿಯಲ್ಲಿ ಕೆಲಸ ಮಾಡುತ್ತಿದ್ದು ಕೊಲೆ ಸೇರಿದಂತೆ ಕಠಿಣ ಅಪರಾಧ ಪ್ರಕರಣಗಳನ್ನು ಒಂದೇ ದಿನದಲ್ಲಿ ಭೇದಿಸುವಲ್ಲಿ ನಮ್ಮ ಪೊಲೀಸ್ ಇಲಾಖೆ ಕ್ರಿಯಾಶೀಲವಾಗಿ ಕೆಲಸ ಮಾಡುತ್ತಿದೆ, ಇದರಿಂದ ದೇಶದಲ್ಲಿ ಕರ್ನಾಟಕ ನಂಬರ್ 1 ಪೊಲೀಸ್ ಎಂಬ ಹೆಸರಿದೆ, ನಾನು ಗೃಹ ಸಚಿವನಾಗಿ 3 ನೇ ಬಾರಿ ಆಯ್ಕೆಯಾಗಿ ಕೆಲಸ ಮಾಡುತಿದ್ದು 12 ಸಾವಿರ ಪೊಲೀಸರು ಪದೋನ್ನತಿ ಪೆಡಿಂಗ್ ಇದ್ದಾಗ ಒಂದೆ ಪತ್ರದಲ್ಲಿ ಒಂದು ದಿನದಲ್ಲಿ ಪದೋನ್ನೋತಿ ಕೆಲಸ ಮಾಡಿ ಮುಗಿಸಿದ್ದೇನೆ ಎಂದರು.
ನನ್ನ ರಾಜಕೀಯ ಜನ್ಮ ನೀಡಿದ ಮಧುಗಿರಿ ಎಂದು ಮರೆಯಲು ಸಾಧ್ಯವಿಲ್ಲ, ರಾಜಣ್ಣ ನೇರ ನುಡಿ ಹುಟ್ಟು ಗುಣ ಕೋಪದಲ್ಲಿ ಮಾತನಾಡುವ ಕ್ರಿಯಾಶೀಲ ವ್ಯಕ್ತಿ, ಖುದ್ದು ರಾಜಣ್ಣ ಸಹಕಾರಿ ಸಚಿವರಾಗುತ್ತಾರೆ ಎಂದು ಊಹಿಸಿರಲಿಲ್ಲ, ರಾಜ್ಯದ ಸಹಕಾರಿ ಕ್ಷೇತ್ರದಲ್ಲಿ ರಾಜಣ್ಣನಷ್ಟು ಅನುಭವಿ ಯಾರು ಇಲ್ಲ, ಇದಕ್ಕಾಗಿ ಅವರಿಗೆ ಸಹಕಾರಿ ರತ್ನ ಪ್ರಶಸ್ತಿ ಸಿಕ್ಕಿದ್ದು, ಸಹಕಾರಿ ಸಚಿವರು ಆಗಿದ್ದಾರೆ ಎಂದರು.

ಸಹಕಾರಿ ಸಚಿವ ಕೆ.ಎನ್ ರಾಜಣ್ಣ ಮಾತನಾಡಿ ಮೇವು ಬ್ಯಾಂಕ್ ಮಾಡಲಾಗಿತ್ತು, ಈ ಹಿಂದಿನ ನಮ್ಮ ಸರಕಾರದ ಅವಧಿಯಲ್ಲಿ ಗೋ ಶಾಲೆ ಮಾಡಲಾಗಿತ್ತು, ನಮ್ಮ ಹಿಂದನ ಸರಕಾರದ ಅವಧಿಯಲ್ಲಿ ಸಿದ್ಧರಾಮಯ್ಯ ಮುಖ್ಯಮಂತ್ರಿ ಆಗಿದ್ದಾಗ ಇಮ್ಮಡಗೊಂಡನ ಹಳ್ಳಿ ಚೆಕ್ ಡ್ಯಾಮ್ ಮಾಡಿರುವ ಹಿನ್ನೆಲೆಯಲ್ಲಿ ಮಳೆ ಬಂದರೆ ದೊಡ್ಡ ಮಾಲೂರು ಕೆರೆ ಸಂಪೂರ್ಣ ತುಂಬುತ್ತಿದೆ ಎಂದರು.

ನಿಮ್ಮೆಲ್ಲರ ಆಶೀರ್ವಾದಿಂದ ನಮ್ಮ ಸರಕಾರ ಅಧಿಕಾರಕ್ಕೆ ಬಂದಿದೆ, ನಮ್ಮ ಸರಕಾರದ ಪ್ರಣಾಳಿಕೆಯನ್ನು ಡಾ.ಜಿ.ಪರಮೇಶ್ವರ್ ತಯಾರಿ ಮಾಡಿದ್ದು ಸರಕಾರ ಅಧಿಕಾರಕ್ಕೆ ಬಂದ ತಕ್ಷಣ ನೀಡಿದ ಗ್ಯಾರಂಟಿ ಜಾರಿಗೆ ಮಾಡಲಾಗಿದೆ, 58 ಸಾವಿರ ಕೋಟಿ ಗ್ಯಾರಂಟಿಗೆ ವೆಚ್ಚ ಆಗುತ್ತಿದೆ, ನುಡಿದಂತೆ ನಡೆದ ಸರ್ಕಾರ ಎಂದು ಜನರ ಬಾಯಿಯಿಂದ ಅಪೇಕ್ಷೆ ಪಡುತ್ತೇನೆ ಎಂದರು.

ಕೇಂದ್ರ ವಲಯ ಡಿಜಿಪಿ ಡಾ.ಕೆ.ರಾಮಚಂದ್ರ ರಾವ್, ಕೇಂದ್ರ ವಲಯ ಐಜಿಪಿ ಲಾಭು ರಾಮ್, ಜಿಲ್ಲಾಧಿಕಾರಿ ಶುಭ ಕಲ್ಯಾಣ್, ಜಿಪಂ ಸಿಇಓ ಜಿ ಪ್ರಭು, ಪೊಲೀಸ್ ವರಿಷ್ಠಾಧಿಕಾರಿ ಅಶೋಕ್.ಕೆ.ವಿ, ಆಡಿಷನಲ್ ಎಸ್ಪಿಗಳಾದ ಮರಿಯಪ್ಪ, ಖಾದರ್, ಡಿವೈಎಸ್ಪಿ ರಾಮಚಂದ್ರಪ್ಪ, ಸಿಪಿಐ ಹನುಮಂತರಾಯಪ್ಪ, ಪಿಎಸೈ ಶ್ರೀನಿವಾಸ್ ಪ್ರಸಾದ್ ಇತರರು ಇದ್ದರು.

Get real time updates directly on you device, subscribe now.

Comments are closed.

error: Content is protected !!