ಡಾ.ರಾಜರತ್ನ ಪ್ರಶಸ್ತಿ ಪ್ರಶಸ್ತಿ ಪ್ರದಾನ ಜು.13ಕ್ಕೆ

15

Get real time updates directly on you device, subscribe now.


ತುಮಕೂರು: ಹಿರಿಯ ಗಾಯಕ ಮತ್ತು ಕಲಾವಿದ ದಿಬ್ಬೂರು ಮಂಜು ಅವರ ನೇತೃತ್ವದ ಅಮರಜೋತಿ ಕಲಾ ವೃಂದದ ವತಿಯಿಂದ ಇದೇ ಮೊದಲ ಬಾರಿಗೆ ರಾಜ್ಯಮಟ್ಟದ ಡಾ.ರಾಜರತ್ನ ಪ್ರಶಸ್ತಿ ಕೊಡ ಮಾಡುತ್ತಿದ್ದು, ಜುಲೈ 13 ರಂದು ಕನ್ನಡ ಭವನದಲ್ಲಿ ಡಾ.ರಾಜರತ್ನ ಪ್ರಶಸ್ತಿ ಪ್ರಧಾನ ಸಮಾರಂಭ ನಡೆಯಲಿದೆ ಎಂದು ದಿಬ್ಬೂರು ಮಂಜು ತಿಳಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿಂದು ಮಾತನಾಡಿ, ಕಳೆದ 35 ವರ್ಷಗಳಿಂದ ಡಾ.ರಾಜಕುಮಾರ್ ಅವರ ಹಾಡುಗಳನ್ನು ಕೇಳಿ, ಅವರ ನಡೆ, ನುಡಿ ಅನುಸರಿಸಿ, ಅವರಂತಯೇ ಹಾಡುವ ಅನುಕರಣೆ ಮಾಡುತ್ತಾ ಓರ್ವ ಗಾಯಕನಾಗಿ ಗುರುತಿಸಿ ಕೊಂಡಿದ್ದೇನೆ, ಕಲಾ ಜಗತ್ತಿನಲ್ಲಿಯೇ ಮೇರು ಪರ್ವತವಾಗಿರುವ ಡಾ.ರಾಜಕುಮಾರ್ ಹೆಸರಿನಲ್ಲಿ ಕಾರ್ಯಕ್ರಮ ಮಾಡಬೇಕೆಂಬ ಬಯಕೆ ವ್ಯಕ್ತಪಡಿಸಿದ ಸಂದರ್ಭದಲ್ಲಿ ಹಿರಿಯರು ಕೊಟ್ಟ ಸಲಹೆಯಂತೆ ಡಾ.ರಾಜರತ್ನ ಪ್ರಶಸ್ತಿ ಸ್ಥಾಪಿಸಿ, ಪ್ರತಿವರ್ಷ ರಂಗಭೂಮಿ ಮತ್ತು ಚಲನಚಿತ್ರ ಎರಡು ಕ್ಷೇತ್ರಗಳಲ್ಲಿ ಕೆಲಸ ಮಾಡಿದ ಕಲಾವಿದರನ್ನು ಗುರುತಿಸಿ, ಪ್ರಶಸ್ತಿ ನೀಡುವ ಕಾರ್ಯಕ್ರಮಕ್ಕೆ ಮುನ್ನುಡಿ ಬರೆಯಲಾಗಿದೆ ಎಂದರು.

ಡಾ.ರಾಜರತ್ನ ಪ್ರಶಸ್ತಿ ಪ್ರದಾನ ಆಯೋಜನಾ ಸಮಿತಿಯ ಸಂಚಾಲಕ ಡಾ.ಲಕ್ಷ್ಮಿರಂಗಯ್ಯ ಮಾತನಾಡಿ, ಜುಲೈ 13 ರಂದು ಸಂಜೆ 04 ಗಂಟೆಗೆ ತುಮಕೂರಿನ ಕನ್ನಡ ಭವನದಲ್ಲಿ ಆಯೋಜಿಸಿರುವ ಡಾ.ರಾಜರತ್ನ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಪ್ರಶಸ್ತಿ ಆಯೋಜನಾ ಸಮಿತಿಯ ಎಲ್ಲಾ ಸದಸ್ಯರು ಚರ್ಚಿಸಿ ಹಿರಿಯ ಕಲಾವಿದರಾದ, ಚಲನಚಿತ್ರ, ರಂಗಭೂಮಿ, ಕಿರುತೆರೆ ಮೂರು ಕ್ಷೇತ್ರಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿರುವ ಸುಂದರ್ ರಾಜ್ ಹಾಗೂ ಡಾ.ರಾಜಕುಮಾರ್ ಅವರೊಂದಿಗೆ ರಂಗಭೂಮಿಯಲ್ಲಿ ಪಾತ್ರ ನಿರ್ವಹಿಸಿದ ಹಿರಿಯ ಹರಿಕಥಾ ವಿದ್ವಾನ್ ಕಲಾಶ್ರೀ ಡಾ.ಲಕ್ಷ್ಮಣದಾಸ್ ಅವರಿಗೆ ಡಾ.ರಾಜರತ್ನ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದರು.

ಡಾ.ರಾಜರತ್ನ ಪ್ರಶಸ್ತಿ ಪ್ರದಾನ ಸಮಾರಂಭವನ್ನು ನಾಡೋಜ ಪ್ರೊ.ಬರಗೂರ ರಾಮಚಂದ್ರಪ್ಪ ಉದ್ಘಾಟಿಸಿ, ಪ್ರಶಸ್ತ್ರಿ ಪ್ರದಾನ ಮಾಡುವರು, ಅಧ್ಯಕ್ಷತೆಯನ್ನು ತುಮಕೂರು ವಿವಿ ಕುಲಪತಿ ಪ್ರೊ.ಎಂ.ವೆಂಕಟೇಶ್ವರಲು ವಹಿಸುವರು, ಇದೇ ವೇಳೆ ಸಾಧಕರಾದ ಡಾ.ಓ.ನಾಗರಾಜ್, ಡಾ.ಎಲ್.ಸುಮನ, ಡಾ.ಎಲ್.ಸುಧಾ ಮಂಜುನಾಥ್, ಡಾ.ಎ.ಎಸ್.ರಾಜಶೇಖರ್, ಡಾ.ಆದರ್ಶ ಅವರನ್ನು ಸನ್ಮಾನಿಸಲಾಗುವುದು, ಕಾರ್ಯಕ್ರಮದಲ್ಲಿ ತುಮಕೂರು ವಿವಿ ಕನ್ನಡ ಪ್ರಾಧ್ಯಾಪಕ ಡಾ.ನಾಗಭೂಷಣ್ ಬಗ್ಗನಡು, ದಿಬ್ಬೂರು ಮಂಜು ಹಾಗೂ ಡಾ.ಲಕ್ಷ್ಮಿರಂಗಯ್ಯ ಉಪಸ್ಥಿತರಿರುವರು ಎಂದರು.
ಸುದ್ದಿಗೋಷ್ಠಿಯಲ್ಲಿ ಡಾ.ರಾಜರತ್ನ ಪ್ರಶಸ್ತಿ ಆಯೋಜನ ಸಮಿತಿ ಸದಸ್ಯರಾದ ದೇವಿರಪ್ಪ ಇದ್ದರು.

Get real time updates directly on you device, subscribe now.

Comments are closed.

error: Content is protected !!