ತುಮಕುರು: ನಗರದ ವಿದ್ಯಾವಾಹಿನಿ ಪ್ರಥಮ ದರ್ಜೆ ಕಾಲೇಜು ಮಹಾತ್ಮಗಾಂಧಿ ಕ್ರೀಡಾಂಗಣದಲ್ಲಿ ಕಾಲೇಜಿನ ಕ್ರೀಡಾ ದಿನಾಚರಣೆಯಾದ ವಿವಿಯನ್ ಸ್ಪೋಟ್ಸ್ ಲೀಗ್ ಆಯೋಜಿಸಲಾಗಿತ್ತು.
ಕಾರ್ಯಕ್ರಮದ ಅಧ್ಯಕ್ಷ, ವಿದ್ಯಾವಾಹಿನಿ ಸಮೂಹ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಎನ್.ಬಿ. ಪ್ರದೀಪ್ಕುಮಾರ್ ಹಾಗೂ ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಡಾ. ಕೀರ್ತಿ ಶಿವಲಿಂಗಯ್ಯ ಅವರು ಪಾರಿವಾಳಗಳನ್ನು ಹಾರಿಸಿ ಚೆಸ್ ಪಾನ್ ಜರುಗಿಸುವ ಮೂಲಕ ಮತ್ತು ವಿದ್ಯಾವಾಹಿನಿ ಪ್ರಥಮ ದರ್ಜೆ ಕಾಲೇಜಿನ ಕ್ರೀಡಾ ಪಟುಗಳಿಂದ ಕ್ರೀಡಾ ಜ್ಯೋತಿ ಹೊತ್ತಿಸಿ ಹಸ್ತಾಂತರ ಮಾಡಿಸುವ ಮೂಲಕ ಕ್ರೀಡಾ ಸ್ಪರ್ಧೆಗೆ ಚಾಲನೆ ನೀಡಿದರು.
ಕ್ರೀಡಾ ಜ್ಯೋತಿ ಹೊತ್ತಿಸುವ ಕಾರ್ಯಕ್ರಮದಲ್ಲಿ ಅಂತರ ಕಾಲೇಜು, ವಿಶ್ವ ವಿದ್ಯಾಲಯ, ಜಿಲ್ಲಾ ಹಾಗೂ ಅಂತಾರಾಜ್ಯ ಮಟ್ಟದಲ್ಲಿ ಹಲವು ಕ್ರೀಡೆಗಳಲ್ಲಿ ಭಾಗವಹಿಸಿ ವಿಜೇತರಾದಂತಹ ವಿದ್ಯಾವಾಹಿನಿ ಪ್ರಥಮ ದರ್ಜೆ ಕಾಲೇಜು ವಿದ್ಯಾರ್ಥಿಗಳಾದ ಶ್ರೇಯಾ.ಎಸ್.ಜಿ, ಮಂದೀಪ್.ಎಸ್.ಕೆ, ಹರ್ಷ, ಚೇತನ್ ಪಟೇಲ್, ಏಕ್ ನಾಥ್ ಸಿಂಗ್, ತಿರುಮಲೇಶ್.ಇ, ಅಭಿಷೇಕ್.ಬಿ.ಎನ್, ನವೀನ್.ಟಿ.ಎಸ್ ಮತ್ತು ಭರಣಿ ಭಾಗವಹಿಸಿದ್ದರು.
ಕಾಲೇಜು ಕ್ರೀಡಾ ಪಟುಗಳು ಮತ್ತು ಎನ್ ಸಿ ಸಿ ಕೆಡೆಟ್ ಗಳು ಮಾರ್ಚ್ ಫಾಸ್ಟ್ ಮಾಡಿ ಸೆಲ್ಯೂಟ್ ಮಾಡುವ ಮೂಲಕ ವೇದಿಕೆಯಲ್ಲಿನ ಗಣ್ಯತೀ ಗಣ್ಯರಿಗೆ ಗೌರವ ಸಲ್ಲಿಸಿದರು.
ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಆಗಮಿಸಿದ್ದ ರಾಷ್ಟ್ರಮಟ್ಟದ ಖೋಖೋ ಪಂದ್ಯದಲ್ಲಿ ಚಿನ್ನದ ಪದಕ ಗಳಿಸಿರುವ ಹಾಗೂ ಮೂಳೆ ಶಸ್ತ್ರ ಚಿಕಿತ್ಸೆ ತಜ್ಞ ಡಾ.ಕೀರ್ತಿ ಶಿವಲಿಂಗಯ್ಯ ಅವರಿಗೆ ಕಾಲೇಜು ವತಿಯಿಂದ ಎನ್.ಬಿ.ಪ್ರದೀಪ್ ಕುಮಾರ್ ಸನ್ಮಾನಿಸಿದರು.
ಈ ವೇಳೇ ವಿದ್ಯಾವಾಹಿನಿ ಸಮೂಹ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಎನ್.ಬಿ ಪ್ರದೀಪ್ ಕುಮಾರ್ ಮಾತನಾಡಿ, ಕ್ರೀಡೆಯು ವಿದ್ಯಾರ್ಥಿಗಳ ಸರ್ವಾಂಗೀಣ ಅಭಿವೃದ್ಧಿಗೆ ಪೂರಕವಾದದ್ದು, ವಿದ್ಯಾರ್ಥಿಗಳಿಗೆ ಗುಣಮಟ್ಟ ಶಿಕ್ಷಣದೊಂದಿಗೆ ಕ್ರೀಡೆಯು ಅತ್ಯಗತ್ಯ, ಕ್ರೀಡೆಯಲ್ಲಿ ತಮ್ಮನ್ನು ತಾವು ತೊಡಗಿಸಿ ಕೊಳ್ಳುವುದರಿಂದ ವಿದ್ಯಾರ್ಥಿಗಳಿಗೆ ಶಿಸ್ತು, ನಿಯಮ ಪಾಲನೆ, ಸಮಯ ಪ್ರಜ್ಞೆ ಬೆಳೆಸುವಲ್ಲಿ ಸಹಕಾರಿಯಾಗುತ್ತದೆ ಎಂದರು.
ವಿದ್ಯಾರ್ಥಿಗಳು ತಮ್ಮನ್ನು ತಾವು ಗುರುತಿಸಿಕೊಳ್ಳಲು ಇದು ವೇದಿಕೆಯಾಗಿರುತ್ತದೆ ಹಾಗು ಕ್ರೀಡೆಗಳು ನಮ್ಮ ಆರೋಗ್ಯ ವೃದ್ಧಿಸಿಕೊಳ್ಳಲು ಸಹಕಾರಿ, ವಿದ್ಯಾರ್ಥಿಗಳಿಗೆ ಕ್ರೀಡೆ ಒಂದು ರೀತಿ ಆರೋಗ್ಯ ವೃದ್ಧಿಸುವ ಟಾನಿಕ್ ನಂತೆ ಎಂದರು.
ವಿದ್ಯಾವಾಹಿನಿ ಪ್ರಥಮ ದರ್ಜೆ ಕಾಲೇಜು ವಿದ್ಯಾರ್ಥಿಗಳು ವಿಶ್ವ ವಿದ್ಯಾಲಯ ಮಟ್ಟದಲ್ಲಿನ ರ್ಯಾಂಕ್ ಪಡೆದು ಚಿನ್ನದ ಪದಕ ಪಡೆದು ಶಿಕ್ಷಣದಲ್ಲಿ ಸದಾ ಮುಂದಿರುವಂತೆ ಕ್ರೀಡೆಯಲ್ಲೂ ನಮ್ಮ ವಿದ್ಯಾರ್ಥಿಗಳು ಮುಂಚೂಣಿಯಲ್ಲಿರುವುದು ಹೆಮ್ಮೆಯ ವಿಷಯ, ಪ್ರಯತ್ನಪಟ್ಟರೆ ಎಲ್ಲವೂ ಸಾಧ್ಯ, ವಿದ್ಯಾರ್ಥಿಗಳು ಶಿಕ್ಷಣದೊಂದಿಗೆ ಕ್ರೀಡೆಯಲ್ಲೂ ತಮ್ಮನ್ನು ತಾವು ತೊಡಗಿಸಿಕೊಳ್ಳಿ ಎಂದು ತಿಳಿಸಿ ಸ್ಪರ್ಧೆಯಲ್ಲಿ ಭಾಗವಹಿಸುವ ವಿದ್ಯಾರ್ಥಿಗಳಿಗೆಲ್ಲ ಶುಭ ಕೋರಿದರು.
ಡಾ. ಕೀರ್ತಿ ಶಿವಲಿಂಗಯ್ಯ ಮಾತನಾಡಿ, ಕ್ರೀಡೆಯು ದೈಹಿಕ ಸಧೃಡತೆ ಕಾಪಾಡಿ ಮೂಳೆಗಳನ್ನು ಗಟ್ಟಿಗೊಳಿಸುತ್ತದೆ, ಶಿಕ್ಷಣದೊಂದಿಗೆ ಕ್ರೀಡೆಯನ್ನು ತಮ್ಮ ಬದುಕಿನಲ್ಲಿ ರೂಢಿಸಿಕೊಂಡು ಎಲ್ಲವನ್ನು ನಿಭಾಯಿಸುವ ಶಕ್ತಿ ಬೆಳೆಸಿಕೊಳ್ಳಿ, ಕ್ರೀಡೆ ಮೊದಲು ಸೋಲನ್ನು ಒಪ್ಪಿ ಬದುಕುವ ಪರಿಭಾವನೆ ಬೆಳೆಸುತ್ತದೆ ಎಂದು ತಿಳಿಸಿದರು.
ವಿದ್ಯಾರ್ಥಿಗಳಿಗೆ ಕ್ರೀಡೆಗಳಾದ ರನ್ನಿಂಗ್ ರೇಸ್, ಶಾಟ್ ಫುಟ್, ಹೈಜಂಪ್, ಲಾಂಗ್ ಜಂಪ್, ಹಗ್ಗ ಜಗ್ಗಾಟ, ಕ್ರಿಕೆಟ್, ಕಬ್ಬಡಿ, ವಾಲಿಬಾಲ್, ತ್ರೋಬಾಲ್, ಚೆಸ್ ಮುಂತಾದ ಹತ್ತು ಹಲವು ಕ್ರೀಡೆ ನಡೆಸಲಾಯಿತು. ವಿದ್ಯಾವಾಹಿನಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಸಿ.ಎಸ್.ಪ್ರೇಮ್ ಇತರರು ಭಾಗವಹಿಸಿದ್ದರು.
Comments are closed.