ಸರ್ವಿಸ್ ಸ್ಟೇಷನ್ ಆಯ್ತಾ ಕನ್ನಡ ಭವನ!

ಭವನದ ಆವರಣದಲ್ಲೇ ಕಾರ್ ಕ್ಲೀನ್- ಗ್ರೌಂಡ್ ಫ್ಲೋರ್ ನಲ್ಲೂ ಕೊಳಚೆ ನೀರು

30

Get real time updates directly on you device, subscribe now.


ತುಮಕೂರು: ನಗರದ ಅಮಾನಿಕೆರೆ ರಸ್ತೆಯಲ್ಲಿರುವ ಜಿಲ್ಲಾ ಕಸಾಪದ ಕನ್ನಡ ಭವನದ ಆವರಣ ಕಾರ್ಗಳನ್ನು ತೊಳೆಯುವ ತಾಣವಾಗಿ ಮಾರ್ಪಟ್ಟಿದೆ.
ಹೌದು, ಕನ್ನಡ ಭವನದ ಆವಣರಲ್ಲಿ ಪಕ್ಕದ ಕಾರ್ ವಾಷಿಂಗ್ ಸೆಂಟರ್ ನವರು ಕಾರ್ ಗಳನ್ನು ನಿಲ್ಲಿಸಿ ಕ್ಲೀನ್ ಮಾಡುವುದು ಮತ್ತು ತೊಳೆಯುವ ಕೆಲಸ ಮಾಡುತ್ತಿದ್ದಾರೆ ಎನ್ನಲಾಗಿದೆ.
ಸದಾ ಕನ್ನಡದ ಕಾರ್ಯಕ್ರಮ, ಕನ್ನಡದ ಕಲರವ ಇರಬೇಕಿದ್ದ ಕನ್ನಡ ಭವನದಲ್ಲಿ ನಿರ್ವಹಣೆ ಕೊರತೆ ಕಾಣುತ್ತಿದೆ, ಕಸಾಪ ಜಿಲ್ಲಾಧ್ಯಕ್ಷ ಸಿದ್ದಲಿಂಗಪ್ಪ ಅವರ ಗಮನಕ್ಕೆ ಬಾರದೆ ಇಲ್ಲಿ ಕಾರ್ ತೊಳೆಯುವ ಕೆಲಸ ಮಾಡಲಾಗುತ್ತಿದೆಯಾ ಎಂಬ ಅನುಮಾನ ಮೂಡುತ್ತಿದೆ, ಜೊತೆಗೆ ಭವನದ ಆವರಣದಲ್ಲಿ ಕಾರ್ ನಿಲ್ಲಿಸಿಕೊಂಡು ವಾಷಿಂಗ್ ಮಾಡಲು ಯಾರದರೂ ಅನುಮತಿ ಕೊಟ್ಟಿದ್ದಾರಾ ಎಂಬ ಪ್ರಶ್ನೆಯೂ ಎದುರಾಗಿದೆ.

ಡೆಂಗ್ಯೂ ತಾಣವಾಯ್ತಾ ಕನ್ನಡ ಭವನ
ಕನ್ನಡ ಭವನದಲ್ಲಿ ಸ್ವಚ್ಛತೆ ಮಾಯವಾಗಿದೆ ಎಂಬುದಕ್ಕೆ ಹಲವು ಕುರುವು ಸಿಗಲಿವೆ, ಈ ಭವನದ ಗ್ರೌಂಡ್ ಫ್ಲೋರ್ ನಲ್ಲಿ ಕೊಳಚೆ ನೀರು ನಿಂತಿದ್ದು ಅಲ್ಲಿ ಸೊಳ್ಳೆಗಳ ತ್ಪತ್ತಿ, ವಾಸಕ್ಕೆ ಹೇಳಿ ಮಾಡಿಸಿದಂತಿದೆ, ಜಿಲ್ಲಾಡಳಿತ ಮತ್ತು ಆರೋಗ್ಯ ಇಲಾಖೆ ಸ್ವಚ್ಛತೆಗೆ ಆದ್ಯತೆ ನೀಡಿ ಡೆಂಗ್ಯೂ ನಿಯಂತ್ರಣಕ್ಕೆ ಮುಂದಾಗಿ ಎಂಬ ಹೇಳುತ್ತಲೇ ಇದೆ, ಆದರೆ ಕನ್ನಡ ಭವನಕ್ಕೆ ಮಾತ್ರ ಈ ನಿಯಮ ಅನ್ವಯಿಸದಂತೆ ಕಾಣುತ್ತಿದೆ, ಗ್ರೌಂಡ್ ಫ್ಲೋರ್ ನಲ್ಲಿ ನಿಂತಿರುವ ನೀರನ್ನು ಆಚೆ ಹಾಕುವ ಕೆಲಸವನ್ನು ಮಾಡುತ್ತಿಲ್ಲ, ಇದು ಮುಂದೆ ಅಪಾಯಕ್ಕೆ ದಾರಿ ಮಾಡಿಕೊಡುವುದರಲ್ಲಿ ಅನುಮಾನವಿಲ್ಲ.
ಇನ್ನಾದರೂ ಕಸಾಪ ಜಿಲ್ಲಾಧ್ಯಕ್ಷ ಸಿದ್ದಲಿಂಗಪ್ಪ ಹಾಗೂ ಜಿಲ್ಲಾಡಳಿತ ಎಚ್ಚೆತ್ತು ಕನ್ನಡ ಭವನದಲ್ಲಿ ಸ್ವಚ್ಛತೆ ಕಾಪಾಡಲು ಮುಂದಾಗಬೇಕು, ಜೊತೆಗೆ ಇಲ್ಲಿ ಕಾರುಗಳನ್ನು ತೊಳೆಯುವುದಕ್ಕೆ ಕಡಿವಾಣ ಹಾಕಬೇಕು, ಕಾರು ತೊಳೆಯಲು ಅನುಮತಿ ನೀಡಿದವರಿಗೂ ತಕ್ಕ ಶಾಸ್ತಿ ಮಾಡಬೇಕು ಎಂಬುದು ಕನ್ನಡಾಭಿಮಾನಿಗಳ ಆಗ್ರಹವಾಗಿದೆ.

Get real time updates directly on you device, subscribe now.

Comments are closed.

error: Content is protected !!