ಜೂಜು ಆಡಿಸುತ್ತಿದ್ದ ಕ್ಲಬ್ ಮೇಲೆ ದಾಳಿ- 23 ಮಂದಿ ವಶಕ್ಕೆ

22

Get real time updates directly on you device, subscribe now.


ಪಾವಗಡ: ಸದಸ್ಯರಲ್ಲದವರಿಗೆ ಪ್ರವೇಶ ನೀಡಿ ಅಕ್ರಮವಾಗಿ ಜಜ ಆಡಿಸುತ್ತಿದ್ದ ಕ್ಲಬ್ ಒಂದರ ಮೇಲೆ ಪಾವಗಡ ಪೊಲೀಸರು ದಾಳಿ ನಡೆಸಿದ್ದು 23 ಜನರನ್ನು ವಶಕ್ಕೆ ಪಡೆದು ಪ್ರಕರಣ ದಾಖಲಿಸಿರುವ ಘಟನೆ ಗುರುವಾರ ರಾತ್ರಿ ಪಾವಗಡ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಪಟ್ಟಣದ ಹೊರ ವಲಯದ ವೀರಮ್ಮನಹಳ್ಳಿ ಗೇಟ್ ಬಳಿಯ ಹಸಿರು ಕ್ರಾಂತಿ ಸ್ಪೋರ್ಟ್ಸ್ ಅಂಡ್ ರಿಕ್ರಿಯೇಷನ್ ಅಸೋಸಿಯೇಷನ್ ಕ್ಲಬ್ ಮೇಲೆ ಪಾವಗಡ ಸಿಪಿಐ ನೇತೃತ್ವದಲ್ಲಿ ದಾಳಿ ಮಾಡಲಾಗಿದ್ದು, ಜೂಜಾಟದಲ್ಲಿ ತೊಡಗಿದ್ದ 23 ಮಂದಿಯನ್ನು ವಶಕ್ಕೆ ಪಡೆದು ಅವರಿಂದ 54,080.ರೂ. ಹಣ, 7 ದ್ವಿಚಕ್ರ ವಾಹನಗಳನ್ನು ಪೊಲೀಸರು ಜಪ್ತಿ ಮಾಡಿ ಪ್ರಕರಣ ದಾಖಲಿಸಿದ್ದಾರೆ.
ಸಾರ್ವಜನಿಕರು ನೀಡಿದ್ದ ಖಚಿತ ಮಾಹಿತಿ ಆಧರಿಸಿ ಸಿಪಿಐ ಸುರೇಶ್ ನೇತೃತ್ವದಲ್ಲಿ ದಾಳಿ ನಡೆಸಲಾಗಿತ್ತು, ಪಿಎಸ್ ಐ ಗುರುನಾಥ್, ಠಾಣೆಯ ಸಿಬ್ಬಂದಿ ರಾಮಕೃಷ್ಣಪ್ಪ, ಶ್ರೀಕಾಂತ ನಾಯ್ಕ, ತಳವಾರ್ ರಾಜು, ಸರ್ವೇಶ್ ಹಾಗೂ ನಟೇಶ್ ದಾಳಿಯಲ್ಲಿ ಭಾಗವಹಿಸಿದ್ದರು.

Get real time updates directly on you device, subscribe now.

Comments are closed.

error: Content is protected !!