ತುಮಕೂರು: ದಿನೇ ದಿನೇ ಕೊರೊನಾ ಸೋಂಕು ಹೆಚ್ಚಾಗುತ್ತಿದ್ದು ಇಂದು ಒಂದೇ ದಿನ ಐನೂರರ ಗಡಿ ದಾಟಿ 2ನೇ ಅಲೆ ಜಿಲ್ಲೆಯಲ್ಲಿ ಭೀತಿ ಮೂಡಿಸಿದೆ.
ಜಿಲ್ಲೆಯಾದ್ಯಂತ ಇಂದು 545 ಮಂದಿಗೆ ಕೋವಿಡ್-19 ದೃಢಪಟ್ಟಿದೆ. ಒಟ್ಟಾರೆ ಅರ್ಧದಲ್ಲಿ ತುಮಕೂರು ನಗರ ಗ್ರಾಮಾಂತರ ಭಾಗದಲ್ಲಿ ಜನರಲ್ಲಿ ಸೋಂಕು ದೃಢಪಟ್ಟಿದ್ದು ಆತಂಕ ಮೂಡಿಸಿದೆ. ಶಿರಾ, ಕೊರಟಗೆರೆ, ಕುಣಿಗಲ್, ಪಾವಗಡ, ತಿಪಟೂರಿನಲ್ಲಿ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿರುವುದು ಕಂಡು ಬಂದಿದೆ. ಒಟ್ಟಾರೆ ಸೋಂಕಿತರ ಸಂಖ್ಯೆ 28,947 ಏರಿಕೆ ಕಂಡಿದೆ. 2,484 ಸಕ್ರಿಯ ಪ್ರಕರಣಗಳ ಪೈಕಿ 119 ಮಂದಿ ಬಿಡುಗಡೆ ಹೊಂದಿದ್ದಾರೆ.
ಹೊಸದಾಗಿ ತುಮಕೂರು ತಾಲ್ಲೂಕಿನಲ್ಲಿ 255, ಚಿನಾಹಳ್ಳಿ 29, ಗುಬ್ಬಿ 31, ಕೊರಟಗೆರೆ 34, ಕುಣಿಗಲ್ 35, ಮಧುಗಿರಿ 34, ಪಾವಗಡ 32, ಶಿರಾ 41, ತಿಪಟೂರು 34, ತುರುವೇಕೆರೆಯಲ್ಲಿ 20 ಮಂದಿಗೆ ಕೊರೊನಾ ಸೋಂಕು ತಗುಲಿದೆ. ಅನ್ಯ ಕಾರಣದಿಂದ ತುಮಕೂರಿನ ಊರುಕೆರೆ ಗ್ರಾಮದ ಮಹಿಳೆ (69) ಮೃತ ಪಟ್ಟಿದ್ದಾರೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ತಿಳಿಸಿದೆ.
Get real time updates directly on you device, subscribe now.
Comments are closed.