ಕುಣಿಗಲ್: ಮೈತ್ರಿ ಪಕ್ಷದ ಮುಖಂಡರು ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವ ವಿ.ಸೋಮಣ್ಣ ಅವರಿಗೆ ಗುರುವಾರ ಸಂಜೆ ಪಟ್ಟಣ ರೈಲು ನಿಲ್ದಾಣದಲ್ಲಿ ಭೇಟಿ ಮಾಡಿ ಮನವಿ ಸಲ್ಲಿಸಿದರು.
ಸಚಿವ ಸೋಮಣ್ಣ ಗುರುವಾರ ಬೆಳಗ್ಗೆ ಪ್ರಗತಿಯಲ್ಲಿರುವ ರೈಲ್ವೆಯ ವಿದ್ಯುದೀಕರಣ ಇತರೆ ಕಾಮಗಾರಿ ಪ್ರಗತಿ ವೀಕ್ಷಣೆಗೆ ಹಾಸನ ಕಡೆಗೆ ವಿಶೇಷ ರೈಲಿನಲ್ಲಿ ತೆರಳಿದ್ದರು, ಗುರುವಾರ ಸಂಜೆ ಬೆಂಗಳೂರಿಗೆ ತೆರಳುವ ಮಾರ್ಗ ಮಧ್ಯ ಕುಣಿಗಲ್ ಪಟ್ಟಣದ ರೈಲು ನಿಲ್ದಾಣದಲ್ಲಿ ಭೇಟಿಯಾದ ತಾಲೂಕು ಜೆಡಿಎಸ್ ಅಧ್ಯಕ್ಷ ಜಗದೀಶ್, ಬಿಜೆಪಿ ಮುಖಂಡ ಡಿ.ಕೃಷ್ಣಕುಮಾರ್, ತಾಲೂಕು ಬಿಜೆಪಿ ಅಧ್ಯಕ್ಷ ಬಲರಾಮ್ ಇತರರು ತಾಲೂಕಿಗೆ ಬೇಕಾಗಿರುವ ರೈಲ್ವೆ ಸೌಕರ್ಯಗಳ ಬಗ್ಗೆ ಮನವಿ ಸಲ್ಲಿಸಿ, ಸಕಲೇಶಪುರ, ಹಾಸನ ಮಾರ್ಗವಾಗಿ ತಿರುಪತಿಗೆ ನೇರ ರೈಲು ಸಂಪರ್ಕಿಸುವಂತೆ, ಕಗ್ಗೆರೆ ಸಮೀಪ ತೋಂಟದ ಸಿದ್ದಲಿಂಗೇಶ್ವರ ಸ್ವಾಮಿ ದರ್ಶನಕ್ಕೆ ಅನುಕೂಲವಾಗುವಂತೆ ಮಿನಿ ರೈಲು ನಿಲ್ದಾಣ ನಿರ್ಮಿಸುವಂತೆ, ಬೆಂಗಳೂರು- ಕಾರವಾರ ಪಂಚಗಂಗಾ ಎಕ್ಸ್ ಪ್ರೆಸ್ ರೈಲು ತಾತ್ಕಾಲಿಕವಾಗಿ ಕುಣಿಗಲ್ ನಲ್ಲಿ ನಿಲುಗಡೆ ಮಾಡುತ್ತಿದ್ದು, ಕುಣಿಗಲ್ ನಲ್ಲಿ ರೈಲು ನಿಲುಗಡೆಗೆ ಖಾಯಂ ಸಮಯವಕಾಶ ನೀಡುವಂತೆ, ಕುಣಿಗಲ್ ಪಟ್ಟಣದ ಚಿಕ್ಕ ಕೆರೆ ಏರಿ ಸಮೀಪದಲ್ಲಿ ನಿರ್ಮಾಣವಾಗಿರುವ ರೈಲು ಮೇಲು ಸೇತುವೆ ರಸ್ತೆ ಸಂಪೂರ್ಣ ಹಾನಿಗೊಳಗಾಗಿದ್ದು ಮೇಲು ಸೇತುವೆ ರಸ್ತೆ ದುರಸ್ತಿಗೆ ಮನವಿ ಸಲ್ಲಿಸಿ ಒತ್ತಾಯಿಸಿದರು.
ಮೈತ್ರಿ ಪಕ್ಷದ ಮುಖಂಡರ ಮನವಿ ಸ್ವೀಕರಿಸಿದ ಸಚಿವರು, ಈ ನಿಟ್ಟಿನಲ್ಲಿ ಪೂರಕ ಕ್ರಮ ಕೈಗೊಳ್ಳುವ ಭರವಸೆ ನೀಡಿದರು.
Get real time updates directly on you device, subscribe now.
Prev Post
Next Post
Comments are closed.