ಬರಗೂರು: ಶೈಕ್ಷಣಿಕವಾಗಿ ಅನೇಕ ಏರುಪೇರು ಕಾಣುತ್ತಿದ್ದೇವೆ, ಶಿಕ್ಷಣ ಕೇತ್ರಕ್ಕೂ ರಾಜಕಾರಣಕ್ಕೂ ನಂಟು ಇರಬಾರದಿತ್ತೇನೋ, ಮೂಲಭೂತ ಸಿದ್ಧಾಂತ ಇಟ್ಟುಕೊಂಡು ಶಿಕ್ಷಣ ಕ್ಷೇತ್ರವನ್ನ ಆ ಯೋಜನೆಯಲ್ಲಿ ಯಾರೇ ಸರ್ಕಾರ ಮಾಡಿದರು ಯಾವ ರೀತಿ ಇರಬೇಕು ಎಂಬ ರೋಪುರೇಷೆ ಮಾಡಿದ್ದಾರೆ ಸೂಕ್ತ ಎನಿಸಿತ್ತು, ಬಂದವರು ಪಠ್ಯಕ್ರಮ ಪರೀಕ್ಷೆ ಮಾಡುವುದು ಇದು ಮಕ್ಕಳನ್ನು ಯಾವ ದಿಕ್ಕಿಗೆ ಸಾಗಿಸಿದೆಯೋ ಅರ್ಥವಾಗದ ಸ್ಥಿತಿಯನ್ನು ನಾವೇ ನಿರ್ಮಾಣ ಮಾಡಿದ್ದೇವೆ ಎಂದು ಎಂದು ಸಣ್ಣ ನೀರಾವರಿ ಇಲಾಖೆ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ.ಮಾಧುಸ್ವಾಮಿ ಹೇಳಿದರು.
ಶಿರಾ ತಾಲೂಕು ಹುಲಿಕುಂಟೆ ಹೋಬಳಿ ಬರಗೂರು ಗ್ರಾಾಮದ ಸರ್ಕಾರಿ ಪ್ರೌೌಢಶಾಲೆ ಆವರಣದಲ್ಲಿ ಶುಕ್ರವಾರ ವಿಧಾನ ಪರಿಷತ್ ಸದಸ್ಯ ಚಿದಾನಂದ್ ಎಂ ಗೌಡರ ಸ್ಥಳೀಯ ಪ್ರದೇಶಾಭಿವೃದ್ಧಿ ಯೋಜನೆಯ ದತ್ತು ಸ್ವೀಕಾರ ಕಾರ್ಯಕ್ರಮದಲ್ಲಿ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆಯ 2 ಕೋಟಿ ವೆಚ್ಚದಲ್ಲಿ ನೂತನ ಕಟ್ಟಡದ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದರು.
ಮಕ್ಕಳಿಗೆ ದೊರಕುವ ಶಿಕ್ಷಣ ಯಾವ ಗುರಿ ತಲುಪಿದೆ ಎಂಬುದು ಸಂದಿಗ್ದ ಪರಿಸ್ಥಿತಿ ತಲುಪಿಸಿದೆ, ಗ್ರಾಮೀಣ ವಿದ್ಯಾರ್ಥಿಗಳ ಮೇಲೆ ದೊಡ್ಡ ಹೊಡೆತ ಉಂಟಾಗಿದೆ, ಬರಿ ತಂತ್ರಜ್ಞಾನಕ್ಕೆ ಹೆಚ್ಚು ಒತ್ತು ನೀಡಿ ವಿಜ್ಞಾನ ಕಡಿಮೆ ಮಾಡುತ್ತಿದ್ದೇವೆ ಎಂದರು.
ಶಾಸಕ ಡಾ.ಸಿ.ಎಂ.ರಾಜೇಶ್ ಗೌಡ ಮಾತನಾಡಿ, ಗ್ರಾಮೀಣ ಮಟ್ಟದ ಶಾಲೆಯನ್ನು ಖಾಸಗಿ ಶಾಲೆ ಮಟ್ಟಕ್ಕೆ ಬೆಳೆಯಲಿ ಎಂಬ ಉದ್ದೇಶದಿಂದ ಇಂದು ಶಾಲೆಯನ್ನು ದತ್ತು ಪಡೆದು ಅಭಿವೃದ್ಧಿ ಪಡಿಸಲು ಮುಂದಾಗಿರುವುದು ಒಳ್ಳೆಯ ಬೆಳವಣಿಗೆ, ನೂರಕ್ಕೂ ಹೆಚ್ಚು ಶಾಲೆಗಳಿಗೆ ಕುಡಿಯುವ ನೀರಿನ ವ್ಯವಸ್ಥೆ ಮಾಡಿದ್ದೇನೆ, ಶಿಕ್ಷಣ ಕ್ಷೇತ್ರವೇ ನನಗೆ ಸ್ಪೂರ್ತಿ ನೀಡಿದೆ ಎಂದರು.
ವಿಧಾನ ಪರಿಷತ್ ಸದಸ್ಯ ಚಿದಾನಂದ್ ಎಂ ಗೌಡ ಮಾತನಾಡಿ, ನನ್ನ ಕ್ಷೇತ್ರ ವ್ಯಾಪ್ತಿಯ 32 ತಾಲ್ಲೂಕಿನಲ್ಲೂ ಬಂದೊಂದು ಸರ್ಕಾರಿ ಶಾಲೆ ದತ್ತು ಪಡೆದು ಅಭಿವೃದ್ಧಿ ಪಡಿಸಿ ರಾಜ್ಯಕ್ಕೆ ಮಾದರಿ ಶಾಲೆಗಳನ್ನಾಗಿ ಮಾಡುವೆ, ಸರ್ಕಾರ ನೀಡುವ 2 ಕೋಟಿ ರೂ. ವಿನಿಯೋಗ ಮಾಡುವ ಉದ್ದೇಶದಿಂದ ನಾನು ವ್ಯಾಸಂಗ ಮಾಡಿದ ಬರಗೂರಿನ ಸರ್ಕಾರಿ ಶಾಲೆಯನ್ನು ದತ್ತು ಪಡೆದು ಅಭಿವೃದ್ಧಿ ಪಡೆಸುತ್ತೇನೆ ಎಂದರು.
ಬರಗೂರು ಗ್ರಾಮದ ಬಿ.ಎನ್.ತಿಪ್ಪೇಸ್ವಾಮಿ ಶಾಲೆಯ ಅಭಿವೃದ್ಧಿಗೆ 1 ಲಕ್ಷ ರೂ. ಮತ್ತು ಶಿಕ್ಷಣ ಮತ್ತು ಸುಧಾರಣೆಗಳ ಸಲಹೆಗಾರ ಎಂ.ಆರ್.ದೊರೆಸ್ವಾಮಿ 2 ಲಕ್ಷ ರೂ. ಗಳನ್ನ ಶಾಲೆಗೆ ನೀಡಿದರು.
ಶಿಕ್ಷಣ ಮತ್ತು ಸುಧಾರಣೆಗಳ ಸಲಹೆಗಾರ ಎಂ.ಆರ್.ದೊರೆಸ್ವಾಮಿ, ಎಂಎಲ್ಸಿ ಡಾ.ವೈ.ಎ.ನಾರಾಯಣಸ್ವಾಮಿ, ರೇಷ್ಮೆ ಅಭಿವೃದ್ಧಿ ನಿಗಮ ಮಂಡಳಿಯ ಅಧ್ಯಕ್ಷ ಎಸ್.ಆರ್.ಗೌಡ, ತೆಂಗು ಮತ್ತು ನಾರು ಅಭಿವೃದ್ಧಿ ನಿಗಮ ಮಂಡಳಿಯ ಅಧ್ಯಕ್ಷ ಬಿ.ಕೆ.ಮಂಜುನಾಥ್, ತಹಶೀಲ್ದಾರ್ ಎಂ.ಮಮತ, ಮಧುಗಿರಿ ಶೈಕ್ಷಣಿಕ ಜಿಲ್ಲಾ ಉಪ ನಿರ್ದೇಶಕ ರೇವಣ್ಣಸಿದ್ದಪ್ಪ, ಕ್ಷೇತ್ರ ಶಿಕ್ಷಣಾಧಿಕಾರಿ ಶಂಕರಪ್ಪ, ಸುಬ್ರಮಣ್ಯಸ್ವಾಮಿ, ಬರಗೂರು ಶಿವಕುಮಾರ್, ತಾಪಂ ಉಪಾಧ್ಯಕ್ಷ ರಂಗನಾಥ್ ಗೌಡ, ಗ್ರಾಪಂ ಅಧ್ಯಕ್ಷ ಜಯರಾಮಯ್ಯ, ಉಪಾಧ್ಯಕ್ಷ ಗ್ರಾಪಂ ಸದಸ್ಯರು ಶಾಲೆಯ ಮುಖ್ಯ ಶಿಕ್ಷಕರು, ಎಸ್ಡಿಎಂಸಿ ಅಧ್ಯಕ್ಷ ನಟರಾಜು ಹಾಗೂ ಸದಸ್ಯರು ಪಾಲ್ಗೊಂಡಿದ್ದರು.
Get real time updates directly on you device, subscribe now.
Comments are closed.