ಕುಣಿಗಲ್: ಪಟ್ಟಣದ ವಿವಿಧೆಡೆ ಬುಧವಾರ ದಿಢೀರ್ ಭೇಟಿ ನೀಡಿದ ರಾಜ್ಯ ಆಹಾರ ಆಯೋಗದ ಅಧ್ಯಕ್ಷ ನೇತೃತ್ವದ ತಂಡ ವ್ಯಾಪಕ ಅಕ್ರಮ ಎಸಗಿದ್ದ ಕೃಷಿಇಲಾಖೆ, ಸರ್ಕಾರಿಪ್ರೌಢಶಾಲೆಯ ಅಕ್ಷರ ದಾಸೋಹ ವಿಭಾಗದ ದಾಖಲೆ ವಶಕ್ಕೆ ಪಡೆದ ಘಟನೆ ನಡೆಯಿತು.
ಬುಧವಾರ ಬೆಳಗ್ಗೆ ಆಯೋಗದ ಅದ್ಯಕ್ಷ ಡಾ.ಎಚ್.ಕೃಷ್ಣ, ಕಸಬಾ ರೈತ ಸಂಪರ್ಕ ಕೇಂದ್ರಕ್ಕೆ ಭೇಟಿ ನೀಡಿದಾಗ, ಫ್ರೂಟ್ ಐಡಿ ಮಾಡಿಸಲು ರೈತರನ್ನು ವರ್ಷಗಟ್ಟೆಲೆ ಅಲೆದಾಡಿಸುತ್ತಿರುವುದು ಕಂಡುಬಂತು, ಕೃಷಿ ಇಲಾಖೆಯ ಅಕ್ರಮಗಳ ಬಗ್ಗೆ ರೈತರು ದೂರಿನ ಸರಮಾಲೆಯನ್ನು ಮುಂದಿಟ್ಟರು, ರಾಗಿ, ಭತ್ತ ಇತರೆಬಿತ್ತನೆಬೀಜ ಸಂಗ್ರಹ, ವಿತರಣೆ ಪರಿಶೀಲಿಸಿದಾಗ ತೀವ್ರ ವ್ಯತ್ಯಾಸ ಕಂಡು ಬಂದಿದ್ದು ಸಮರ್ಪಕ ಲೆಕ್ಕ ನೀಡಲು ಕೇಂದ್ರದಸಿಬ್ಬಂದಿ ಲಕ್ಷ್ಮೀ, ಕೃಷಿ ಸಹಾಯಕ ನಿರ್ದೇಶಕ ರಂಗನಾಥ ಪರದಾಡಿದರು. ಇಲಾಖಾ ಕಾರ್ಯನಿರ್ವಹಣೆ ಬಗ್ಗೆ ವ್ಯಾಪಕ ಬೇಸರ ವ್ಯಕ್ತಪಡಿಸಿದ ಅಧ್ಯಕ್ಷರು, ಸದಸ್ಯರು ಅವರಣದಲ್ಲಿನ ಕೊಠಡಿಯಲ್ಲಿ ರೈತರಿಗೆ ವಿತರಿಸದೆ ಹಾಳುಮಾಡಲಾಗಿದ್ದ ನೈಸರ್ಗಿಕ ಗೊಬ್ಬರ, ಪೈಪ್ ಕಂಡು ಬಂದ ಹಿನ್ನೆಲೆಯಲ್ಲಿ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡು ದಾಖಲೆ ವಶಕ್ಕೆ ಪಡೆದರು.
ಪಟ್ಟಣದ ಮಹಾತ್ಮಗಾಂಧಿ ಸರ್ಕಾರಿ ಪ.ಪೂ. ಕಾಲೇಜಿನ ಪ್ರೌಢಾಲೆ ವಿಭಾಗಕ್ಕೆ ಭೇಟಿ ನೀಡಿ, ಬಿಸಿಯೂಟಕ್ಕೆ ಸಂಬಂಧಿಸಿದಂತೆ ಅಡುಗೆ ತಯಾರಿ, ಗೋದಾಮು ಪರಿಶೀಲಿಸಿದ್ದು ಒಟ್ಟು 496 ಮಕ್ಕಳಪೈಕಿ 396 ಮಕ್ಕಳು ಹಾಜರಿದ್ದು, ಮಕ್ಕಳಿಗೆ ತಯಾರಿಸಲಾದ ಸಾಂಬಾರಿನಲ್ಲಿ ಬೆರೆಳೆಣಿಕೆಯಷ್ಟು ತರಕಾರಿ ಇರದಬಗ್ಗೆ ಅಡುಗೆಉಸ್ತುವಾರಿ ಸಿಬ್ಬಂದಿ ತರಾಟೆಗೆ ತೆಗೆದುಕೊಂಡು, ಗೋದಾಮಿನ ಸಂಗ್ರಹ ದಾಖಲೆ ಪರಿಶೀಲಿಸಿದಾಗ ದವಸಧಾನ್ಯ ಸರಬರಾಜಿಗೂ ಖರ್ಚುಮಾಡಿರುವುದಕ್ಕೂ ತಾಳೆಯಾಗದಿರುವ ಕಾರಣ ಅಕ್ಷರ ದಾಸೊಹ ಸಹಾಯಕ ನಿರ್ದೇಶಕ ಚಿಂದಾನಂದ ಅವರನ್ನು ತರಾಟೆಗೆ ತೆಗೆದುಕೊಂಡರಲ್ಲದೆ ಸಮರ್ಪಕ ತಪಾಸಣೆ ಮಾಡದೆ ನಿರ್ಲಕ್ಷ್ಯ ವಹಸಿದ್ದರಿಂದಲೆ ಈ ಅವ್ಯವಸ್ಥೆ ಎಂದರಲ್ಲದೆ ಸಮರ್ಪಕ ದಾಖಲೆ ನಿರ್ವಹಣೆ ಮಾಡದೆ, ಶಾಲೆಯ 8 ಎವಿಭಾಗದ 54 ಮಕ್ಕಳ ಹಾಜರಾತಿ ಪುಸ್ತಕ ಸರಿಯಾಗಿ ನಿರ್ವಹಣೆ ಮಾಡದ ಬಗ್ಗೆ ಆಕ್ಷೇಪಿಸಿ ಹಾಜರಾತಿ ಪುಸ್ತಕವನ್ನು ವಶಕ್ಕೆ ಪಡೆದರು.
ಶಾಲೆ ಪ್ರಾರಂಭವಾಗಿ ಎರಡು ತಿಂಗಳಾದರೂ ಆಂಗ್ಲ ಶಿಕ್ಷಕರಿಲ್ಲದ ಬಗ್ಗೆ ಮೇಲಾಧಿಕಾರಿಗಳಿಗೆ ಪತ್ರಬರೆದಿರುವ ಬಗ್ಗೆ ಪ್ರಸ್ತಾಪಿಸಿದಾಗ, ಮುಖ್ಯ ಶಿಕ್ಷಕಿ ತೇಜೋವತಿ ಯಾವುದೇ ಉತ್ತರ ನೀಡದ ಬಗ್ಗೆ ಅಸಮಧಾನ ವ್ಯಕ್ತಪಡಿಸಿ ಬಿ ಆರ್ ಸಿ ಶ್ರೀನಿವಾಸ್ ಅವರನ್ನು ತರಾಟೆಗೆ ತೆಗೆದುಕೊಂಡು, ಶಾಲೆಯ ಬಿಸಿಯೂಟ ಯೋಜನೆಯಲ್ಲಿ ವ್ಯಾಪಕ ಅಕ್ರಮ ಕಂಡು ಬರುತ್ತಿದ್ದು ಹೆಚ್ಚುವರಿಯಾಗಿ ಅಕ್ಕಿ ಸಂಗ್ರಹವಾಗಿದೆ, ಇದನ್ನು ಪರಿಶೀಲಿಸದೆ ಇದ್ದರೆ ಕಾಳಸಂತೆಯಲ್ಲಿ ಮಾರಾಟ ಮಾಡುತ್ತಾರೆ ಇದು ಇವರ ಕೆಲಸ, ಸರ್ಕಾರ ಬಡಮಕ್ಕಳಿಗೆ ನೀಡುವ ಅಹಾರವನ್ನು ಸರಿಯಾಗಿ ನೀಡದೆ ವಂಚನೆಮಾಡುತ್ತಿರುವವರ ಮೇಲೆ ಕ್ರಮವಾಗಲೇಬೇಕು ಎಂದರು.
ಅಧ್ಯಕ್ಷರ ತಂಡದಲ್ಲಿ ಆಯೋಗದ ಸದಸ್ಯರಾದ ಲಿಂಗರಾಜು ಕೋಟಾ, ಸುಮಂತರಾವ್, ಮಾರುತಿ ಎಂ.ದೊಡ್ಡಲಿಂಗಣ್ಣ, ವಿಜಯಲಕ್ಷ್ಮೀ, ರೋಹಿಣಿ ಪ್ರಿಯಾ ಉಪಸ್ಥಿತರಿದ್ದು, ತಹಶೀಲ್ದಾರ್ ವಿಶ್ವನಾಥ್ ಸೇರಿದಂತೆ ಜಿಲ್ಲಾ, ತಾಲೂಕು ಮಟ್ಟದ ಅಧಿಕಾರಿಗಳು ಹಾಜದ್ದರು.
Comments are closed.