ಹಣ ಕಳೆದುಕೊಂಡವರ ಪರದಾಟ

ಆನ್ ಲೈನ್ ದೋಖಾ- 5 ಕೋಟಿಯಷ್ಟು ವಂಚನೆ

16

Get real time updates directly on you device, subscribe now.


ಗುಬ್ಬಿ: ತಾಲೂಕಿನ ಕಲ್ಲೂರಿನಲ್ಲಿ ದೊಡ್ಡ ಮಟ್ಟದಲ್ಲಿ ಆನ್ ಲೈನ್ ದೋಖಾ ನಡೆದಿದೆ ನಾಲ್ಕು ಕೋಟಿಯಿಂದ ಸುಮಾರು 5 ಕೋಟಿವರೆಗೆ ವಂಚನೆ ಆಗಿರುವಂತಹ ಘಟನೆ ನಡೆದಿದೆ.
ಕೇವಲ ಮೂರು ರಿಂದ ನಾಲ್ಕು ತಿಂಗಳ ಅವಧಿಯ ಅಂತರದಲ್ಲಿ ಈ ವಹಿವಾಟು ನಡೆದಿದೆ, ಬೆಂಗಳೂರಿನ ವ್ಯಕ್ತಿ ಒಬ್ಬನಿಂದ ಕಲ್ಲೂರು ಗ್ರಾಮಕ್ಕೆ ಡಾಟಾ ಮಿರ್ ಎಐ ಎಂಬ ಆಪ್ ನೊಂದಿಗೆ ಆರಂಭವಾಗಿರುವ ಈ ಒಂದು ಆನ್ ಲೈನ್ ಹಣದ ದೋಖಾ ದೊಡ್ಡ ಮಟ್ಟದಲ್ಲಿ ಹಣವನ್ನು ಪೀಕುವ ದಂಧೆಯಾಗಿ ನಿರ್ಮಾಣವಾಗಿ ಕಲ್ಲೂರು ಗ್ರಾಮದ 500 ಕ್ಕೂ ಹೆಚ್ಚು ಜನರು ಇದಕ್ಕೆ ಬಲಿಯಾಗಿರುವ ಘಟನೆ ನಡೆದಿದೆ, 300 ರೂಪಾಯಿ ಹಣದಿಂದ ಹಿಡಿದು ಮೂರು ಲಕ್ಷದ ವರೆಗೆ ಹಣ ಕಳೆದುಕೊಂಡಿದ್ದಾರೆ.

ಮೊದ ಮೊದಲಿಗೆ ಹಣ ಸಹ ಪಡೆದಿರುವ ಕಲ್ಲೂರಿನ ಜನತೆ ಚಿಕ್ಕ ಹಣ ಹಾಕಿದಾಗ ದೊಡ್ಡಮಟ್ಟದ ಹಣ ಪಡೆದಿದ್ದಾರೆ, ದೊಡ್ಡ ಮಟ್ಟದ ಹಣ ಹಾಕಿದಾಗ ಇರುವುದನ್ನು ಕಳೆದುಕೊಂಡು ಬೀದಿಗೆ ಬೀಳುವ ಸ್ಥಿತಿ ನಿರ್ಮಾಣವಾಗಿದ್ದು ಶುಕ್ರವಾರ ಸರದಿ ಸಾಲಿನಲ್ಲಿ ಸಿ.ಎಸ್.ಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲು ಕಲ್ಲೂರು ಜನತೆ ನಿಂತಿದ್ದರು.
ಸ್ಥಳಕ್ಕೆ ಡಿವೈಎಸ್ ಪಿ ಶೇಖರ್ ಸಹ ಭೇಟಿ ನೀಡಿ ಆನ್ ಲೈನ್ ಮೂಲಕ ಹಣವನ್ನು ಸಾಕಷ್ಟು ಜನ ಕಳೆದುಕೊಂಡಿರುವ ಮಾಹಿತಿ ಬಂದಿದ್ದು ತನಿಖೆ ಮಾಡಲಾಗುತ್ತದೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಹಣ ಕಳೆದುಕೊಂಡವರು ಮಾತನಾಡಿ, ಕಲ್ಲೂರಿನ ಬಹುತೇಕ ಜನರು ಇದರಲ್ಲಿ ಭಾಗಿಯಾಗಿದ್ದು ಒಡವೆ ಸಹ ಅಡ ಇಟ್ಟು ಹಣ ಹಾಕಿದ್ದಾರೆ, ತಮ್ಮ ಸಮಸ್ಯೆ ಬಗೆಹರಿಸಿಕೊಳ್ಳಲು ಒಂದು ಕಡೆಯಾದರೆ ಹಣ ದುಪ್ಪಟ್ಟು ಮಾಡಬಹುದು ಎಂಬ ಆಸೆಯಿಂದ ಬಲಿಯಾಗಿದ್ದಾರೆ, ಮೊದ ಮೊದಲಿಗೆ ಹಣ ನೀಡಿದ ಈ ಆನ್ ಲೈನ್ ಸಂಸ್ಥೆ ಏಕಾಏಕಿ ಗುರುವಾರದಿಂದ ಎಲ್ಲವನ್ನೂ ಬ್ಲಾಕ್ ಮಾಡಿಕೊಂಡಿದ್ದು ಹಣ ಹಾಕಿದವರು ತಲೆ ಮೇಲೆ ಕೈ ಹೊತ್ತು ಕೂರುವಂತಾಗಿದೆ ಎಂದು ಬೇಸರವನ್ನು ವ್ಯಕ್ತಪಡಿಸಿದರು.

Get real time updates directly on you device, subscribe now.

Comments are closed.

error: Content is protected !!