ಕುಣಿಗಲ್: ಡೆಂಗ್ಯೂ ನಿಯಂತ್ರಣೆ ನಿಟ್ಟಿನಲ್ಲಿ ಗ್ರಾಮಸ್ಥರ ಸಹಕಾರ ಅತ್ಯಗತ್ಯ, ಡೆಂಗ್ಯೂ ಬಗ್ಗೆ ಭಯ ಬೇಡ ಅಗತ್ಯ ಅರಿವು ಹೊಂದ ಬೇಕೆಂದು ಯಡೆಯೂರು ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಚಂದ್ರಹಾಸ್ ಹೇಳಿದರು.
ಶುಕ್ರವಾರ ಯಡಿಯೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ದೊಡ್ಡ ಮಧುರೆ ಗ್ರಾಮದ ಸರ್ಕಾರಿ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಡೆಂಗ್ಯೂ ಅರಿವಿನ ಬಗ್ಗೆ ಮಾಹಿತಿ ನೀಡಿ ಮಾತನಾಡಿ, ಮಳೆಗಾಲದಲ್ಲಿ ಮಳೆ ನೀರು ಮನೆ, ಶಾಲೆ ಸೇರಿದಂತೆ ಜನವಸತಿ ಪ್ರದೇಶದ ಬಳಿ ಸಂಗ್ರಹವಾಗುವುದರಿಂದ ಸೊಳ್ಳೆ ಉತ್ಪಾದನೆಗೆ ಸಹಕಾರಿಯಾಗುತ್ತದೆ, ಡೆಂಗ್ಯೂ ಹರಡುವ ಸೊಳ್ಳೆಗಳ ಜಾತಿಯು ಸಿಹಿ ನೀರಿನಲ್ಲಿ ಉತ್ಪತ್ತಿ ಆಗುವ ಕಾರಣ ಮಳೆನೀರು ಮನೆ ಸುತ್ತಮುತ್ತಲ ಹೂವಿನ ಕುಂಡ, ಇತರೆಡೆಗಳಲ್ಲಿ ಸಂಗ್ರಹವಾಗದಂತೆ ಎಚ್ಚರ ವಹಿಸಬೇಕು, ಜ್ವರ ಬಂದಲ್ಲಿ ನಿರ್ಲಕ್ಷ್ಯ ಮಾಡದೆ ಸಮೀಪದ ಅರೋಗ್ಯ ಕೇಂದ್ರದಲ್ಲಿ ಸೂಕ್ತ ಚಿಕಿತ್ಸೆ ಪಡೆಯಬೇಕು, ವಿವಿಧ ಗ್ರಾಮಗಳಿಂದ ಬರುವ ಮಕ್ಕಳು ಶಾಲೆಯಲ್ಲಿ ಡೆಂಗ್ಯೂ ಸೇರಿದಂತೆ ಸೊಳ್ಳೆ ನಿಯಂತ್ರಣಕ್ಕೆ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಅರಿವು ಹೊಂದಿ ಪೋಷಕರು ಸೇರಿದಂತೆ ನಿಮ್ಮ ಮನೆ ಸುತ್ತಮುತ್ತಲಿನ ಜನರಲ್ಲಿ ಅರಿವು ಮೂಡಿಸಬೇಕು, ಶಾಲೆಗಳಲ್ಲಿ ಶಿಕ್ಷಕರು, ಸಮುದಾಯ ದಲ್ಲಿ ಆರೊಗ್ಯ ಇಲಾಖೆ ಸಿಬ್ಬಂದಿ ಡೆಂಗ್ಯೂ ಜ್ವರದ ಬಗ್ಗೆ ಅರಿವು ಉಂಟು ಮಾಡುವ ಬಗ್ಗೆ ಜಾಗೃತಿ ಮೂಡಿಸುವ ಮೂಲಕ ಡೆಂಗ್ಯೂ ಜ್ವರನಿಯಂತ್ರಣಕ್ಕೆ ಎಲ್ಲರೂ ಸಂಘಟಿತರಾಗಿ ಶ್ರಮಿಸಬೇಕಿದೆ ಎಂದರು.
ಗ್ರಾಪಂ ಅಧ್ಯಕ್ಷೆ ಮಲ್ಲಿಗಮ್ಮ, ಸದಸ್ಯರಾದ ಕೃಷ್ಣಮೂರ್ತಿ, ದೀಪು ಇತರರು ಇದ್ದರು, ಇದೇ ಸಂದರ್ಭದಲ್ಲಿ ಗ್ರಾಪಂ ವ್ಯಾಪ್ತಿಯ ವಿವಿಧೆಡೆಯಲ್ಲಿ ಫಾಗಿಂಗ್ ಸೇರಿದಂತೆ ಸೊಳ್ಳೆ ನಿಯಂತ್ರಣ ಕಾರ್ಯಕ್ರಮಕ್ಕೆ ಗ್ರಾಪಂ ಅಧ್ಯಕ್ಷರು ಚಾಲನೆ ನೀಡಿದರು.
Comments are closed.