ಸೈನಿಕರನ್ನು ಗೌರವಿಸುವುದು ಎಲ್ಲರ ಕರ್ತವ್ಯ

23

Get real time updates directly on you device, subscribe now.


ತುಮಕೂರು: ಭಾರತೀಯರು ಎಂದು ಮರೆಯದ ಅವಿಸ್ಮರಣೀಯ ದಿನಗಳಲ್ಲಿ ಜುಲೈ 26 ಕೂಡ ಬಹು ಮುಖ್ಯ ದಿನವಾಗಿದೆ, ಹಾಗೂ ಭಾರತೀಯ ಪ್ರತಿಯೊಬ್ಬ ಪ್ರಜೆಯ ಮನಸ್ಸಿನಲ್ಲಿ ಅಚ್ಚಳಿಯದ ಉಳಿದಿದೆ ಎಂದು ವಿದ್ಯಾವಾಹಿನಿ ಸಮೂಹ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಎನ್.ಬಿ.ಪ್ರದೀಪ್ ಕುಮಾರ್ತಿಳಿಸಿದರು.

ನಗರದ ಪ್ರತಿಷ್ಠಿತ ವಿದ್ಯಾನಿಧಿ ಕಾಲೇಜಿನಲ್ಲಿ ಮಾಜಿ ಸೈನಿಕರ ಗೌರವ ಸಮರ್ಪಣೆ ಕಾರ್ಯಕ್ರಮದಲ್ಲಿ ಮಾಜಿ ಸೈನಿಕರನ್ನು ಸನ್ಮಾನಿಸಿ ಮಾತನಾಡಿ, ದೇಶಕ್ಕಾಗಿ ಜೀವನ ಮುಡುಪಿಟ್ಟ ಯೋಧರನ್ನು ಸ್ಮರಿಸುವ ಹಾಗೂ ಗೌರವಿಸುವುದು ನಮ್ಮೆಲ್ಲ ಭಾರತೀಯರ ಹೆಮ್ಮೆ ಮತ್ತು ಕರ್ತವ್ಯವಾಗಿದೆ, ಅದರಂತೆ 26 ಜುಲೈ1999 ಯುದ್ಧದ ವಿಜಯೋತ್ಸವದ ನೆನಪಿಗಾಗಿ ಕಾರ್ಗಿಲ್ ವಿಜಯ್ ದಿವಸ್ ಆಚರಿಸುತ್ತಾ ಬಂದಿದ್ದೇವೆ, ಇತ್ತೀಚಿನ ದಿನಗಳಲ್ಲಿ ವೈದ್ಯಕೀಯ ಹಾಗೂ ಇಂಜಿನಿಯರ್ ಕ್ಷೇತ್ರಗಳಿಗಷ್ಟೇ ವಿದ್ಯಾರ್ಥಿಗಳ ಆಸಕ್ತಿ ಕಂಡು ಬರುತ್ತದೆ, ಆದರೆ ಸೇನೆಗೆ ಸೇರುವ ಆಕಾಂಕ್ಷೆಯನ್ನು ಯುವಕರು ಬೆಳೆಸಿಕೊಳ್ಳಬೇಕೆಂದು ಸಂದೇಶ ನೀಡಿ, ಪ್ರಸ್ತುತ ದಿನಗಳಲ್ಲಿ ಹೆಣ್ಣುಮಕ್ಕಳಿಗೂ ಆದ್ಯತೆ ಇರುವುದು ಹೆಮ್ಮೆಯ ವಿಚಾರವಾಗಿದ್ದು, ಯುವತಿಯರೂ ಈ ನಿಟ್ಟಿನಲ್ಲಿ ರಾಷ್ಟ್ರಕ್ಕೆ ತಮ್ಮದೇ ಆದ ಕೊಡುಗೆ ಕೊಡಲು ಸಿದ್ಧರಾಗಿರಿ ಎಂದು ವಿದ್ಯಾರ್ಥಿಗಳಿಗೆ ತಿಳಿಸಿದರು.

ಮಾಜಿ ಸೈನಿಕ ರಘು ಜಯರಾಮ್ ನಾಯಕ್ ಕೊಂಡ್ಲಿ ಮಾತನಾಡಿ, ಶಿಕ್ಷಣ ಸಂಸ್ಥೆಗಳು ಕೇವಲ ಒಂದೇ ಕ್ಷೇತ್ರಕ್ಕೆ ವಿದ್ಯಾರ್ಥಿಗಳನ್ನು ಸೀಮಿತಗೊಳಿಸದೆ, ನಾನಾ ಕ್ಷೇತ್ರಗಳಲ್ಲಿಯೂ ವಿದ್ಯಾರ್ಥಿಗಳನ್ನು ಬೆಳೆಸಬೇಕೆಂದು ತಿಳಿಸಿ ಆ ಮೂಲಕ ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸುವಂತೆ ಪ್ರೋತ್ಸಾಹಿಸಬೇಕು, ಆ ನಿಟ್ಟಿನಲ್ಲಿಎಲ್ಲಾ ಯುವಕರು ಜಾಗೃತರಾರಗಬೇಕೆಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಮಾಜಿ ಸೈನಿಕರಾದ ದೆಶವಂತ್ ಕುಮಾರ್.ಸಿ, ರಾಮಚಂದ್ರ ಬಿ ಚೌಹಾಣ್, ಚಿಕ್ಕಲಿಂಗೇಗೌಡ, ರಮೇಶ ವರ್ಧನ್ , ವರದರಾಜು.ಎಚ್, ರಘು ಜಯರಾಮ ಕೊಂಡ್ಲಿ ಇವರನ್ನು ಸನ್ಮಾನಿಸಲಾಯಿತು.

ಕಾರ್ಯಕ್ರಮದಲ್ಲಿ ವಿದ್ಯಾವಾಹಿನಿ ಸಮೂಹ ಸಂಸ್ಥೆಗಳ ನಿರ್ದೇಶಕಿ ನಾಗಪ್ರಿಯ.ಕೆ.ಜಿ, ವಿದ್ಯಾನಿಧಿ ಪದವಿ ಪೂರ್ವ ಕಾಲೆಜಿನ ಪ್ರಾಂಶುಪಾಲ ಸಿದ್ದೇಶ್ವರ ಸ್ವಾಮಿ.ಎಸ್.ಆರ್, ಉಪ ಪ್ರಾಂಶುಪಾಲ ವೇದಮೂರ್ತಿ, ಉಪನ್ಯಾಸಕಿ ಪೂರ್ಣಗಂಗಾ, ಸಿಂಧು ಇತರರು ಹಾಜರಿದ್ದರು.

Get real time updates directly on you device, subscribe now.

Comments are closed.

error: Content is protected !!