ಕೊಡಿಗೇನಹಳ್ಳಿ: ಕಂಬಿ ಕೆಲಸ ಮಾಡುವ ನೆಪದಲ್ಲಿ ಗಾಂಜಾ ಮಾರಾಟ ಮಾಡುತಿದ್ದ ಖಚಿತ ಮಾಹಿತಿ ಮೇಗರೆ ಒರಿಸ್ಸಾ ಮೂಲದ ವ್ಯಕ್ತಿಯಿಂದ ಸುಮಾರು 64 ಸಾವಿರ ಮೌಲ್ಯದ ಗಾಂಜಾ ಪ್ಯಾಕೇಟ್ ಗಳನ್ನು ಕೊಡಿಗೇನಹಳ್ಳಿ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಮಧುಗಿರಿ ತಾಲೂಕಿನ ಗಡಿಭಾಗದ ತಿಂಗಳೂರು- ಚಂದನದೂರು ರಸ್ತೆಯಲ್ಲಿ ಗಾಂಜಾ ಮಾರಾಟ ಮಾಡಲು ಯತ್ನಿಸುತ್ತಿದ್ದ ಒರಿಸ್ಸಾ ರಾಜ್ಯದ ಗಾಂಜಾಮ್ ಜಿಲ್ಲೆಯ ಬಬ್ಬನಪುರ ಗ್ರಾಮದ ಶಂಕರ್ ಸ್ವಾಯಿನ್ ಬಿನ್ ಬಿಸ್ವಂತ್ ಸ್ವಾಯಿನ್ (34) ನನ್ನು ವಶಕ್ಕೆ ಪಡೆದಿದ್ದು ಸುಮಾರು 64 ಸಾವಿರ ಮೌಲ್ಯದ 1 ಕೆಜಿ 400 ಗ್ರಾಮ ಗಾಂಜಾ ಪಾಕೆಟ್ ಗಳನ್ನು ವಶಕ್ಕೆ ಪಡೆದಿದ್ದಾರೆ.
ಆರೋಪಿಯು ಆಂಧ್ರಪ್ರದೇಶದ ಹಿಂದೂಪುರದಲ್ಲಿ ಕಂಬಿ ಫ್ಯಾಕ್ಟರಿಯಲ್ಲಿ ಕೆಲಸ ಮಾಡುತಿದ್ದು ಹಿಂದೂಪುರ, ಗೌರಿಬಿದನೂರು, ಹಾಗೂ ಮಧುಗಿರಿ ತಾಲೂಕಿನ ವ್ಯಾಪ್ತಿಯಲ್ಲಿ ಗಾಂಜಾ ಸರಬರಾಜು ಮಾಡುವ ವೃತ್ತಿಯಲ್ಲಿ ತೊಡಗಿದ್ದ ಎಂದು ತಿಳಿದು ಬಂದಿದೆ.
ಡಿವೈಎಸ್ಪಿ ರಾಮಚಂದ್ರಪ್ಪ ಸಿಪಿಐ ಹನುಮಂತರಾಯಪ್ಪ, ಮಾರ್ಗದರ್ಶನದಲ್ಲಿ ಪಿಎಸೈ ಶ್ರೀನಿವಾಸ್ ಪ್ರಸಾದ್, ಪೇದೆಗಳಾದ ಮಂಜುನಾಥ್, ನರಸಿಂಹ ಮೂರ್ತಿ, ಪಾಂಡು ರಂಗರಾವ್ ತಂಡ ದಾಳಿ ಮಾಡಿದ್ದು ಈ ಬಗ್ಗೆ ಕೊಡಿಗೇನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ, ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
1.4 ಕೆಜಿ ಗಾಂಜಾ ಸಹಿತ ಆರೋಪಿ ವಶಕ್ಕೆ
Get real time updates directly on you device, subscribe now.
Prev Post
Comments are closed.