ಪದವಿಯೊಂದಿಗೆ ಉದ್ಯೋಗ ಕಲ್ಪಿಸುವುದು ಮುಖ್ಯ

22

Get real time updates directly on you device, subscribe now.


ತುಮಕೂರು: ನಗರದ ವಿ- ಟೆಕ್ನೋ ವಿ-ಟೆಕ್ ಸಲ್ಯೂಷನ್ಸ್ ನಲ್ಲಿ ಎಂಸಿಎ ವಿಭಾಗವು ಪ್ರತಿಷ್ಟಿತ ಕಂಪನಿಗಳಲ್ಲೊಂದಾದ ಈಜೀ ವೆಂಚರ್ಸ್ ಕಂಪನಿಯ ಸಹಯೋಗದೊಂದಿಗೆ ಪೂಲ್ ಕ್ಯಾಂಪಸ್ ಡ್ರೈವ್ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ವಿವಿಧ ಅಂತರ ಕಾಲೇಜುಗಳಿಂದ ಸುಮಾರು 260ಕ್ಕೂ ಹೆಚ್ಚು ವಿದ್ಯಾರ್ಥಿಗಳು ಭಾಗವಹಿಸಿದ್ದರು, ಈ ಕ್ಯಾಂಪಸ್ ಡ್ರೈವ್ ನಲ್ಲಿ ಹಲವು ಹಂತಗಳಲ್ಲಿ ಆಯ್ಕೆಯಾಗಿ 72 ವಿದ್ಯಾರ್ಥಿಗಳು ಅಂತಿಮ ಸಂದರ್ಶನಕ್ಕೆ ಶಾರ್ಟ್ ಲೀಸ್ಟ್ ಗೆ ಆಯ್ಕೆಯಾಗಿದ್ದಾರೆ.

ಈ ಕಾರ್ಯಕ್ರಮ ಕುರಿತು ಮಾತನಾಡಿದ ವಿದ್ಯಾವಾಹಿನಿ ಸಮೂಹ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಎನ್.ಬಿ.ಪ್ರದೀಪ್ ಕುಮಾರ್, ಪದವಿಯ ನಂತರ ವಿದ್ಯಾರ್ಥಿಗಳಿಗೆ ಅವಶ್ಯಕವಾಗಿರುವುದು ಉದ್ಯೋಗವಾಗಿರುತ್ತದೆ, ಆ ವಿದ್ಯಾರ್ಥಿಗಳು ಪದವಿಯೊಂದಿಗೆ ಉದ್ಯೋಗ ಪಡೆಯುವ ಅವಕಾಶ ಕಲ್ಪಿಸುವುದು ನಮ್ಮ ಗುರಿಯಾದ್ದರಿಂದ ಈ ರೀತಿಯ ಕ್ಯಾಂಪಸ್ ಡ್ರೈವ್ ಆಯೋಜಿಸಲಾಗುತ್ತದೆ, ಅದರಲ್ಲೂ ಹಲವು ಕಾಲೇಜು ವಿದ್ಯಾರ್ಥಿಗಳು ಈ ಅವಕಾಶ ಪಡೆಯಲು ಸದುಪಯೋಗವಾಗಲು ಈ ರೀತಿಯ ಕ್ಯಾಂಪಸ್ ಡೈವ್ ಸಹಕಾರಿ, ನಮ್ಮ ವಿದ್ಯಾರ್ಥಿಗಳೊಂದಿಗೆ ಅಂತರ ಕಾಲೇಜು ವಿದ್ಯಾರ್ಥಿಗಳು ಇಲ್ಲಿ ಭಾಗವಹಿಸಿ 72 ವಿದ್ಯಾರ್ಥಿಗಳು ಶಾರ್ಟ್ ಲಿಸ್ಟ್ ನಲ್ಲಿ ಆಯ್ಕೆಯಾಗಿರುವುದು ಶ್ಲಾಘನೀಯ ಎಂದು ಹರ್ಷಿಸಿದರು.

ಇದೇ ಸಂದರ್ಭದಲ್ಲಿ ಈಜೀ ವೆಂಚರ್ಸ್ ಕಂಪನಿ ಪೌಂಡರ್ ಸಂತೋಷ್ ಮಾತನಾಡಿ, ನಮ್ಮ ಕಂಪನಿ, ವಿದ್ಯಾರ್ಥಿಗಳಿಗೆ ಹೆಚ್ಚು ಹೆಚ್ಚು ಉದ್ಯೋಗ ಅವಕಾಶ ಕಲ್ಪಿಸುತ್ತಿದೆ, ವಿದ್ಯಾರ್ಥಿಗಳು ಒಂದು ತಾಂತ್ರಿಕ ಕಂಪನಿಯಲ್ಲಿ ಉದ್ಯೋಗ ಪಡೆಯಲು ಟೆಕ್ನಿಕಲ್ ಜ್ಞಾನ ಮತ್ತು ಇಂಗ್ಲಿಷ್ ಸಂವಹನ ತುಂಬಾ ಅವಶ್ಯಕವಿದೆ, ವಿದ್ಯಾರ್ಥಿಗಳು ಇದರ ಜ್ಞಾನ ರೂಢಿಸಿಕೊಳ್ಳಿ ಮತ್ತು ತುಮಕೂರು ನಗರ ಪ್ರದೇಶದಲ್ಲಿನ ವಿದ್ಯಾರ್ಥಿಗಳು ಉದ್ಯೋಗದಲ್ಲಿ ಶ್ರಮಿಸುವಂತಹವರು ಎಂದು ಪ್ರಶಂಸಿಸಿದರು.
ಈ ಸಂದರ್ಭದಲ್ಲಿ ವಿ-ಟೆಕ್ನೋ ವಿಟೆಕ್ ಸಲ್ಯೂಷನ್ಸ್ ನ ಮುಖ್ಯಸ್ಥ ಮಧುಪ್ರಿಯ, ಶಿವಕುಮಾರ್, ಆಶೀಷ್ ಪಟಕ್ ಇದ್ದರು.

Get real time updates directly on you device, subscribe now.

Comments are closed.

error: Content is protected !!