ಕಾಗದ ರಹಿತ ಸೇವೆಗೆ ವಿವಿ ಮುಂದಾಗಬೇಕಿದೆ

44

Get real time updates directly on you device, subscribe now.


ತುಮಕೂರು: ಸಾಫ್ಟ್ ವೇರ್ ಕ್ಷೇತ್ರದಿಂದಾಗಿ ಫೋನ್ ಬ್ಯಾಂಕಿಂಗ್, ಆನ್ ಲೈನ್ ಪೇಮೆಂಟ್ ವ್ಯವಸ್ಥೆ ಸರ್ವರಿಗೂ ಸುಲಭವಾಯಿತು, ಅದೇ ರೀತಿ ವಿವಿಯಲ್ಲಿನ ಶೈಕ್ಷಣಿಕ, ಆಡಳಿತ ಹಾಗೂ ಹಣಕಾಸು ಘಟಕಗಳ ನಿಖರ ನಿರ್ವಹಣೆಗಾಗಿ ಇ-ಆಫೀಸ್ ತಂತ್ರಾಂಶ ಇಂದಿನ ಅಗತ್ಯ ಎಂದು ಕುಲಪತಿ ಪ್ರೊ.ಎಂ.ವೆಂಕಟೇಶ್ವರಲು ಹೇಳಿದರು.

ತುಮಕೂರು ವಿಶ್ವ ವಿದ್ಯಾಲಯ ಮಂಗಳವಾರ ಆಯೋಜಿಸಿದ್ದ ಎರಡು ದಿನಗಳ ಇ-ಆಫೀಸ್ ತಂತ್ರಾಂಶದ ಪ್ರಾಯೋಗಿಕ ತರಬೇತಿ ಕಾರ್ಯಾಗಾರದ ಉದ್ಘಾಟನೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಇಲ್ಲಿಯವರೆಗೂ ಚಾಲ್ತಿಯಲ್ಲಿರುವ ಸಾಂಪ್ರದಾಯಿಕ ವಿಧಾನಗಳನ್ನು ಬದಿಗಿಟ್ಟು, ಕಾಗದ ರಹಿತ ಸೇವೆಗೆ ವಿವಿಯು ಮುಂದಾಗಬೇಕು, ಸುಧಾರಿತ ತಂತ್ರಜ್ಞಾನದ ಬಳಕೆಯಿಂದ ಸಂಪಾದಿಸಿದ ಮಾಹಿತಿಯನ್ನು ಸುದೀರ್ಘ ಕಾಲ ಸಂರಕ್ಷಿಸಬಹುದು, ವಿದ್ಯಾರ್ಥಿ ಸ್ನೇಹಿ ವಿಶ್ವ ವಿದ್ಯಾಲಯವನ್ನು ಪೋಷಕರು ಬಯಸುತ್ತಾರೆ ಎಂದು ಹೇಳಿದರು.

ವಿಶ್ವ ವಿದ್ಯಾಲಯಗಳ ಮಟ್ಟದಲ್ಲಿಉತ್ಪತ್ತಿಯಾಗುತ್ತಿರುವ ಜ್ಞಾನದಿಂದ ಜಗತ್ತಿನಲ್ಲಿ ಉತ್ಕೃಷ್ಟ ಮಟ್ಟದ ಆವಿಷ್ಕಾರಗಳಾಗುತ್ತಿದ್ದರೂ, ವಿಶ್ವವಿದ್ಯಾಲಯ ನಿರ್ವಹಣೆಯ ಮಟ್ಟದಲ್ಲೂ ಅನುಷ್ಠಾನವಾಗದಿರುವುದು ಬೇಸರ ತಂದಿದೆ ಎಂದರು.
ಪರೀಕ್ಷಾಂಗ ಕುಲಸಚಿವ ಪ್ರೊ.ಪ್ರಸನ್ನ ಕುಮಾರ್.ಕೆ. ಮಾತನಾಡಿ, ಮುಂದುವರಿದ ತಂತ್ರಜ್ಞಾನ ಯುಗದಲ್ಲಿದ್ದೇವೆ, ಬದಲಾವಣೆಗೆ ಒಗ್ಗಿಕೊಳ್ಳುವ ಮನೋಭಾವ ವಿವಿಯ ಸಿಬ್ಬಂದಿಯಲ್ಲಿ ಬರಬೇಕು, ನವೀಕರಿಸಿದ ವಿಧಾನಗಳನ್ನು ಅಳವಡಿಸಿಕೊಂಡು, ಕಾಗದ ರಹಿತ ಸೇವೆ ಆರಂಭಿಸಲು ಈ ಕಾರ್ಯಾಗಾರ ಸಹಕಾರಿಯಾಗಲಿದೆ ಎಂದರು.

ಜಿಲ್ಲಾ ತರಬೇತಿ ಸಂಸ್ಥೆಯ ಪ್ರಾಂಶುಪಾಲ ವಿಶ್ವಾಸ್.ಕೆ. ಕಾರ್ಯಾಗಾರ ಉದ್ಘಾಟಿಸಿದರು, ಇ-ಆಫೀಸ್ ತಂತ್ರಾಂಶದ ಪ್ರಾಯೋಗಿಕ ತರಬೇತುದಾರ ಮಧು.ಜೆ. ಇ-ಆಫೀಸ್ ತಂತ್ರಾಂಶದ ಕುರಿತು ತರಬೇತಿ ನೀಡಿದರು, ವಿವಿ ಕುಲಸಚಿವೆ ನಾಹಿದಾ ಜಮ್ ಜಮ್, ಇ- ಆಫೀಸ್ ತಂತ್ರಾಂಶದ ನೋಡಲ್ ಅಧಿಕಾರಿ ಸಂತೋಷ್ ಅಕ್ಕಿ ಹಾಜರಿದ್ದರು.

Get real time updates directly on you device, subscribe now.

Comments are closed.

error: Content is protected !!