ಅಲೆಮಾರಿಗಳಿಗೆ ಶೀಘ್ರ ಮನೆ ನಿರ್ಮಾಣ: ಜ್ಯೋತಿಗಣೇಶ್

32

Get real time updates directly on you device, subscribe now.


ತುಮಕೂರು: 2022ರಲ್ಲಿ ಅಂದಿನ ವಸತಿ ಸಚಿವ ವಿ.ಸೋಮಣ್ಣ ನವರ ಆದೇಶದ ಮೇರೆಗೆ ಪ್ರಧಾನಮಂತ್ರಿ ಆವಾಜ್ ಯೋಜನೆಯಡಿ 1450 ಮನೆಗಳನ್ನು ತುಮಕೂರು ನಗರ ವಿಧಾನಸಭಾ ಕ್ಷೇತ್ರಕ್ಕೆ ನೀಡಲಾಗಿತ್ತು, ಈ ಯೋಜನೆಯಡಿ ಪೌರಕಾರ್ಮಿಕರಿಗೆ ಮತ್ತು ತುಮಕೂರು ನಗರದ ಕುಮುಟಯ್ಯ ಬಡಾವಣೆ ಪಾರ್ಕ್ನಲ್ಲಿ ವಾಸಿಸುತ್ತಿರುವ ಅಲೆಮಾರಿಗಳಿಗೆ ಹಾಗೂ ಅಮಾನಿಕೆರೆಯ ಕೋಡಿಹಳ್ಳದಲ್ಲಿರುವ ವಸತಿ ವಂಚಿತರಿಗೆ ವಸತಿ ವ್ಯವಸ್ಥೆ ಮಾಡಲು ಶಾಸಕರು ಸರ್ಕಾರಿ ಭೂಮಿ ಗುರುತಿಸುವಂತೆ ಸೂಚನೆ ನೀಡಿದಾಗ ವಾರ್ಡ್ ನಂ.01ರ ಹೊನ್ನೇನಹಳ್ಳಿ ಗ್ರಾಮದ ಸರ್ವೆ ನಂ.44 ರಲ್ಲಿ 1 ಎಕರೆ 39 ಗುಂಟೆ ಸರ್ಕಾರಿ ಜಾಗವಿದ್ದು, ಇಲ್ಲಿ ಮನೆ ನಿರ್ಮಿಸಬಹುದಾಗಿದೆ ಎಂದು ಸದರಿ ವಾರ್ಡ್ನ ಮಹಾ ನಗರಪಾಲಿಕೆ ಸದಸ್ಯೆ ನಳಿನ ಇಂದ್ರಕುಮಾರ್ ನಗರ ಶಾಸಕರ ಗಮನಕ್ಕೆ ತಂದರು.

ಶಾಸಕರ ಅಧ್ಯಕ್ಷತೆಯಲ್ಲಿ ನಡೆದ ತುಮಕೂರು ಆಶ್ರಯ ಸಮಿತಿ ಸಭೆಯಲ್ಲಿ ಮಾತನಾಡಿ ಜ್ಯೋತಿಗಣೇಶ್, ಕೊಳಚೆ ನಿರ್ಮೂಲನಾ ಮಂಡಳಿ ವತಿಯಿಂದ 194 ಮನೆ ನಿರ್ಮಾಣ ಮಾಡಲು ಯೋಜನೆ ರೂಪಿಸಿ ಕೆಲಸ ಪ್ರಾರಂಭವಾಗಿದ್ದು, ಅತೀ ಶೀಘ್ರದಲ್ಲಿ ಮನೆಗಳ ನಿರ್ಮಾಣ ಮಾಡಲಾಗುವುದು, ಅರ್ಹ ಫಲಾನಿಭವಿಗಳ ಪಟ್ಟಿಯನ್ನು ತುಮಕೂರು ಜಿಲ್ಲಾ ಉಸ್ತುವಾರಿ ಸಚಿವ ಡಾ.ಜಿ.ಪರಮೇಶ್ವರ್ ಅವರ ಗಮನಕ್ಕೆ ತರಲಾಗುವುದು ಎಂದರು.

ತುಮಕೂರು ನಗರದ ದಿಬ್ಬೂರಿನಲ್ಲಿ ರಾಜೀವ್ ಗಾಂಧಿ ಅವಾಜ್ ಯೋಜನೆಯಡಿ ನಿರ್ಮಿಸಿರುವ 1200 ಮನೆಗಳನ್ನು ಫಲಾನುಭವಿಗಳಿಗೆ ನೀಡಿದ್ದು, ಇದರಲ್ಲಿ 600ಕ್ಕೂ ಹೆಚ್ಚು ಮನೆಗಳಲ್ಲಿ ಅನರ್ಹರು ಹಾಗೂ ಖಾಸಗಿಯವರು ವಾಸವಾಗಿರುವುದು ಕಂಡು ಬಂದಿದ್ದು, ಆ ಕಾರಣದಿಂದ ಕ್ರಮ ತೆಗೆದುಕೊಳ್ಳಲು ನಿರ್ಧರಿಸಲಾಗಿದೆ ಎಂದು ಆಶ್ರಯ ಸಮಿತಿ ಸಭೆಯಲ್ಲಿ ಮಹಾ ನಗರ ಪಾಲಿಕೆ ಆಯುಕ್ತರಾದ ಅಶ್ವಿಜ.ಬಿ.ವಿ. ತಿಳಿಸಿದರು.
ಈ ಸಂದರ್ಭದಲ್ಲಿ ಹಲವು ಸರ್ಕಾರಿ ಇಲಾಖೆಗಳ ಅಧಿಕಾರಿಗಳು ಪಾಲ್ಗೊಂಡಿದ್ದರು.

Get real time updates directly on you device, subscribe now.

Comments are closed.

error: Content is protected !!