ಬಾವಿಯಿಂದ ಚಿರತೆ ಕಳೆಬರ ಮೇಲಕ್ಕೆ

29

Get real time updates directly on you device, subscribe now.


ತುರುವೇಕೆರೆ: ತಾಲೂಕಿನ ಪುಟ್ಟಮಾದಿಹಳ್ಳಿಯ ಕೆಂಪಮ್ಮ ಎಂಬುವವರ ತೋಟದ ತೆರೆದ ಬಾವಿಗೆ ಬಿದ್ದು ಸಾವಿಗೀಡಾಗಿದ್ದ ಚಿರತೆಯ ಕಳೇಬರವನ್ನು ಅಗ್ನಿಶಾಮಕ ದಳದ ಸಿಬ್ಬಂದಿಯ ಸಹಾಯದಿಂದ ಬಾವಿಯಿಂದ ಹೊರ ತೆಗೆಯಲಾಯಿತು, ನಂತರ ಪಶುವೈದ್ಯಾಧಿಕಾರಿ ಡಾ.ಪುಟ್ಟರಾಜು ಮೃತ ಚಿರತೆಯ ಕಳೆಬರದ ಮರಣೋತ್ತರ ಪರೀಕ್ಷೆ ನಡೆಸಿದರು.
ಚಿರತೆ ಆಹಾರ ಅರಸಿ ಬಂದಿದ್ದು ಆಕಸ್ಮಿಕವಾಗಿ ಬಾವಿಗೆ ಬಿದ್ದಿದೆ, ಮೇಲಕ್ಕೆ ಬರಲು ಸಾಧ್ಯವಾಗದೆ ನೀರು ಕುಡಿದು ಮೃತಪಟ್ಟಿರುವುದಾಗಿ ಹೇಳಲಾಗಿದೆ.
ಸುಮಾರು 2 ವರ್ಷದ ಹೆಣ್ಣು ಚಿರತೆ ಕಳೆದ ಮೂರ್ನಾಲ್ಕು ದಿನಗಳ ಹಿಂದೆಯೇ ಬಾವಿಯ ಒಳಗೆ ಬಿದ್ದು ಮೃತಪಟ್ಟಿತ್ತು, ಚಿರತೆಯ ದೇಹ ಸಂಪೂರ್ಣವಾಗಿ ಕೊಳೆತು ಹೋಗಿತ್ತು, ನ್ಯಾಯಾಲಯದ ಅನುಮತಿ ಪಡೆದು ಚಿರತೆಯ ಕಳೆಬರವನ್ನು ಸುಟ್ಟುಹಾಕಲಾಯಿತು ಎಂದು ಚಿಕ್ಕನಾಯಕನ ಹಳ್ಳಿ ವಲಯ ಅರಣ್ಯಾಧಿಕಾರಿ ಆರ್.ಅರುಣ್ ಮತ್ತು ಉಪ ವಲಯ ಅರಣ್ಯಾಧಿಕಾರಿ ಮಂಜುನಾಥ್ ತಿಳಿಸಿದ್ದಾರೆ.

Get real time updates directly on you device, subscribe now.

Comments are closed.

error: Content is protected !!