ತುಮಕೂರು: ನಗರದ ಅಶೋಕ ನಗರದ ಆಜಾದ್ ಪಾರ್ಕ್ನಲ್ಲಿ ಮೂರು ನಗರಪಾಲಿಕೆಯಿಂದ ಮೂರು ದಿನ ಕಾಲ ಇ-ಆಸ್ತಿ ಆಂದೋಲನ ಹಮ್ಮಿಕೊಳ್ಳಲಾಗಿದೆ, 25, 26 ಹಾಗೂ 27ನೇ ವಾರ್ಡ್ಗಳ ನಾಗರೀಕರು ತಮ್ಮ ಆಸ್ತಿಗಳನ್ನು ಇ-ಆಸ್ತಿಯಲ್ಲಿ ನೊಂದಣಿ ಮಾಡಿಸಿಕೊಂಡು ದಾಖಲಿಸಲು ಈ ಆಂದೋಲನದಲ್ಲಿ ಅವಕಾಶ ಕಲ್ಪಿಸಲಾಗಿದೆ ಎಂದು ಪಾಲಿಕೆ ಆಯುಕ್ತರಾದ ಬಿ.ವಿ.ಅಶ್ವಿಜ ಹೇಳಿದರು.
ಆಜಾದ್ ಪಾರ್ಕಿನಲ್ಲಿ ಈ ತಿಂಗಳ 1ರಿಂದ 3ರ ವರೆಗೆ ಇ-ಆಸ್ತಿ ಆಂದೋಲನ ನಡೆಯಲಿದೆ, ಶುಕ್ರವಾರ ಆಜಾದ್ ಪಾರ್ಕಿಗೆ ಆಗಮಿಸಿ ಆಂದೋಲನ ಪ್ರಕ್ರಿಯೆ ವೀಕ್ಷಣೆ ಮಾಡಿದ ಆಯುಕ್ತರು, ನಾಗರಿಕರು ತಮ್ಮ ಆಸ್ತಿಯನ್ನು ಇ- ಆಸ್ತಿಯಲ್ಲಿ ನೋಂದಣಿ ಮಾಡಿಕೊಳ್ಳಲು ಕ್ರಯಪತ್ರ, ಕಟ್ಟಡದ ಪರವಾನಗಿ ನಕ್ಷೆ, ಸ್ವತ್ತಿನ ಭಾವಚಿತ್ರ ಮತ್ತು ಮಾಲೀಕರ ಭಾವಚಿತ್ರ, ಪಾನ್ ಕಾರ್ಡ್, ಆಧಾರ್ ಕಾರ್ಡ್ ಮುಂತಾದ ದಾಖಲಾತಿಗಳೊಂದಿಗೆ ಅರ್ಜಿಗಳನ್ನು ನೀಡಿದರೆ ಏಳು ದಿನಗಳಲ್ಲಿ ಇ-ಆಸ್ತಿ ನೋಂದಣಿ ಮಾಡಲಾಗುವುದು ಎಂದು ಹೇಳಿದರು.
ಎಂಎಆರ್ 19 ಮತ್ತು ಇಸಿಯನ್ನು ಇದ್ದರೆ ತನ್ನಿ ಇಲ್ಲವಾದರೆ ನಗರ ಪಾಲಿಕೆಯಲ್ಲಿ ನೋಡಿಕೊಳ್ಳುತ್ತಾರೆ, ಹಾಗಾಗಿ ಹಳೆ ಮನೆ ಮಾಲೀಕರು ಮೇಲೆ ತಿಳಿಸಿದ ದಾಖಲೆಗಳನ್ನು ತರಬೇಕು, ಹೊಸ ಕಟ್ಟಡದವರು ಟೂಡಾದಿಂದ ಅಪ್ರೂವಲ್ ತೆಗೆದುಕೊಂಡು ಎಲ್ಲಾ ದಾಖಲಾತಿಗಳನ್ನು ತರಬೇಕು, ಮುಂದೆ ಇತರೆ ವಾರ್ಡ್ಗಳಲ್ಲಿ ಇ-ಆಸ್ತಿ ನೋಂದಣಿ ಆಂದೋಲನ ನಡೆಸಲಾಗುವುದು, ನಗರದಲ್ಲಿ 63 ಸಾವಿರ ಸ್ವತ್ತು ಇದ್ದು ಅವುಗಳನ್ನು ಇ-ಆಸ್ತಿಯಲ್ಲಿ ನೋಂದಣಿ ಮಾಡಲಾಗುತ್ತಿದೆ ಎಂದು ಆಯುಕ್ತರಾದ ಬಿ.ವಿ.ಅಶ್ವಿಜ ತಿಳಿಸಿದರು.
ನಗರ ಪಾಲಿಕೆ ಮಾಜಿ ಸದಸ್ಯ ಹೆಚ್.ಮಲ್ಲಿಕಾರ್ಜುನ್, ವಿವಿಧ ನಾಗರಿಕ ಸಮಿತಿ ಮುಖಂಡರಾದ ವೇಣುಗೋಪಾಲ್, ಶಿವಕುಮಾರ್ ನಂಜಪ್ಪ, ನಟರಾಜ್, ಪ್ರಕಾಶ್, ವೆಂಕಟೇಶ್ ಹಾಗೂ ಪಾಲಿಕೆ ಅಧಿಕಾರಿಗಳು ಹಾಜರಿದ್ದರು.
Comments are closed.