ರಾಮನಗರ ಬೆಂಗಳೂರು ದಕ್ಷಿಣ ಆಗೋದು ಬೇಡ

12

Get real time updates directly on you device, subscribe now.


ಕುಣಿಗಲ್: ರಾಮನಗರ ವನ್ನು ಬೆಂಗಳೂರು ದಕ್ಷಿಣ ಎಂದು ಮರು ನಾಮಕರಣ ಮಾಡುವ ರಾಜ್ಯ ಸರ್ಕಾರದ ಆದೇಶ ರದ್ದು ಮಾಡುವಂತೆ ಆಗ್ರಹಿಸಿ ಹಿಂದೂ ರಾಷ್ಟ್ರ ಸಮನ್ವಯ ಸಮಿತಿ ವತಿಯಿಂದ ತಹಶೀಲ್ದಾರ್ ರಶ್ಮಿ ಅವರ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಲಾಯಿತು.
ಈ ಬಗ್ಗೆ ಮಾಹಿತಿ ನೀಡಿದ ಪ್ರಮುಖರಾದ ಮಂಜುನಾಥ್, ರಾಮಾಯಣ ಕಾಲದಲ್ಲಿ ಪ್ರಭು ಶ್ರೀರಾಮಚಂದ್ರನು ವನವಾಸದಲ್ಲಿ ರಾಮನಗರದ ಶ್ರೀರಾಮ ದೇವರ ಬೆಟ್ಟದಲ್ಲಿ ಸರಿ ಸುಮಾರು ಒಂದು ವರ್ಷಗಳ ಕಾಲ ವಾಸವಾಗಿದ್ದಂತಹ ಐತಿಹಾಸಿಕ ಸ್ಥಳವಾಗಿದ್ದು, ಪವಿತ್ರ ಪಾವನ ಭೂಮಿಯಾಗಿದೆ, ಅಲ್ಲಿ ಸ್ವತಃ ಸುಗ್ರೀವನು ಸ್ಥಾಪನೆ ಮಾಡಿದ ಶ್ರೀರಾಮಮೂರ್ತಿ ಸಮೇತ ಇರುವ ಶ್ರೀರಾಮ ಮಂದಿರ ಇದೆ, ಆದರೆ ರಾಜ್ಯ ಸರ್ಕಾರವು ಶ್ರೀರಾಮನ ಬಗ್ಗೆ ಇರುವ ದ್ವೇಷದ ಕಾರಣದಿಂದ ರಾಮನಗರದ ಹೆಸರನ್ನು ಬೆಂಗಳೂರು ದಕ್ಷಿಣ ಎಂದು ನಾಮಕರಣ ಮಾಡಲು ಹೊರಟಿರುವುದು ಅತ್ಯಂದ ಖಂಡನೀಯ ಎಂದರು.

ರಾಮನಗರ ಹೆಸರು ಬದಲಾವಣೆಗೆ ಹಿಂದೂಗಳು ತೀವ್ರ ವಿರೋಧ ವ್ಯಕ್ತಪಡಿಸುತ್ತಿದ್ದು, ಹೆಸರು ಬದಲಾವಣೆಯ ನಿರ್ಧಾರ ಹಿಂಪಡೆಯದಿದ್ದರೆ ಹಿಂದೂ ಸಮಾಜ ಬೀದಿಗಿಳಿಯದೆ ಸುಮ್ಮನಿರುವುದಿಲ್ಲ, ತಾವು ಸಹ ರಾಮನಗರದ ಹೆಸರು ಬದಲಾವಣೆಯ ರಾಜ್ಯ ಸರ್ಕಾರದ ಆದೇಶಕ್ಕೆ ಅಂಕಿತ ಹಾಕಬಾರದೆಂದು ಆಗ್ರಹ ಮಾಡುತ್ತೇವೆ ಎಂದರು.

ಈ ವೇಳೆ ಹಿಂದೂ ರಾಷ್ಟ್ರ ಸಮನ್ವಯ ಸಮಿತಿಯ ಕುಮಾರ್, ಎನ್.ಮಂಜೇಶ್, ಶಶಿಧರ್ ಆಚಾರ್ಯ, ಸುಹಾಸ್.ಯಸ್, ಮಂಜುನಾಥ್, ರಾಮಯ್ಯ, ಅರುಣ್.ಎಚ್.ವಿ. ಮುಂತಾದವರು ಹಾಜರಿದ್ದರು.

Get real time updates directly on you device, subscribe now.

Comments are closed.

error: Content is protected !!