ತುಮಕೂರು: ವಿಕಲಚೇತನ ಮಕ್ಕಳ ಪಾಲನೆ ಪೋಷಣೆ ಅವರ ತಂದೆ, ತಾಯಿಗಳ ಜವಾಬ್ದಾರಿ ಮಾತ್ರವಲ್ಲ, ಜನಪ್ರತಿನಿಧಿಗಳು, ಪ್ರತಿ ನಾಗರಿಕರ ಜವಾಬ್ದಾರಿಯೂ ಹೌದು ಎಂದು ನಿವೃತ್ತ ಐಎಎಸ್ ಅಧಿಕಾರಿ ಹಾಗೂ ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಡಾ.ಸಿ.ಸೋಮಶೇಖರ್ ಅಭಿಪ್ರಾಯಪಟ್ಟಿದ್ದಾರೆ.
ತುಮಕೂರಿನ ಗಾಂಧಿನಗರದಲ್ಲಿನ ಮಾನಸ ಬುದ್ಧಿಮಾಂಧ್ಯ ಮಕ್ಕಳ ಶಾಲೆಯಲ್ಲಿ ಸಂಪ್ರದಾಯದಂತೆ ತಮ್ಮ ಹುಟ್ಟು ಹಬ್ಬ ಆಚರಿಸಿಕೊಂಡ ವೇಳೆ ಮಕ್ಕಳು ಹಾಗೂ ಪೋಷಕರನ್ನು ಕುರಿತು ಮಾತನಾಡಿ, ಇತರೆ ಮಕ್ಕಳಂತೆ ಅವರಿಗೆ ಅವಕಾಶಗಳನ್ನು ಕಲ್ಪಿಸಿ ಸಮಾಜದ ಮುಖ್ಯವಾಹಿನಿಗೆ ತರುವ ಕೆಲಸ ಆಗಬೇಕಾಗಿದೆ ಎಂದರು.
ಮಾನಸಿಕ ವಿಕಲಚೇತನ ಮಕ್ಕಳಿಗೆ ಕಲಿಸುವ ಶಿಕ್ಷಕರು, ಅವರನ್ನು ಪೋಷಿಸುವ ತಾಯಿಂದಿರುವ ನಿಜವಾದ ಸಾಧಕಿಯರು, ಈ ಮಕ್ಕಳನ್ನು ನೋಡಿಕೊಳ್ಳಲು ಅತ್ಯಂತ ತಾಳ್ಮೆ ಬೇಕಾಗುತ್ತದೆ, ಎಷ್ಟೋ ಸಂದರ್ಭದಲ್ಲಿ ಮಾನಸಿಕವಾಗಿ ಬೇಸರಗೊಂಡರು, ತೋರ್ಪಡಿಸಿಕೊಳ್ಳದೆ ಮಕ್ಕಳನ್ನು ಪಾಲನೆ, ಪೋಷಣೆ ಮಾಡುತ್ತಾರೆ, ಹಾಗಾಗಿ ಅವರನ್ನು ಸಾಧಕಿಯರು ಎಂದು ನಾನು ಕರೆಯಲು ಇಚ್ಚೆ ಪಡುತ್ತೇನೆ, ನಾನು ಜಿಲ್ಲಾಧಿಕಾರಿಯಾದ ದಿನದಿಂದಲೂ ಮಾನಸ ಬುದ್ಧಿಮಾಂಧ್ಯ ಮಕ್ಕಳ ಶಾಲೆಗೆ ಪ್ರತಿವರ್ಷ ಭೇಟಿ ನೀಡಿ ಅವರೊಂದಿಗೆ ಹುಟ್ಟು ಹಬ್ಬ ಆಚರಿಸಿಕೊಳ್ಳುವ ಮೂಲಕ ಅವರಲ್ಲಿ ಒಬ್ಬನಾಗಿ ಬೆರತು ಹೋಗುತ್ತಿದ್ದೇನೆ, ಈ ಮಕ್ಕಳಿಗೆ ಒಂದು ಶಾಶ್ವತ ಕಟ್ಟಡ ಕಟ್ಟಲು ಶಾಲೆ ಮುಂದಾದರೆ ನನ್ನ ಕೈಲಾದ ನೆರವು ನೀಡಲು ಸಿದ್ಧ ಎಂದು ಡಾ.ಸಿ.ಸೋಮಶೇಖರ್ ಭರವಸೆ ನೀಡಿದರು.
ಪತ್ರಕರ್ತ ಹಾಗೂ ರೆಡ್ ಕ್ರಾಸ್ ಸದಸ್ಯ ಎಸ್.ನಾಗಣ್ಣ ಮಾತನಾಡಿ, ಇದುವರೆಗೂ ಬಾಲಭವನದ ಜಾಗದಲ್ಲಿ ನಡೆಯುತ್ತಿದ್ದ ಮಾನಸ ಬುದ್ಧಿ ಮಾಂಧ್ಯ ಮಕ್ಕಳ ಶಾಲೆಯನ್ನು, ಅಲ್ಲಿನ ಶಾಲೆಗೆ ಮಕ್ಕಳ ಸಂಖ್ಯೆ ಹೆಚ್ಚಳವಾಗಿ ಕೊಠಡಿ ಕೊರತೆಯಾದ ಕಾರಣ ಗಾಂಧಿ ನಗರದ ಸರಕಾರಿ ಶಾಲೆಯ ಆವರಣದಲ್ಲಿ ತಾತ್ಕಾಲಿಕ ವ್ಯವಸ್ಥೆ ಕಲ್ಪಿಸಲಾಗಿದೆ, ಪ್ರಚಾರಕ್ಕಾಗಿ ಸೇವೆಗಳನ್ನು ಮಾಡುವುದನ್ನು ಬಿಟ್ಟು, ಇಂತಹ ಮಕ್ಕಳಿಗೆ ಸೇವೆ ಮಾಡಿದರೆ ಆತ್ಮತೃಪ್ತಿಯಿಂದ ಬದುಕಬಹುದು, ಈ ಮಕ್ಕಳಿಗೆ ಒಂದು ಶಾಶ್ವತ ಸೂರು ಕಲ್ಪಿಸುವ ನಿಟ್ಟಿನಲ್ಲಿ ನಾವೆಲ್ಲರೂ ಪ್ರಯತ್ನಿಸಬೇಕಾಗಿದೆ, ಈ ವಿಚಾರದಲ್ಲಿ ನಾನು ಸದಾ ನಿಮ್ಮೊಂದಿಗೆ ಕೈಜೋಡಿಸುವುದಾಗಿ ಭರವಸೆ ನೀಡಿದರು.
ಮಾನಸ ಬುದ್ಧಿಮಾಂಧ್ಯ ಶಾಲೆಯ ಸಂಸ್ಥಾಪಕರಲ್ಲಿ ಒಬ್ಬರಾದ ಸಾಗರನಹಳ್ಳಿ ಪ್ರಭು ಮಾತನಾಡಿ, ಹಿರಿಯ ಸಹಕಾರ ಹಾಗೂ ನಮ್ಮಗಳ ನಿರಂತರ ಹೋರಾಟದ ಫಲವಾಗಿ ಶಾಲೆಗೆ ಸರಕಾರದ ಅನುದಾನ ದೊರೆಯುತ್ತಿದೆ, ಈ ಶಾಲೆಗೆ ಒಂದು ಸ್ವಂತ ಕಟ್ಟಡ ನಿರ್ಮಾಣ ಮಾಡಬೇಕೆಂಬುದ ಕಾರ್ಯದರ್ಶಿ ಅವರ ಕನಸು ನನಸಾಗುವಂತಾಗಲಿದೆ ಎಂದು ಶುಭ ಹಾರೈಸಿದರು.
ಡಾ.ಸಿ.ಸೋಮಶೇಖರ್ ಅವರು ತಮ್ಮ ಹುಟ್ಟು ಹಬ್ಬದ ಪ್ರಯುಕ್ತ ಬೆಳಗುಂಬದಲ್ಲಿರುವ ರೆಡ್ ಕ್ರಾಸ್ ಸಂಸ್ಥೆಯ ಬುದ್ಧಿಮಾಂಧ್ಯ ಮಕ್ಕಳ ಶಾಲೆಗೆ ಭೇಟಿ ನೀಡಿ, ಅಲ್ಲಿನ ಮಕ್ಕಳೊಂದಿಗೆ ಹುಟ್ಟು ಹಬ್ಬ ಆಚರಿಸಿಕೊಂಡರು, ಮಕ್ಕಳಿಗೆ ಸಿಹಿ ಹಂಚಿ, ಮಧ್ಯಾಹ್ನ ಭೋಜನದ ವ್ಯವಸ್ಥೆ ಮಾಡಿದ್ದರು, ಈ ವೇಳೆ ಸರ್ವಮಂಗಳ ಡಾ.ಸಿ.ಸೋಮಶೇಖರ್, ಮಾನಸ ಬುದ್ಧಿ ಮಾಂಧ್ಯ ಮಕ್ಕಳ ಶಾಲೆಯ ಕಾರ್ಯದರ್ಶಿ ಡಿ.ಆರ್.ಶಿವಕುಮಾರ್, ಎಂ.ವಿ.ಬಸವರಾಜು, ಮೈತ್ರಿ ಬಳಗದ ನಳಿನಿ ಶಿವಾನಂದ್, ರೋಟಿರಿ ಅಧ್ಯಕ್ಷ ರಾಜಶೇಖರಿ ರುದ್ರಪ್ಪ, ಎಂ.ಜಿ.ಸಿದ್ದರಾಮಯ್ಯ, ಡಾ.ನೀಲಕಂಠಪ್ಪ, ಪ್ರೊ.ಲೀಲಾ ಲೇಪಾಕ್ಷ, ನಗರ ವೀರಶೈವ ಸಮಾಜದ ಅಧ್ಯಕ್ಷ ಟಿ.ಬಿ.ಶೇಖರ್, ಸಿದ್ದಿವಿನಾಯಕ ಸೇವಾ ಮಂಡಳಿ ಅಧ್ಯಕ್ಷ ಪ್ರಸನ್ನ ಕುಮಾರ್, ರೆಡ್ ಕ್ರಾಸ್ ಸಂಸ್ಥೆಯ ಕೃಷ್ಣಪ್ಪ, ಉಮಾ ಮಹೇಶ್ ಇತರರು ಭಾಗವಹಿಸಿದ್ದರು.
Comments are closed.