ಲಾವಂಚ ಬೇರಿನಿಂದ ಶನಿ ದೇವರಿಗೆ ಅಲಂಕಾರ

19

Get real time updates directly on you device, subscribe now.


ಗುಬ್ಬಿ: ಪಟ್ಟಣದಲ್ಲಿರುವ ಶನಿದೇವನ ದೇವಾಲಯ ಸೇರಿದಂತೆ ಚಿಕ್ಕೋನಹಳ್ಳಿ, ನಡವಲು ಪಾಳ್ಯ, ಕಡೆಪಾಳ್ಯ, ಕಡಬ, ಎಂ.ಎಲ್.ಕೋಟೆ, ಅಳಿಲುಘಟ್ಟ ಸೇರಿದಂತೆ ಹಲವು ದೇವಾಲಯದಲ್ಲಿ ಬಹಳ ವಿಶೇಷವಾಗಿ ಶ್ರಾವಣ ಶನಿವಾರ ಪೂಜೆ, ಪುನಸ್ಕಾರ, ದಾಸೋಹ ಸೇರಿದಂತೆ ಹಲವು ಧಾರ್ಮಿಕ ಕಾರ್ಯಕ್ರಮ ಆಯೋಜನೆ ಮಾಡಲಾಗಿತ್ತು.

ಗುಬ್ಬಿ ಪಟ್ಟಣದಲ್ಲಿ ಲಾವಂಚ ಬೇರಿನಿಂದ ಶನಿ ದೇವರಿಗೆ ವಿಶೇಷ ಪೂಜೆ ಮಾಡಲಾಗಿತ್ತು, ಗಂಟೆ ಪಾಳ್ಯ ಶ್ರೀ ಶನಿದೇವರ ದೇವಾಲಯದಲ್ಲಿ ಸುಮಾರು 5000 ಜನರಿಗೆ ದಾಸೋಹದ ವ್ಯವಸ್ಥೆ ಸೇರಿದಂತೆ ಹಲವು ರೀತಿಯ ಧಾರ್ಮಿಕ ಕಾರ್ಯಕ್ರಮವನ್ನು ಸಮಿತಿಯ ವತಿಯಿಂದ ಮಾಡಲಾಗಿತ್ತು.
ಶ್ರಾವಣ ಶನಿವಾರದಂದು ವಿಶೇಷ ಪೂಜೆ ಮಾಡಿದರೆ ಒಳಿತಾಗುತ್ತದೆ ಎಂಬ ನಂಬಿಕೆ ಇರುವುದರಿಂದ ಮುಂಜಾನೆಯಿಂದ ಭಕ್ತರು ಆಗಮಿಸಿ ವಿಶೇಷ ಪೂಜೆ ಸಲ್ಲಿಸುತ್ತಿದ್ದಾರೆ.
ರುದ್ರಾಭಿಷೇಕ, ನವಗ್ರಹ ಪೂಜೆ ಮಾಡಿದರೆ ನಮಗೆ ಇರುವಂತಹ ಶನಿ ದೋಷ ದೂರವಾಗುತ್ತದೆ ಎಂಬ ಹಿನ್ನೆಲೆಯಲ್ಲಿ ವಿಶೇಷ ಪೂಜೆ ಮಾಡಲಾಗಿತ್ತು, ಗುಬ್ಬಿ ತಾಲೂಕಿನಲ್ಲಿ ಪಟ್ಟಣದಲ್ಲಿರುವ ವಿಶೇಷ ಶನಿದೇವರ ದೇವಾಲಯ ವಿಶೇಷವಾಗಿದ್ದು ಕಳೆದ ಮೂರು ವರ್ಷಗಳ ಹಿಂದೆ ಜೀರ್ಣೋದ್ಧಾರವಾಗಿತ್ತು, ಅಗಸ್ಟ್ 31 ರಂದು ವಿಶೇಷ ಕಾರ್ಯಕ್ರಮ ಈ ದೇವಾಲಯದಲ್ಲಿ ಆ ಯೋಜನೆ ಮಾಡಲಾಗಿದೆ ಎಂದು ಇಲ್ಲಿನ ಅಧ್ಯಕ್ಷರು ಮಾಹಿತಿ ನೀಡಿದರು.

Get real time updates directly on you device, subscribe now.

Comments are closed.

error: Content is protected !!