ತುರುವೇಕೆರೆ: ಮಾನ್ಯ ಶಾಸಕ ಮಸಾಲಜಯರಾಮ್ರವರೇ ತಮ್ಮ ಮಗನ ಹತ್ಯೆಗೆ ಸಂಚು ರೂಪಿಸಿದ್ದೇ ಎಂದು ನನ್ನ ಮೇಲೆ ಸಲ್ಲದ ಆರೋಪ ಮಾಡಿದ್ದು, ನೆಟ್ಟಿಗೆರೆಯಲ್ಲಿರುವ ಲಕ್ಷ್ಮೀನರಸಿಂಹಸ್ವಾಮಿ ಸನ್ನಿದಿಗೆ ಬಂದು ಪ್ರಮಾಣ ಮಾಡಿ ನಾನು ಪ್ರಮಾಣ ಮಾಡುತ್ತೇನೆ ಎಂದು ಮಾಜಿ ಶಾಸಕ ಎಂ.ಟಿ.ಕೃಷ್ಣಪ್ಪ ಪಂಥಾಹ್ವಾನ ನೀಡಿದರು.
ಪಟ್ಣಣದಲ್ಲಿ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿ, ಶಾಸಕ ಮಸಾಲಜಯರಾಮ್ ಮಗನ ಮೇಲೆ ನೆಡೆದಿರುವ ವಿಚಾರದಲ್ಲಿ ಗ್ರಾಪಂ ಸದಸ್ಯ ಕೃಷ್ಣಪ್ಪ ನಮ್ಮ ಪಕ್ಷದವನೆಂಬ ಏಕೈಕ ಕಾರಣಕ್ಕ ನನ್ನ ಹೆಸರನ್ನು ಥಳುಕು ಹಾಕಲಾಗುತ್ತಿದೆ. ಪಕ್ಷದ ಕಾರ್ಯಕರ್ತನ ಮೇಲೆ ಹಲ್ಲೆ ನಡೆದಿದೆ ಎಂಬ ವಿಚಾರ ತಿಳಿದು ಕೈ ಕಟ್ಟಿ ಕೂರುವ ಜಾಯಮಾನ ನನ್ನದಲ್ಲ ಆತನ ನೆರವಿಗೆ ಭಾವಿಸಿದ್ದೇನೆ. ಹಲ್ಲೆಗೆ ನಾನೇ ಕಾರಣ ಎಂಬ ಸಂಶಯವಿದ್ದರೇ ನಾನು ಬಳಕೆ ಮಾಡುತ್ತಿರುವ ಎರಡೂ ಮೊಬೈಲ್ಗಳ ಕಾಲ್ ಡೀಟೈಲ್ಸ್ ತೆಗೆದು ತನಿಖೆ ನಡೆಸಲಿ, ಈ ವಿಚಾರದಲ್ಲಿ ನಾನು ತಪ್ಪೆಸಗಿದ್ದರೇ ಕಾನೂನು ಕ್ರಮಕ್ಕೆ ತಲೆ ಬಾಗುತ್ತೇನೆ ಎಂದರು.
ನನ್ನ ರಾಜಕೀಯ ಜೀವನ ಮುಗಿಸುವುದಾಗಿ ಹೇಳಿಕೆ ನೀಡುವ ಮಸಾಲಜಯರಾಮ್ರವರೇ, ನನ್ನನ್ನು 15 ವರ್ಷಗಳ ಶಾಸಕನನ್ನಾಗಿ ಆರಿಸಿದ್ದು ದೈವ ಸಮಾನರಾದ ಮತದಾರ ಬಂಧುಗಳು, ಅವರನ್ನು ಹಾಗೂ ದೈವಶಕ್ತಿಯನ್ನು ಪ್ರಬಲವಾಗಿ ನಂಬುವವನೂ ನಾನು, ಗಾಲಿಜನಾಧರ್ನ ರೆಡ್ಡಿ, ಸೇರಿದಂತೆ ಅನೇಕ ಘಟಾನುಘಟಿ ನಾಯಕರು ಕೋಟಿಗಟ್ಟಲೇ ಹಣ ಸುರಿದರೂ ಗೆಲುವು ಸಾಧಿಸಲಾಗಲಿಲ್ಲ. ನನ್ನ ರಾಜಕೀಯ ಅಸ್ತಿತ್ವದ ಬಗ್ಗೆ ಚಿಂತೆ ಬಿಟ್ಟು, ನಿಮ್ಮ ದುರಹಂಕಾರದ ಹೇಳಿಕೆಗಳಿಗೆ ಕಡಿವಾಣ ಹಾಕಿಕೊಳ್ಳಿ, ಲಾಂಗ್, ಮಚ್ಚು ಸಂಸ್ಕೃತಿ ನಮ್ಮದಲ್ಲ ಎಂದು ದೂರಿದ ಅವರು, ನನ್ನ ಆಡಳಿತಾವಧಿಯಲ್ಲಿ ಒಂದೇ ಒಂದು ಸಾಮಾಜಿಕ ಶಾಂತಿಗೆ ಭಂಗ ತರುವ ಘಟನೆ ನಡೆದಿಲ್ಲ ಎಂದು ತಮ್ಮ ಆಡಳಿತವನ್ನು ಸಮರ್ಥಿಸಿಕೊಂಡರು.
ಗೋಷ್ಠಿಯಲ್ಲಿ ತಾಪಂ ಮಾಜಿ ಅಧ್ಯಕ್ಷ ಗಂಗಾಧರ್, ಯುವ ಜೆಡಿಎಸ್ ಅಧ್ಯಕ್ಷ ರಮೇಶ್, ಪಪಂ ಮಾಜಿ ಅಧ್ಯಕ್ಷ ವಿಜಯೇಂದ್ರ, ಎಪಿಎಂಸಿ ಮಾಜಿ ಅಧ್ಯಕ್ಷ ರೇಣುಕಯ್ಯ, ಮಾಯಣ್ಣಗೌಡ, ವಕ್ತಾರ ಯೋಗೀಶ್, ನಾಗರಾಜ್, ಮಂಜುನಾಥ್ ಇದ್ದರು.
Get real time updates directly on you device, subscribe now.
Prev Post
Comments are closed.