ಕುಣಿಗಲ್: ಸರ್ಕಾರಿ ಶಾಲೆ ಹೆಚ್ ಎಂ ಆದ ನಿಮ್ಮ ಮಗ ಇಂಜಿನಿಯರ್ ವ್ಯಾಸಂಗ ಮಾಡೋದಾದ್ರೆ, ನಿಮ್ಮ ಕೈಲಿ ಪಾಠ ಕಲಿಯೋ ಮಕ್ಕಳು ಇಂಜಿನಿಯರ್ ವ್ಯಾಸಂಗ ಮಾಡುವ ಮಟ್ಟಕ್ಕೆ ನೀವು ತಯಾರಿ ಯಾಕೆ ಮಾಡ್ತಿಲ್ಲ ಎಂದು ಜಿಲ್ಲಾಧಿಕಾರಿ ಸರ್ಕಾರಿ ಪ್ರೌಢಶಾಲೆ ಮುಖ್ಯೋಪಾಧ್ಯಾಯರನ್ನು ಪ್ರಶ್ನಿಸಿದ ಘಟನೆ ನಡೆಯಿತು.
ಮಂಗಳವಾರ ಬೆಳಗ್ಗೆ ಜಿಲ್ಲಾಧಿಕಾರಿ ಶುಭಕಲ್ಯಾಣ್ ಪಟ್ಟಣದ ಮಹಾತ್ಮಗಾಂಧಿ ಸರ್ಕಾರಿಪ್ರೌಢಶಾಲೆಗೆ ದಿಡೀರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಹತ್ತನೆ ತರಗತಿಯಲ್ಲಿ 41ಮಕ್ಕಳ ಪೈಕಿ 13 ಮಕ್ಕಳು ಗೈರಾಗಿದ್ದು ಈ ಪೈಕಿ ಕೆಲ ವಿದ್ಯಾರ್ಥಿಗಳು ನಿರಂತರ ಗೈರಾದರೂ ಅವರ ಬಗ್ಗೆ ಮಾಹಿತಿ ಕೇಳಿದಾಗ ಹೆಚ್ ಎಂ ತೇಜಾವತಿ ಸಮರ್ಪಕ ಉತ್ತರ ನೀಡಲಿಲ್ಲ, ವಿದ್ಯಾರ್ಥಿಗಳ ಶೈಕ್ಷಣಿಕ ಗುಣಮಟ್ಟ ತೃಪ್ತಿಕರವಾಗದ ಕಾರಣ ಮೇಲಿನಂತೆ ಹೆಚ್ ಎಂ ರನ್ನು ಪ್ರಶ್ನಿಸಿ, ಸರ್ಕಾರ ಎಲ್ಲಾ ಸವಲತ್ತು ನೀಡಿದರೂ ನೀವು ಸರಿಯಾಗಿ ಕಾರ್ಯ ನಿರ್ವಹಿಸುತ್ತಿಲ್ಲ ಎಂದು ಹೇಳಿ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದ ಜಿಲ್ಲಾಧಿಕಾರಿ, ಕಾಮನ್ ಸಾಲ್ಟ್ ಏನು ಎಂದು ಕೇಳಿದಾಗ ವಿದ್ಯಾರ್ಥಿಗಳು ಸೋಡಿಯಂ ಕ್ಲೋರೇಡ್ ಎಂದು ಉತ್ತರಿಸಿದರು.
ಪಟ್ಟಣದ ಪುರಸಭೆ ಕಾರ್ಯಾಲಯಕ್ಕೆ ಭೇಟಿ ನೀಡಿದ ಜಿಲ್ಲಾಧಿಕಾರಿ, ಪುರಸಭೆಯಲ್ಲಿ ಅಗತ್ಯ ಸಿಬ್ಬಂದಿ ಇಲ್ಲದೆ ಇರುವ ಬಗ್ಗೆ ಮುಖ್ಯಾಧಿಕಾರಿ ಶಿವಪ್ರಸಾದರನ್ನು ಪ್ರಶ್ನಿಸಿದಾಗ, ಸರ್ವೇ ಮಾಡಲು ತೆರಳಿದ್ದಾರೆ ಎಂದರು.
ಕಂದಾಯ ವಸೂಲಾತಿಯಲ್ಲಿ ಕುಣಿಗಲ್ ಪುರಸಭೆ ಜಿಲ್ಲೆಯ ನಗರ ಸ್ಥಳೀಯ ಸಂಸ್ಥೆಯಲ್ಲಿ ಅತ್ಯಂತ ಹಿಂದೆ ಉಳಿದಿದ್ದು ಕಂದಾಯಾಧಿಕಾರಿ ಮುನಿಯಪ್ಪನನ್ನು ಪ್ರಶ್ನಿಸಿದಾಗ ರೆವಿನ್ಯೂಸೈಟ್ ಎಂದರು.
ತಹಶೀಲ್ದಾರ್ ರಶ್ಮಿ, ತಾಲೂಕು ಆರೋಗ್ಯಾಧಿಕಾರಿ ಮರಿಯಪ್ಪ, ಆಡಳಿತ ವೈದ್ಯಾಧಿಕಾರಿ ಗಣೇಶ್ಬಾಬು, ಪುರಸಭೆ ಮುಖ್ಯಾಧಿಕಾರಿ ಶಿವಪ್ರಸಾದ್ ಇತರರು ಇದ್ದರು.
Comments are closed.