ಹುಳಿಯಾರು: ಹುಳಿಯಾರಿನ ಕೆಂಕೆರೆ ರಸ್ತೆಯಲ್ಲಿರುವ ಸರ್ಕಾರಿ ಪ್ರೌಢಶಾಲೆ, ಸರ್ಕಾರಿ ಪದವಿ ಪೂರ್ವ ಕಾಲೇಜು ಹಾಗೂ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಮಂಗಳವಾರ ರಾತ್ರಿ ಸರಣಿ ಕಳ್ಳತನ ನಡೆದಿದೆ.
ಬೀಗ ಹೊಡೆದು ಒಳ ನುಗ್ಗಿರುವ ಕಳ್ಳರು ಪ್ರೌಢಾಶಾಲೆಯಲ್ಲಿ 1 ಸಿಸಿ ಟಿವಿ ಡಿವಿಆರ್, 3 ಲ್ಯಾಪ್ ಟಾಪ್, 9 ಯುಪಿಎಸ್ ಬ್ಯಾಟರಿ, ಪಿಯು ಕಾಲೇಜಿನಲ್ಲಿ 6 ಯುಪಿಎಸ್ ಬ್ಯಾಟರಿ, 1 ಲ್ಯಾಪ್ ಟಾಪ್, 2 ಸಿಸಿ ಟಿವಿ ಡಿವಿಆರ್, ಸಿಸಿ ಟಿವಿ 4 ಕ್ಯಾಮರ ಹಾಗೂ ಪದವಿ ಕಾಲೇಜಿನಲ್ಲಿ 16 ಯುಪಿಎಸ್ ಬ್ಯಾಟರಿಗಳು, 3 ಸಿಸಿ ಟಿವಿ ಡಿವಿಆರ್ ಕದ್ದಿದ್ದಾರೆ.
3 ಕಡೆ ಹತ್ತಕ್ಕೂ ಹೆಚ್ಚು ಕಂಪ್ಯೂಟರ್ ಗಳು, ಬೆಲೆಬಾಳುವ ಪ್ರಿಂಟರ್ ಗಳು ಇದ್ದರೂ ಸಹ ಅದ್ಯಾವನ್ನೂ ಮುಟ್ಟದೆ ಡಿವಿಆರ್, ಬ್ಯಾಟರಿ, ಲ್ಯಾಪ್ ಟಾಪ್ ಗಳನಷ್ಟೆ ಕಳ್ಳರು ಕಳ್ಳತನ ಮಾಡಿದ್ದಾರೆ, ಸ್ಥಳಕ್ಕೆ ಶ್ವಾನದಳ ಹಾಗೂ ಬೆರಳಚ್ಚು ತಜ್ಞರು ಭೇಟಿ ನೀಡಿ ಪರಿಶೀಲಿಸಿದ್ದಾರೆ, ಹುಳಿಯಾರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಪಿಎಸ್ ಐ ಧರ್ಮಾಂಜಿ ಅವರು ಕಳ್ಳರ ಪತ್ತೆಗೆ ಬಲೆ ಬೀಸಿದ್ದಾರೆ.
ಸರ್ಕಾರಿ ಶಾಲಾ ಕಾಲೇಜಿಗಳಿಗೆ ಅದರಲ್ಲೂ ಗ್ರಾಮೀಣ ಪ್ರದೇಶದ ಶಾಲಾ ಕಾಲೇಜುಗಳಿಗೆ ಸೌಲಭ್ಯ ನಿರ್ಮಾಣ ಮಾಡುವುದು ಕಷ್ಟಕರ, ಅಂತದರಲ್ಲೂ ಇಲಾಖೆ, ದಾನಿಗಳ ಸಹಕಾರ ಪಡೆದು ಹಣಕಾಸು ಹೊಂದಿಸಿ ಮೂಲ ಸೌಲಭ್ಯ ನಿರ್ಮಿಸಿಕೊಳ್ಳಲಾಗಿದೆ, ಈಗ ಯುಪಿಎಸ್, ಸಿಸಿಟಿವಿ, ಲ್ಯಾಪ್ ಟಾಪ್ ಗಳ ಕಳವು ವಿದ್ಯಾರ್ಥಿಗಳ ಭವಿಷ್ಯದ ದೃಷ್ಟಿಯಿಂದ ನಷ್ಟವಾಗಿದ್ದು ಪೊಲೀಸ್ ಇಲಾಖೆ ಕಳ್ಳರನ್ನು ಪತ್ತೆಯಚ್ಚಿ ಕದ್ದಿರುವ ವಸ್ತುಗಳನ್ನು ಮರಳಿ ಪಡೆದು ಶಾಲಾ ಕಾಲೇಜಿಗೆ ಹಿಂದಿರುಗಿಸಬೇಕಿದೆ.
Comments are closed.