ಕುಣಿಗಲ್: ತಾಲೂಕಿನ ಯಡಿಯೂರು ಹೋಬಳಿಯ ಹುಲಿಪುರ ಗ್ರಾಮದಲ್ಲಿ ಸಣ್ಣ ನೀರಾವರಿ ಇಲಾಖೆಯಡಿ ಬರುವ ಕೆರೆಯನ್ನು ಕೆಲ ಪ್ರಭಾವಿಗಳು ಒತ್ತುವರಿ ಮಾಡುತ್ತಿದ್ದು, ಒತ್ತುವರಿ ತೆರೆವುಗೊಳಿಸಿ ಕೆರೆ ಸಂರಕ್ಷಣೆ ಮಾಡಬೇಕೆಂದು ಗ್ರಾಮಸ್ಥರು ಅಗ್ರಹಿಸಿದ್ದಾರೆ.
ಈ ಬಗ್ಗೆ ಮಾಹಿತಿ ನೀಡಿದ ಗ್ರಾಮದ ಪ್ರಮುಖರಾದ ಗಂಗಯ್ಯ, ರಾಜು, ವೆಂಕಟೇಶ್ ಇತರರು, ಹುಲಿಪುರ ಗ್ರಾಮದ ಸರ್ವೇ ನಂಬರ್ 69ರಲ್ಲಿನ ಗೋಮಾಳ ಮತ್ತು ಖರಾಬು ಜಮೀನಿನಲ್ಲಿ 45 ವರ್ಷಗಳ ಹಿಂದೆ ಸರ್ಕಾರ ಸಣ್ಣ ನೀರಾವರಿ ಇಲಾಖೆಯ ಸಹಯೋಗದಲ್ಲಿ ಸುಮಾರು 60 ಎಕರೆಗೂ ಅಧಿಕ ಪ್ರದೇಶದಲ್ಲಿ ಕೆರೆ ನಿರ್ಮಿಸಿದೆ, ಕೆರೆಗೆ ತೂಬು ಅಳವಡಿಸಿ, ಕೋಡಿಯನ್ನು ಸಹ ನಿರ್ಮಿಸಲಾಗಿದೆ, ಸದರಿ ಕೆರೆಯಲ್ಲಿ ಇತ್ತೀಚೆಗೆ ಮಳೆ ಬಂದ ಕಾರಣ ನೀರು ತುಂಬಿಕೊಂಡು ಅಕ್ಕಪಕ್ಕದ ಜಮೀನಿನು ಸೇರಿದಂತೆ ಕೆಲ ಗ್ರಾಮಗಳ ಜನ, ಜಾನುವಾರುಗಳಿಗೂ ಕುಡಿಯುವ ನೀರಿನ ಪ್ರಮುಖ ಅಸರೆಯಾಗಿ ಪ್ರಮುಖ ಪಾತ್ರ ವಹಿಸುತ್ತಿದೆ, ಕೆರೆ ಪ್ರದೇಶದ ಬಗ್ಗೆ ಕಂದಾಯ ಇಲಾಖೆ ದಾಖಲೆಯಗಳಲ್ಲಿ ಗ್ರಾಮ ನಕಾಶೆಗೆ ಸೇರ್ಪಡೆ ಮಾಡಿಲ್ಲ, ಇತ್ತೀಚಿನ ಕೆಲದಿನಗಳಲ್ಲಿ ಕೆಲಪ್ರಭಾವಿಗಳು ಕೆರೆ ಜಾಗವು ತಮಗೆ ಸೇರಿದೆ ಎಂದು ಅನಧಿಕೃತವಾಗಿ ನೀರು ನಿಲುಗಡೆ ಪ್ರದೇಶಕ್ಕೆ ಮಣ್ಣು ಸುರಿದು ಅತಿಕ್ರಮಣ ಮಾಡಲು ಮುಂದಾಗಿದ್ದಾರೆ, ಇದರಿಂದ ಸ್ಥಳೀಯವಾಗಿ ಜನ, ಜಾನುವಾರುಗಳಿಗೆ ತೊಂದರೆಯಾಗುತ್ತಿದ್ದು ಒತ್ತುವರಿ ತಡೆಗಟ್ಟಿ ಕೆರೆ ಸಂರಕ್ಷಣೆ ಮಾಡುವಂತೆ ಕಂದಾಯ ಇಲಾಖೆಯ ಸ್ಥಳೀಯಾಧಿಕಾರಿಗಳಿಗೆ ಮನವಿ ಮಾಡಿದ್ದರೂ ಯಾವುದೇ ಕ್ರಮವಾಗದ ಕಾರಣ ತಹಶೀಲ್ದಾರ್ ಅವರು ಸ್ಥಳಕ್ಕೆ ಭೇಟಿ ಅಕ್ರಮ ಒತ್ತುವರಿ ತೆರವುಗೊಳಿಸಿ ಕೆರೆ ಸಂರಕ್ಷಣೆ ಮಾಡುವಂತೆ ಆಗ್ರಹಿಸಿದ್ದಾರೆ.
Comments are closed.