ಸ್ವಾತಂತ್ರ್ಯ ಹೋರಾಟಗಾರರನ್ನು ಸ್ಮರಿಸಿ: ಟಿಬಿಜೆ

18

Get real time updates directly on you device, subscribe now.


ಶಿರಾ: ಬ್ರಿಟೀಷರ ಗುಲಾಮಗಿರಿಗೆ ಸಿಲುಕಿದ್ದ ಭಾರತೀಯರು, ಸ್ವಾಂತಂತ್ರ್ಯಕ್ಕಾಗಿ ಹೋರಾಟ ನಡೆಸುವಾಗ, ಕಾಂಗ್ರೆಸ್ ಪಕ್ಷದ ಮುಖಂಡರಾಗಿ ಗಾಂಧೀಜಿ ಜೊತೆಯಲ್ಲಿ ಅನೇಕ ಮುಖಂಡರು ಪಾಲ್ಗೊಂಡಿದ್ದರು, ಶಿರಾ ತಾಲ್ಲೂಕಿನಲ್ಲೂ ನೂರಾರು ಜನರು ಹೋರಾಟ ನಡೆಸಿ, ಜೈಲುವಾಸ ಅನುಭವಿಸಿದ್ದಾರೆ. ಇವರೆಲ್ಲರನ್ನೂ ಸ್ಮರಿಸುವ ಕೆಲಸ ಆಗಬೇಕಿದೆ ಎಂದು ಶಾಸಕ ಟಿ.ಬಿ.ಜಯಚಂದ್ರ ನುಡಿದರು.
ಇಲ್ಲಿನ ಸ್ವಾಮಿ ವಿವೇಕಾನಂದ ಕ್ರೀಡಾಂಗಣದಲ್ಲಿ ತಾಲ್ಲೂಕು ಆಡಳಿತದ ವತಿಯಿಂದ ಗುರುವಾರ ಹಮ್ಮಿಕೊಳ್ಳಲಾಗಿದ್ದ 78ನೇ ಸ್ವಾತಂತ್ರ ದಿನಾಚರಣೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, 78 ವರ್ಷಗಳಲ್ಲಿ ನಾವು ಸ್ವತಂತ್ರಕ್ಕಾಗಿ ಹೋರಾಟ ನಡೆಸಿದವರನ್ನು ಮರೆಯುತ್ತಿದ್ದೇವೆ, ತಾಲ್ಲೂಕಿನಲ್ಲಿ ಇನ್ನೂರಕ್ಕೂ ಹೆಚ್ಚು ಜನರು ದೇಶದ ಸ್ವಾತಂತ್ರ್ಯಕ್ಕಾಗಿ ಜೈಲು ವಾಸ ಅನುಭವಿಸಿದ್ದು, ಅವರ ಕುಟುಂಬದವರಿಗೆ ಬಿಟ್ಟರೆ, ಬೇರೆಯವರಿಗೆ ಅವರ ಪರಿಚಯವೇ ಇಲ್ಲ, ಅವರೆಲ್ಲರ ನೆನಪಿಗೋಸ್ಕರ ನಗರದಲ್ಲಿ ಸ್ವತಂತ್ರ ಭವನ ನಿರ್ಮಾಣಕ್ಕೆ ಜಾಗ ಗುರುತಿಸಲಾಗಿದೆ. ಮುಂದಿನ ವರ್ಷದೊಳಗೆ 50ಲಕ್ಷ ವೆಚ್ಚದಲ್ಲಿ ಕಟ್ಟಡ ನಿರ್ಮಾಣ ಮಾಡಿ, ಅವರೆಲ್ಲರನ್ನೂ ಸ್ಮರಿಸಲಾಗುವುದು.

ಈ ದೇಶದ ಭವಿಷ್ಯ ಹೆಣ್ಣು ಮಕ್ಕಳ ಕೈಲಿದೆ. ಹೆಣ್ಣು ಮಕ್ಕಳು ಪರದೆ ಹಿಂದಿನಿಂದ ನಾಯಕತ್ವ ವಹಿಸುವ ಮೂಲಕ ದೇಶದ ಉನ್ನತಿಗೆ ಶ್ರಮಿಸಬೇಕು, ದೇಶದ ಆಂತರಿಕ ಶಕ್ತಿಯಾದ ಯುವಕ ಆಯೋಗ್ಯ ಮದ್ಯ ಮತ್ತು ಮಾದಕ ದ್ರವ್ಯಗಳಿಂದ ಹಾಳಾಗುತ್ತಿದೆ, ಮದ್ಯ ಮತ್ತು ಡ್ರ್ಸ್ ನಿಂದ ಸಮಾಜವನ್ನು ಕಾಪಾಡುವ ಜವಾಬ್ದಾರಿ ಪೊಲೀಸರದ್ದಾದರೆ, ನಾಗರಿಕರಾಗಿ ನಾವೂ ಅವರಿಗೆ ಸಹಕಾರ ನೀಡಿ, ಮಾದಕ ದ್ರವ್ಯಗಳನ್ನು ಮಟ್ಟಿ ಹಾಕುವ ಪ್ರತಿಜ್ಞೆ ಮಾಡೋಣ ಎಂದು ಕರೆ ನೀಡಿದರು.
ವಿಧಾನಪರಿಷತ್ ಶಾಸಕ ಚಿದಾನಂದ ಎಂ.ಗೌಡ ಮಾತನಾಡಿ, ದೇಶ ವೈಜ್ಞಾನಿಕವಾಗಿ, ಶೈಕ್ಷಣಿಕವಾಗಿ, ಆರ್ಥಿಕವಾಗಿ, ಶಕ್ತಿಯಾಗಿ ಮುನ್ನುಗ್ಗುತ್ತಿದೆ, ಇದರ ನಡುವೆಯೂ ಕಳೆದ ವಾರ ಕೊಲ್ಕೊತ್ತಾದಲ್ಲಿ ನಡೆದ ಪೈಶಾಚಿಕ ಕೃತ್ಯದಿಂದಾಗಿ ನಾವು ಎಂತಹ ನಾಗರಿಕ ಸಮಾಜದಲ್ಲಿ ಬದುಕುತ್ತಿದ್ದೇವೆ ಎಂದು ಯೋಚಿಸುವಂತೆ ಮಾಡಿದೆ, ಒಂದು ಕಾಲ ಇತ್ತು, ಶಿಕ್ಷಣ ಕೊಟ್ರೆ ಸಮಾಜ ಸುಧಾರಿಸುತ್ತದೆ ಎನ್ನುವ ಮಾತು ಕೇಳಿ ಬರುತ್ತಿತ್ತು, ಆದರೆ ಜನರು ಏಕೆ ಕ್ರೂರಿಗಳಾಗುತ್ತಿದ್ದಾರೆ, ಶೈಕ್ಷಣಿಕ ಪ್ರಗತಿ ನಡುವೆ ನೈತಿಕ ಅಧಃಪತನ ಆಗ್ರಿದೆಯಾ? ಆಳುವವರೇ ನೈತಿಕ ಅಧಃಪತನಕ್ಕೆ ಈಡಾಗ್ತಿದ್ದಾರಾ? ಇತ್ತೀಚಿನ ದಿನಗಳಲ್ಲಿನ ಘಟನೆಗಳನ್ನು ನೋಡುತ್ತಿದ್ದರೆ, ನಮ್ಮ ಆತ್ಮಾವಲೋಕನ ಮಾಡಿಕೊಳ್ಳಬೇಕಿದೆ ಎಂದರು.

ಹಿಂದೆಲ್ಲಾ ಶಿಕ್ಷಣ ಪಡೆದವರನ್ನು ಗೌರವಿಸಲಾಗುತ್ತಿತ್ತು, ಈಗ ಜನ ಪ್ರತಿನಿಧಿಗಳು ಹೆಚ್ಚಿನ ಗೌರವ ಪಡೆಯುತ್ತಿದ್ದಾರೆ ಎಂದರು.
ತಹಸೀಲ್ದಾರ್ ದತ್ತಾತ್ರೇಯ ಜೆ.ಗಾದಾ ನೀಡಿದ ಸ್ವಾತಂತ್ರ್ಯ ಸಂದೇಶದಲ್ಲಿ ಪ್ರಸ್ತುತ ವಿಚಾರಗಳು ಇಲ್ಲದೇ ಕೇವಲ ಸಮಾನತೆ, ನ್ಯಾಯ ಇರುವ ದೇಶ ಕಟ್ಟೋಣ ಎಂದು ಕರೆ ನೀಡಿದರು.
ಸಮಾರಂಭದಲ್ಲಿ ಎಸ್ ಎಸ್ ಎಲ್ ಸಿ, ಪಿಯುಸಿ ಪರೀಕ್ಷೆಯಲ್ಲಿ ಉತ್ತಮ ಅಂಕ ಪಡೆದ ನಗರ ಮತ್ತು ಗ್ರಾಮಾಂತರ ವಿದ್ಯಾರ್ಥಿಗಳನ್ನು ಪ್ರತ್ಯೇಕವಾಗಿ ಸನ್ಮಾನಿಸಲಾಯಿತು, ವಿವಿಧ ಶಾಲೆಗಳ ಮಕ್ಕಳು ನಡೆಸಿಕೊಟ್ಟ ಸಾಂಸ್ಕೃತಿಕ ಕಾರ್ಯಕ್ರಮ ಸಾರ್ವಜನಿಕರ ಮೆಚ್ಚುಗೆಗೆ ಪಾತ್ರವಾಯಿತು.
ನಗರಸಭೆ ಅಧ್ಯಕ್ಷೆ ಪೂಜಾ ಪೆದ್ದರಾಜು, ಹಲವು ಸದಸ್ಯರು, ಶಿರಾ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಪಿ.ಆರ್.ಮಂಜುನಾಥ್, ಆಶ್ರಯ ಸಮಿತಿ ಸದಸ್ಯರು, ಇಓ ಹರೀಶ್, ಪೌರಾಯುಕ್ತ ರುದ್ರೇಶ್, ಕ್ಷೇತ್ರ ಶಿಕ್ಷಣಾಧಿಕಾರಿ ಕೃಷ್ಣಪ್ಪ, ಎಡಿಎ ನಾಗರಾಜು ಸೇರಿದಂತೆ ಹಲವು ಅಧಿಕಾರಿಗಳು ಹಾಜರಿದ್ದರು.

Get real time updates directly on you device, subscribe now.

Comments are closed.

error: Content is protected !!