ಕುಣಿಗಲ್ ನಲ್ಲಿ ಪ್ಯಾಲೆಸ್ತೈನ್ ಧ್ವಜ ಪ್ರದರ್ಶನ

ಯುವಕರನ್ನು ವಶಕ್ಕೆ ಪಡೆದ ಪೊಲೀಸರಿಂದ ತನಿಖೆ

31

Get real time updates directly on you device, subscribe now.


ಕುಣಿಗಲ್: ಪಟ್ಟಣದ ಜಿಕೆಬಿಎಂಎಸ್ ಶಾಲಾ ಮೈದಾನದಲ್ಲಿ ತಾಲೂಕು ಆಡಳಿತದ ವತಿಯಿಂದ ಸಂಭ್ರಮದ ಸ್ವಾತಂತ್ರ್ಯೋತ್ಸವ ಕಾರ್ಯಕ್ರಮ ನಡೆಯುವ ಮೈದಾನದಲ್ಲೆ ಕೆಲ ಅಪ್ರಾಪ್ತರು ಪ್ಯಾಲೆಸ್ತೈನ್ ಧ್ವಜ ಹಾರಿಸಲು ಮುಂದಾದ ಘಟನೆ ನಡೆದಿದೆ.
ಮೈದಾನದಲ್ಲಿ ಸ್ವಾತಂತ್ರ್ಯೋತ್ಸವ ಸಮಾರಂಭದ ಅಂಗವಾಗಿ ಶಾಲಾ ವಿದ್ಯಾರ್ಥಿನಿ ಸ್ವಾತಂತ್ರ್ಯದ ಬಗ್ಗೆ ಭಾಷಣ ಮಾಡುವ ಹಂತದಲ್ಲೆ ಮೈದಾನದ ಒಂದು ಬದಿಯಲ್ಲಿ ಬಂದ ಅಪ್ರಾಪ್ತರ ಗುಂಪೊಂದು ಪ್ಯಾಲೆಸ್ತೈನ್ ಧ್ವಜ ಹಿಡಿದು ಅದನ್ನು ಕೋಲಿಗೆ ಸಿಲುಕಿಸಿ ಹಾರಾಡಿಸಲು ಮುಂದಾದದರು, ಇದನ್ನು ಗಮನಿಸಿದ ವಿದ್ಯಾರ್ಥಿಗಳು, ಕೆಲ ಯುವಕರು ದೇಶದ ಸ್ವಾತಂತ್ರ್ಯೋತ್ಸವ ಕಾರ್ಯಕ್ರಮ ನಡೆಯುತ್ತಿದೆ, ಈ ವೇಳೆ ಮತ್ತೊಂದು ದೇಶದ ಬಾವುಟ ಹಾರಿಸಿ ಸಂಭ್ರಮಿಸುವುದು ಸರಿಯಲ್ಲ ಎಂದು ಬುದ್ಧಿವಾದ ಹೇಳಿದರು, ಆದರೂ ಅಪ್ರಾಪ್ತರು ಸ್ಪಂದಿಸದೆ ಇದ್ದಾಗ ಸ್ಥಳೀಯ ಪೊಲೀಸರಿಗೆ ಮಾಹಿತಿ ನೀಡಿದರು, ಸ್ಥಳಕ್ಕಾಗಮಿಸಿದ ಪೊಲೀಸರು ಮಾಹಿತಿ ನೀಡಿದವರ ಮೊಬೈಲ್ ಕಸಿದು, ನಿಂದಿಸಿ ಬೇರೆ ದೇಶದ ಧ್ವಜ ಹಾರಿಸಲು ಮುಂದಾದವರ ಪೈಕಿ ಕೆಲವರ ವಿಚಾರಣೆಗೆ ಮುಂದಾದರು.
ಘಟನೆ ಬಗ್ಗೆ ಬೇಸರ ವ್ಯಕ್ತಪಡಿಸಿದ ವಿದ್ಯಾರ್ಥಿಗಳು ಹಾಗೂ ಯುವಕರು, ಆಗಬೇಕಿದ್ದ ಅಭಾಸ ತಪ್ಪಿಸಲು ಪೊಲೀಸರಿಗೆ ಮಾಹಿತಿ ನೀಡಿದ್ದು, ಪೊಲೀಸರೆ ನಮ್ಮನ್ನು ನಿಂಧಿಸಿ ನಮ್ಮ ಫೋನ್ ಪಡೆದಿದ್ದು ಸರಿಯಲ್ಲ, ಈ ರೀತಿ ಆದರೆ ಮುಂದೆ ಪೊಲೀಸರಿಗೆ ಮಾಹಿತಿ ನೀಡಲು ಹೋಗುವುದಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ, ಘಟನೆಗೆ ಸಂಬಂಧಿಸಿದಂತೆ ಪೊಲೀಸರು ಕಾನೂನು ಸಂಘರ್ಷಕ್ಕೆ ಒಳಗಾದ ಬಾಲಕನನ್ನು ವಿಚಾರಣೆಗೆ ಒಳಪಡಿಸಿದ್ದಾರೆ ಎನ್ನಲಾಗಿದೆ.

Get real time updates directly on you device, subscribe now.

Comments are closed.

error: Content is protected !!