ತುರುವೇಕೆರೆ: ಹಲವಾರು ಕ್ರಿಮಿನಲ್ ಪ್ರಕರಣಗಳಲ್ಲಿ ಭಾಗಿಯಾಗಿರುವ ಆರೋಪ ಎದುರಿಸುತ್ತಿರುವ ಮಾಜಿ ಶಾಸಕ ಎಂ.ಟಿ. ಕೃಷ್ಣಪ್ಪರನ್ನು ಗೂಂಡಾಕಾಯ್ದೆಯಡಿ ಪೊಲೀಸರು ಬಂಧಿಸಬೇಕೆಂದು ಬಿಜೆಪಿ ವಕ್ತಾರ ಹಾಗೂ ಹಿರಿಯ ವಕೀಲ ಮುದ್ದೇಗೌಡ ಒತ್ತಾಯಿಸಿದರು.
ಪಟ್ಟಣದಲ್ಲಿ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿ, ಮಾಜಿ ಶಾಸಕ ಎಂ.ಟಿ.ಕೃಷ್ಣಪ್ಪ ತನ್ನ ಸಹಚರರೆನಿಸಿರುವ ಗೂಂಡಾಪಡೆಯನ್ನು ಬಳಸಿಕೊಂಡು ರಾಜಕೀಯ ದುರುದ್ದೇಶಕ್ಕಾಗಿ ಹಾಲಿ ಶಾಸಕರ ಪುತ್ರ ತೇಜು ಮೇಲೆ ಹಲ್ಲೆಗೆ ಮುಂದಾಗಿದ್ದು ಖಂಡನೀಯ ಜೀವನದುದ್ದಕ್ಕೂ ಅಡ್ಡದಾರಿ ಅನುಸರಿಸಿ ಅಧಿಕಾರ ಗಿಟ್ಟಿಸಿಕೊಂಡಿದ್ದ ಎಂ.ಟಿ.ಕೃಷ್ಣಪ್ಪ ಕ್ಷೇತ್ರದ ಜನತೆಗೆ ರಾಜಕಾರಣಕ್ಕೆ ಪ್ರವೇಶ ಮಾಡಿದ್ದು ದುರದೃಷ್ಟಕರ ಎಂದು ವಿಷಾದಿಸಿದರು.
ಕಾನೂನು ಗೌರವಿಸುವುದಾಗಿ ಮಾಜಿ ಶಾಸಕ ಎಂ.ಟಿ.ಕೃಷ್ಣಪ್ಪ ಪತ್ರಿಕೆಗಳಲ್ಲಿ ಕೊಡುವ ಹೇಳಿಕೆಗಳು ಭೂತದ ಬಾಯಲ್ಲಿ ಭಗವದ್ಗೀತೆ ಬಂದಂತೆ ಭಾಸವಾಗುತ್ತಿದೆ, ತುರುವೇಕೆರೆ ನ್ಯಾಯಾಲಯದ ಕೆಲ ಪ್ರಕರಣಗಳಲ್ಲಿ ಮಾಜಿ ಶಾಸಕ ಎಂ.ಟಿ.ಕೃಷ್ಣಪ್ಪ ತಲೆ ಮರೆಸಿಕೊಂಡು ತಿರುಗುತ್ತಿದ್ದಾರೆ. ಕ್ರಿಮಿನಲ್ ಹಿನ್ನಲೆಯುಳ್ಳ ವ್ಯಕ್ತಿಗಳ ರಕ್ಷಣೆಗೆ ನಿಲ್ಲುವ ಇವರನ್ನು ಏನೆಂದು ಕರೆಯಬೇಕು, ವಿನಾಕಾರಣ ಅಮಾಯಕರ ಮೇಲೆ ತನ್ನ ಗೂಂಡಾಪಡೆಗೆ ಕುಮ್ಮಕ್ಕು ನೀಡಿ ಅಶಾಂತಿ ಮೂಡಿಸುವ ಪ್ರವೃತ್ತಿಯನ್ನು ಎಂ.ಟಿ. ಕೃಷ್ಣಪ್ಪ ಕೈ ಬಿಡದಿದ್ದರೇ ಜನತೆ ಹಾಗೂ ನಮ್ಮ ಪಕ್ಷದ ಕಾರ್ಯಕರ್ತರು ತಕ್ಕ ಪಾಠ ಕಲಿಸಲಿದ್ದಾರೆ ಎಂದು ಎಚ್ಚರಿಸಿದರು.
ಎಂಟಿಕೆ ಶಾಸಕರಾಗಲ್ಲ..
ಸಹೃದಯಿ ರಾಜಕಾರಣಿ ಶಾಸಕ ಮಸಾಲಜಯರಾಂ ಹೆಸರನ್ನು ಸಂಬಂಧ ಪಡದ ವಿಚಾರಕ್ಕೆ ಎಳೆದುತಂದು ಅವರ ಹೆಸರಿಗೆ ಕಪ್ಪು ಮಸಿ ಬಳಿಯುವ ವ್ಯರ್ಥಕ್ಕೆ ಎಂ.ಟಿ.ಕೃಷ್ಣಪ್ಪ ಮುಂದಾಗಿದ್ದಾರೆ. ಜನತೆ ಇವರನ್ನು ತಿರಸ್ಕರಿಸಿ ಮನೆಗೆ ಕಳುಹಿಸಿದ್ದಾರೆಂಬುದನ್ನು ಮರೆತು ತನ್ನ ಅಸ್ತಿತ್ವಕ್ಕಾಗಿ ಕ್ಷೇತ್ರ ವ್ಯಾಪ್ತಿಯಲ್ಲಿ ಅಶಾಂತಿ ಮೂಡಿಸುತ್ತಿದ್ದಾರೆ. ಮತ್ತೆ ಶಾಸಕನಾಗಬೇಕೆಂಬ ಕಸನು ಕಾಣುತ್ತಿರುವ ಎಂ.ಟಿ.ಕೃಷ್ಣಪ್ಪ ಇನ್ನು ಮುಂದೆ ಯಾವುದೇ ಕಾರಣಕ್ಕೂ ಶಾಸಕರಾಗಿ ಆಯ್ಕೆಯಾಗುವುದಿಲ್ಲ ಎಂದು ಮುದ್ದೇಗೌಡರು ಭವಿಷ್ಯ ನುಡಿದರು.
ಗೋಷ್ಠಿಯಲ್ಲಿ ಪಪಂ ಅಧ್ಯಕ್ಷ ಅಂಜನ್ಕುಮರ್, ಪಪಂ ಸದಸ್ಯ ಚಿದಾನಂದ್, ಗ್ರಾಪಂ ಸದಸ್ಯ ಕಾಳಂಜೀಹಳ್ಳಿ ಸೋಮಶೇಖರ್, ಗಂಗಣ್ಣ, ಎಪಿಎಂಸಿ ಮಾಜಿ ಅಧ್ಯಕ್ಷ ಕೊಂಡಜ್ಜಿ ವಿಶ್ವನಾಥ್, ಸದಸ್ಯ ವೆಂಕಟರಾಮ್, ವಿ.ಬಿ.ಸುರೇಶ್, ನಾಗಲಾಪುರ ಮಂಜುನಾಥ್, ಹುಚ್ಚೇಗೌಡ, ಹಾವಾಳ ಶಿವಕುಮಾರ್ ಮತ್ತಿತರಿದ್ದರು.
ಜೀವಮಾನವಿಡೀ ಎಂ.ಟಿ.ಕೃಷ್ಣಪ್ಪ ಅಡ್ಡದಾರಿ ಹಿಡಿದೇ ಸಾಗಿದ್ರು: ಮುದ್ದೇಗೌಡ
ಗೂಂಡಾಕಾಯ್ದೆಯಡಿ ಬಂಧಿಸಿದ್ರೆ ಕ್ಷೇತ್ರಕ್ಕೆ ನೆಮ್ಮದಿ
Get real time updates directly on you device, subscribe now.
Comments are closed.