ಭಗವದ್ಗೀತೆ ಮನುಷ್ಯನಿಗೆ ಜೀವನ ಮೌಲ್ಯಗಳಿವೆ

ಲೋಕಕ್ಕೆ ಮನ್ಯುತ್ವದ ಮಹತ್ವ ಸಾರಿದ್ದ ಶ್ರೀ ಕೃಷ್ಣ: ಡಾ.ತಿಪ್ಪೇಸ್ವಾಮಿ

18

Get real time updates directly on you device, subscribe now.


ತುಮಕೂರು: ತನ್ನ ನಡೆ-ನುಡಿ ಮೂಲಕ ಲೋಕಕ್ಕೆ ಮನುಷ್ಯತ್ವದ ಮಹತ್ವ ಸಾರಿದ ವ್ಯಕ್ತಿ ಶ್ರೀಕೃಷ್ಣ ಎಂದು ಅಪರ ಜಿಲ್ಲಾಧಿಕಾರಿ ಡಾ.ಎನ್.ತಿಪ್ಪೇಸ್ವಾಮಿ ಅಭಿಪ್ರಾಯ ವ್ಯಕ್ತ ಪಡಿಸಿದರು.
ನಗರದ ಡಾ. ಗುಬ್ಬಿ ವೀರಣ್ಣ ಕಲಾಕ್ಷೇತ್ರದಲ್ಲಿಂದು ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮಹಾನಗರ ಪಾಲಿಕೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಜಿಲ್ಲಾ ಗೊಲ್ಲರ (ಯಾದವ) ಸಂಘದ ಸಹಯೋಗದಲ್ಲಿ ಹಮ್ಮಿಕೊಳ್ಳಲಾಗಿದ್ದ ಶ್ರೀ ಕೃಷ್ಣ ಜಯಂತಿ ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಿ ಮಾತನಾಡಿ, ಅನ್ಯಾಯ- ಅಧರ್ಮದ ವಿರುದ್ಧ ಆಯುಧಗಳಿಲ್ಲದೆ ಹೋರಾಡಿ ನ್ಯಾಯ ಒದಗಿಸಿ, ಭಗವದ್ಗೀತೆ ಮೂಲಕ ಮನುಷ್ಯ ಜೀವನದ ಪ್ರತಿ ಹಂತಗಳನ್ನೂ ವಿವರಿಸುವ ಮೂಲಕ ಸದಾ ಮನುಷ್ಯರಿಗೋಸ್ಕರ ಬದುಕಿದ ಶ್ರೀಕೃಷ್ಣನ ತತ್ವಗಳನ್ನು ಎಲ್ಲರೂ ಅಳವಡಿಸಿಕೊಳ್ಳಬೇಕು ಎಂದು ತಿಳಿಸಿದರು.
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಕೆ.ಎಸ್.ಸಿದ್ಧಲಿಂಗಪ್ಪ ಮಾತನಾಡಿ, ಶ್ರೀಕೃಷ್ಣನ ಭಕ್ತಿ, ಇತಿಹಾಸ, ಆದರ್ಶಗಳು ಇಂದಿನ ಸಮಾಜಕ್ಕೆ ಅಗತ್ಯ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಉಪ ತಹಶೀಲ್ದಾರ್ ಕಮಲಮ್ಮ, ಜಗದೀಶ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಈಶ್ವರ್ ಕು. ಮಿರ್ಜಿ, ಜಿಲ್ಲಾ ಗೊಲ್ಲರ ಸಂಘ ಅಧ್ಯಕ್ಷ ಜಿ. ಚಂದ್ರಶೇಖರ ಗೌಡ, ಜಿಲ್ಲಾ ಗೊಲ್ಲರ ಸಂಘ ಖಜಾಂಚಿ ಚಿಕ್ಕೇಗೌಡ, ಜಿಲ್ಲಾ ಪಂಚಾಯತ್ ಮಾಜಿ ಅಧ್ಯಕ್ಷೆ ಪ್ರೇಮಾ ಮಹಾಲಿಂಗಪ್ಪ, ಪ್ರಾಂಶುಪಾಲರು ಮತ್ತು ಕಲಾವಿದರಾದ ಅಕ್ಕಮ್ಮ, ಶ್ರೀಕೃಷ್ಣ ಕಲಾ ಸಂಘ ಅಧ್ಯಕ್ಷ ಚಿಕ್ಕಪ್ಪಯ್ಯ, ಮುಖಂಡರಾದ ನಿಕೇತ್ ರಾಜ್ ಮೌರ್ಯ, ಹನುಮಂತರಾಜು, ಜಿಲ್ಲಾ ಗೊಲ್ಲರ ಸಂಘದ ಪದಾಧಿಕಾರಿಗಳು ಸೇರಿದಂತೆ ಸಮುದಾಯದ ಮುಖಂಡರು ಹಾಜರಿದ್ದರು.
ಈ ಸಂದರ್ಭದಲ್ಲಿ ಸಮುದಾಯದ ತುರುವೇಕೆರೆ ಮಚೇನಹಳ್ಳಿ ಕರಿಯಪ್ಪ, ತುಮಕೂರಿನ ಟಿ.ಮುರಳೀಕೃಷ್ಣಪ್ಪ, ಸಾಗರನಹಳ್ಳಿ ಜಯಮ್ಮ ಅವರನ್ನು ಸನ್ಮಾನಿಸಲಾಯಿತು.

Get real time updates directly on you device, subscribe now.

Comments are closed.

error: Content is protected !!