ಚಿಕ್ಕನಾಯಕನ ಹಳ್ಳಿ: ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಸಹಾಯಕ ಕಾರ್ಯ ಪಾಲಕ ಇಂಜಿನಿಯರ್ ಉಮಾಮಹೇಶ್ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ.
ಗುತ್ತಿಗೆದಾರ ಚಿಕ್ಕೆಗೌಡ.ಎನ್.ಸಿ. ಎನ್ನುವರಿಂದ ಎಇಇ ಉಮಾ ಮಹೇಶ್ ಅವರು ಮತ್ತು ಶಶಿಕುಮಾರ್, ಕಿರಿಯ ಅಭಿಯಂತರ ಕಿರಣ್ ಅವರು 1,51,000 ಲಕ್ಷ ಹಣ ಪಡೆಯುತ್ತಿದ್ದ ವೇಳೆಯಲ್ಲಿ ಲೋಕಾಯುಕ್ತ ಡಿವೈಎಸ್ಪಿ ಬಿ.ಉಮಾಶಂಕರ್ ಅವರು ದಾಳಿ ಮಾಡಿ ಹಣದ ಸಮೇತ ಭ್ರಷ್ಟಾಚಾರಿಗಳನ್ನು ವಶಕ್ಕೆ ಪಡೆದಿದ್ದಾರೆ.
ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಮನೆ ಮನೆಗೆ ಗಂಗೆ (ಜೆಜೆಎಂ) ಕಾಮಗಾರಿ ಬಿಲ್ಲು ಮಾಡಿಕೊಡಲು ಒಂದು ಲಕ್ಷದ ಒಂದು ಸಾವಿರ ಬೇಡಿಕೆ ಇಟ್ಟಿದ್ದು ಸದರಿ ಹಣವನ್ನು ನೇರವಾಗಿ ಪಡೆಯುತ್ತಿದ್ದ ವೇಳೆ ಎಇಇ ಉಮಾಮಹೇಶ್ ಮತ್ತು ಶಶಿಕುಮಾರ್, ಜೆಇ ಕಿರಣ್ ಅವರನ್ನು ಲೋಕಾಯುಕ್ತ ಡಿವೈಎಸ್ಪಿ ಬಿ.ಉಮಾಶಂಕರ್ ಅವರು ಹಣದ ಸಮೇತ ಬಂಧಿಸಿದ್ದಾರೆ, ಲೋಕಾಯುಕ್ತ ಇನ್ಸ್ ಪೆಕ್ಟರ್ ಮೊಹಮದ್ ಸಲೀಮ್ ಮತ್ತು ಲೊಕಾಯುಕ್ತ ಡಿವೈಎಸ್ಪಿ ಬಿ.ಉಮಾಶಕರ್ ಅವರ ತಂಡ ಯಶಸ್ವಿಯಾಗಿ ಕಾರ್ಯಾಚರಣೆ ನಡೆಸಿದೆ.
Comments are closed.