ಪಾರ್ಥೇನಿಯಂ ಗಿಡ ನಿವಾರಣೆ ಕಾರ್ಯಕ್ರಮ

7

Get real time updates directly on you device, subscribe now.


ಕುಣಿಗಲ್: ಗಾಂಧಿ ಕೃಷಿ ವಿಶ್ವ ವಿದ್ಯಾಲಯ ಬೆಂಗಳೂರಿನ ಅಂತಿಮ ವರ್ಷದ ಕೃಷಿ ವಿದ್ಯಾರ್ಥಿಗಳು ತಾಲೂಕಿನ ಕೊತ್ತಗೆರೆ ಹೋಬಳಿ ಗುನ್ನಾಗರೆ ಗ್ರಾಮದಲ್ಲಿ ಕೃಷಿ ಕಾರ್ಯಾನುಭವ ಕಾರ್ಯಕ್ರಮದ ಅಂಗವಾಗಿ ಪಾರ್ಥೇನಿಯಂ ಗಿಡ ನಿವಾರಣೆ ಕಾರ್ಯಕ್ರಮ ನಡೆಸಿದರು.
ಕಾರ್ಯಕ್ರಮದಲ್ಲಿ ಶಾಲಾ ಮಕ್ಕಳೊಂದಿಗೆ ಜಿಕೆವಿಕೆಯ ಕೃಷಿ ಕಾರ್ಯಾನುಭವ ಕಾರ್ಯಕ್ರಮದ ವಿದ್ಯಾರ್ಥಿಗಳು ಪಾರ್ಥೇನಿಯಂ ಕಳೆ ನಿರ್ಮೂಲನೆ ಬಗ್ಗೆ ಗ್ರಾಮಸ್ಥರಲ್ಲಿ ಅರಿವು ಮೂಡಿಸಲು ಜಾಥಾ ನಡೆಸಿದರು.
ಈ ವೇಳೆ ಗ್ರಾಮದ ಮುಖಂಡ ವರದರಾಜು ಮಾತನಾಡಿ, ಪಾರ್ಥೇನಿಯಂ ಕಳೆಯ ರೂಪದ ಗಿಡವಾಗಿದ್ದು ಎಂತಹ ವಾತವರಣದಲ್ಲೂ ಸಹ ಬೆಳೆಯುವ ಗುಣಲಕ್ಷಣ ಹೊಂದಿದೆ, ಮಳೆಗಾಲದಲ್ಲಿ ಹುಲುಸಾಗಿ ಬೆಳೆಯುವ ಗಿಡವೂ ಸ್ವಲ್ಪ ನೀರಿದ್ದರೂ ಯಥೇಚ್ಚವಾಗಿ ಬೆಳೆಯುತ್ತದೆ, ಇದು ಬೆಳೆಗಳ ಮಧ್ಯೆ ಬೆಳೆದಲ್ಲಿ ಬೆಳೆಯ ಬೆಳವಣಿಗೆಗೆ ಮಾರಕವಾಗಿ ಪರಿಣಮಿಸಲಿದೆ ಎಂದರು.

ಗ್ರಾಮದಲ್ಲಿ ಜನವಸತಿ ಪ್ರದೇಶದಲ್ಲಿ ಬೆಳೆದಾಗ ಜನರ ಆರೋಗ್ಯ ಸಮಸ್ಯೆ ಮೇಲೆ ಗಂಭೀರ ಪರಿಣಾಮ ಬೀರುವ ಜೊತೆಯಲ್ಲಿ ಸೊಳ್ಳೆ ಇತರೆ ಕೀಟಗಳಿಗೆ ಅವಾಸ ಸ್ಥಾನವಾಗಿ ಮಾರ್ಪಾಟಾಗಿ ಸಾಕಷ್ಟು ಸಮಸ್ಯೆ ಸೃಷ್ಟಿಸುತ್ತವೆ, ಈ ನಿಟ್ಟಿನಲ್ಲಿ ಎಲ್ಲರೂ ಜಾಗೃತರಾಗಿ ಮನೆ ಸುತ್ತಮುತ್ತಲಲ್ಲಿ ಪಾರ್ಥೇನಿಯಂ ಬೆಳೆದಲ್ಲಿ ಅವುಗಳ ನಿರ್ಮೂಲನೆಗೆ ಮುಂದಾಗಬೇಕು ಎಂದರು.

ವಿದ್ಯಾರ್ಥಿಗಳು ಪಾರ್ಥೇನಿಯಂ ಕಳೆಗಳು ಕೃಷಿ ಚಟುವಟಿಕೆಯ ಮೇಲೆ ಹೇಗೆ ಅಡ್ಡಪರಿಣಾಮ ಬೀರಿ, ಬೆಳೆಯ ಇಳುವರಿ ಕುಂಠಿತ ಗೊಳ್ಳುವಂತೆ ಮಾಡುವ ಜೊತೆಯಲ್ಲಿ ಉತ್ತಮ ಕೃಷಿ ಪರಿಸರ ಸಮತೋಲನ ಹಾಳು ಮಾಡುವ ಬಗ್ಗೆ ಸಚಿತ್ರ ವಿವರಣೆ ನೀಡಿ ಗ್ರಾಮಸ್ಥರು, ರೈತರಲ್ಲಿ ಪಾರ್ಥೇನಿಯಂ ನಿರ್ಮೂಲನೆ ಕ್ರಮಗಳ ಬಗ್ಗೆ ಅರಿವು ಮೂಡಿಸಿದರು.

ಪಾರ್ಥೇನಿಯಂ ನಿರ್ಮೂಲನೆ ನಮ್ಮೆಲ್ಲರ ಹೊಣೆ, ಪಾರ್ಥೇನಿಯಂ ಮುಕ್ತ ಗುನ್ನಾಗರೆ ಗ್ರಾಮ ಎಂಬ ಘೋಷ ವಾಕ್ಯಗಳ ಮೂಲಕ ಗ್ರಾಮದಲ್ಲಿ ಜಾಥಾ ನಡೆಸಿದರು, ನಂತರ ಗ್ರಾಮಸ್ಥರೊಂದಿಗೆ ಕೂಡಿ ಗ್ರಾಮದಲ್ಲಿ ಬೆಳೆದಿದ್ದು ಪಾರ್ಥೇನಿಯಂ ಕಳೆ ತೆರವುಗೊಳಿಸಿದರು, ಕಾರ್ಯಕ್ರಮದಲ್ಲಿ ಗುನ್ನಗೆರೆ ಗ್ರಾಮದ ಅಕ್ಕಪಕ್ಕ ಗ್ರಾಮಗಳ ಗ್ರಾಮಸ್ಥರು ಪಾಲ್ಗೊಂಡಿದ್ದರು, ಗ್ರಾಮ ಪಂಚಾಯಿತಿ ಸದಸ್ಯ ಮಾಯಣ್ಣಗೌಡ, ಗ್ರಾಮಸ್ಥರಾದ ರಂಗರಾಜು, ಚೇತನ್ ಕುಮಾರ್, ಪುಟ್ಟರಾಜು ಮುಂತಾದವರು ಹಾಜರಿದ್ದರು.

Get real time updates directly on you device, subscribe now.

Comments are closed.

error: Content is protected !!