ಕೊಡಿಗೇನಹಳ್ಳಿ: ನಿಮ್ಮೆಲ್ಲರ ಪ್ರೀತಿ ವಿಶ್ವಾಸಕ್ಕೆ ಆಭಾರಿಯಾಗಿದ್ದೇನೆ, ಈ ಪ್ರೀತಿ ಮತ್ತು ವಿಶ್ವಾಸವನ್ನು ಕೊನೆವರೆಗೂ ಉಳಿಸಿಕೊಳ್ಳುತ್ತೇನೆ, ಇದಕ್ಕೆ ಬೆಲೆ ಕಟ್ಟಲು ಸಾಧ್ಯವಿಲ್ಲ ಎಂದು ಸಹಕಾರಿ ಸಚಿವ ಕೆ.ಎನ್.ರಾಜಣ್ಣ ತಿಳಿಸಿದರು.
ಹೋಬಳಿಯ ಗುಟ್ಟೆ ಗ್ರಾಮದಲ್ಲಿ ವಾಲ್ಮೀಕಿ ಸಮುದಾಯ ಭವನ ಹಾಗೂ ಶುದ್ಧ ನೀರಿನ ಘಟಕ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿ, ನಿರ್ಮಿತಿ ಕೇಂದ್ರದ ವತಿಯಿಂದ ವಾಲ್ಮೀಕಿ ಸಮುದಾಯ ಭವನ ನಿರ್ಮಾಣ ಮಾಡಲಾಗುತ್ತಿದ್ದು ಎಲ್ಲಾ ಸಮುದಾಯದ ಅನುಕೊಲಕ್ಕೆ ಇದನ್ನು ಬಳಸಿಕೊಳ್ಳಬಹುದು, ನಮ್ಮದು ಬಡ ಜಾತಿ ಬಡವರ ಪಕ್ಷ ಅರ್ಹರಿಗೆ ಸರ್ಕಾರಿ ಸೌಲಭ್ಯ ತಲುಪಿಸಬೇಕು, ನನ್ನ ಕ್ಷೇತ್ರದ ಸರ್ವತೋಮುಖ ಅಭಿವೃದ್ಧಿಗೆ ಬದ್ಧನಾಗಿದ್ದೇನೆ, ಯಾರು ನಿಮ್ಮ ಜೊತೆಯಲ್ಲಿ ನಿಲ್ಲುತ್ತಾರೆ ಅವರಿಗೆ ನಿಮ್ಮ ಮತ ಸಿಗಬೇಕು, ಮೂಲಭೂತ ಸೌಕರ್ಯವನ್ನು ಹಳ್ಳಿಗಾಡಿನ ಎಲ್ಲಾ ಜನರಿಗೆ ತಲುಪಿಸುವುದು ನಮ್ಮ ಜವಾಬ್ದಾರಿ, ರಾಜಕಾರಣದಲ್ಲಿ ಪರ ವಿರೋಧ ಇರಬೇಕು, ರಾಜಕಾರಣದಲ್ಲಿ ದುಡ್ಡು ಅಥವಾ ಜಾತಿ ಇರಬೇಕು, ಇದನ್ನು ಅಸೆಂಬ್ಲಿಯಲ್ಲಿ ಹೇಳಿದ್ದೇನೆ ಎಂದರು.
ಶ್ಯಾನ್ ಭೂಗ್ ನಾಗರಾಜ್ ರಾವ್ ಮಾತನಾಡಿ, ಸುಮಾರು 25 ವರ್ಷಗಳ ಇತಿಹಾಸದಲ್ಲಿ ಇಷ್ಟು ಅನುದಾನ ಮತ್ತು ಅಭಿವೃದ್ಧಿ ಕಾರ್ಯಗಳು ನಡೆದಿರಲಿಲ್ಲ, ಗ್ರಾಮದ ಸಮಸ್ಯೆಗಳ ಬಗ್ಗೆ ಏನಾದರೂ ನಾನು ಬಗೆಹರಿಸುತ್ತೇನೆ ಎಂದು ವಿವಿಧ ಕಾರ್ಯಕ್ರಮಗಳ ಉದ್ಘಾಟನೆ ಮಾಡಿದ್ದಾರೆ ಎಂದರು.
ಕೆಎಂಎಫ್ ನಿರ್ದೇಶಕ ಎಂ.ಪಿ.ಕಾಂತರಾಜು ಮಾತನಾಡಿ, ರಾಜಣ್ಣನವರು ಈ ಹಿಂದೆ ಮಾಡಿರುವ ಜನಪರ ಕಾರ್ಯಗಳು ಅವರ ಗೆಲುವಿಗೆ ಕಾರಣವಾಗಿದೆ, ಲೋಕಸಭಾ ಚುನಾವಣೆಯಲ್ಲಿ ಹಿನ್ನಡೆ ಮಾಡಿದ್ದು ಮುಂದಿನ ಚುನಾವಣೆಗಳಲ್ಲಿ ಅವರ ಕೈ ಬಲಪಡಿಸಬೇಕು, ಹಿಂದುಳಿದ ಗ್ರಾಮಗಳ ಅಭಿವೃದ್ಧಿ ಆಗಬೇಕಾದರೆ ಜನಪರ ರಾಜಕಾರಣಿಯನ್ನು ನಾವು ಕೈಹಿಡಿಯಬೇಕು ಎಂದರು.
ಈ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಆದಿನಾರಾಯಣ ರೆಡ್ಡಿ, ಗ್ರಾಪಂ ಅಧ್ಯಕ್ಷೆ ಆಂಜಿನಮ್ಮ ನ್ಯಾತಪ್ಪ, ಉಪಾಧ್ಯಕ್ಷ ಶಬೀನ ಸಿಕಂದರ್, ಗ್ರಾಪಂ ಸದಸ್ಯರಾದ ದೀಪಕ್, ಅಂಜಮ್ಮ, ಶ್ರೀರಂಗ ನಾಯಕ, ಇಒ ಲಕ್ಷ್ಮಣ್, ಗ್ರೇಡ್- 2 ತಹಶೀಲ್ದಾರ್ ನಂದಿನಿ, ಮುಖಂಡರಾದ ಸೀತಾರಾಮ್, ಶಾಮೀರ್, ಎನ್.ಹನುಮಂತರಾಯಪ್ಪ, ಅಂಜಿನಪ್ಪ ಸೇರಿದಂತೆ ಅಧಿಕಾರಿಗಳು ಹಾಜರಿದ್ದರು.
Comments are closed.