ಕುಣಿಗಲ್ ನಲ್ಲಿ ಹೈಟೆಕ್ ಬಸ್ ನಿಲ್ದಾಣ ನಿರ್ಮಾಣ

ಕಾಮಗಾರಿಗೆ ಕೊನೆಗೂ ಮುಕ್ತಿ- 9.50 ಕೋಟಿ ರೂ. ವೆಚ್ಚ

17

Get real time updates directly on you device, subscribe now.


ಕುಣಿಗಲ್: ಎರಡು ದಶಕಗಳಿಂದ ನೆನೆಗುದಿಗೆ ಬಿದ್ದಿದ್ದ ಆಧುನಿಕ ಪುರಸಭೆ ಬಸ್ ನಿಲ್ದಾಣ ಕಾಮಗಾರಿಗೆ ಕೊನೆಗೂ ಮುಕ್ತಿ ದೊರಕಿದ್ದು 9.50 ಕೋಟಿ ರೂ.ವೆಚ್ಚದ ಬಸ್ ನಿಲ್ದಾಣ ಕಾಮಗಾರಿ ಟೆಂಡರ್ ಅಗತ್ಯ ಪ್ರಕ್ರಿಯೆಗೆ ಚಾಲನೆ ದೊರೆತಿದೆ.
ಪಟ್ಟಣದ ಹೃದಯ ಭಾಗದಲ್ಲಿ ಇರುವ ಪುರಸಭೆ ಬಸ್ ನಿಲ್ದಾಣಕ್ಕೆ 125 ವರ್ಷದ ಇತಿಹಾಸ ಇದೆ, 1910 ರಲ್ಲಿ ಪುರಸಭೆ ಬಸ್ ನಿಲ್ದಾಣ ನಿರ್ಮಾಣವಾಗಿದ್ದು ಕಾಲ ಕಾಲಕ್ಕೆ ತಕ್ಕಂತೆ ಮಾರ್ಪಾಡಾಗುತ್ತಾ ಬಂದಿತು, ಮೇ 2005ರಲ್ಲಿ ಆಧುನಿಕ ಬಸ್ ನಿಲ್ದಾಣ ನಿರ್ಮಿಸಲು ಅಂದಿನ ಜೆಡಿಎಸ್ ಪುರಸಭೆ ಆಡಳಿತ ಪುರಸಭೆ ಬಸ್ ನಿಲ್ದಾಣದಲ್ಲಿದ್ದ ಮಳಿಗೆಗಳನ್ನು ತೆರವುಗೊಳಿಸಿತು, ಆದರೆ ಪುನರ್ ನಿರ್ಮಾಣಕ್ಕೆ ಮನಸು ಮಾಡಲಿಲ್ಲ, 2005ರಲ್ಲಿ ತೆರವುಗೊಂಡ ನಂತರ ಎರಡು ಬಾರಿ ಜೆಡಿಎಸ್ ಆಡಳಿತ, ಮೂರು ಬಾರಿ ಕಾಂಗ್ರೆಸ್ ಆಡಳಿತ ಪುರಸಭೆಯಲ್ಲಿ ಜಾರಿ ಯಾದರೂ ಬಸ್ ನಿಲ್ದಾಣ ಕಾಮಗಾರಿ ಶಾಸಕರು, ಪುರಸಭೆ ಜನಪ್ರತಿನಿಧಿಗಳ ಇಚ್ಚಾಶಕ್ತಿಯ ಕೊರತೆಯಿಂದ ನೆನೆಗುದಿಗೆ ಬೀಳುವಂತಾಯಿತು.

ಪುರಸಭೆ ಬಸ್ನಿಲ್ದಾಣ ಕಾಮಗಾರಿ ಆರಂಭಿಸುವಂತೆ ವಿವಿಧ ಕನ್ನಡ ಪರ ಸಂಘಟನೆಗಳು ಹಲವು ಬಾರಿ ಹೋರಾಟ, ಪ್ರತಿಭಟನೆ ನಡೆಸಿ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದರೂ ಜನಪ್ರತಿನಿಧಿಗಳು ಈ ಬಗ್ಗೆ ತಲೆಕೆಡಿಸಿ ಕೊಂಡಿರಲಿಲ್ಲ.

Get real time updates directly on you device, subscribe now.

Comments are closed.

error: Content is protected !!