ಬಾವಲಿಗಳ ಮರ ಮಾರಣಹೋಮಕ್ಕೆ ಹುನ್ನಾರ

ಮರಗಳನ್ನು ಉಳಿಸುವಂತೆ ಸೋಪನಹಳ್ಳಿ ಗ್ರಾಮಸ್ಥರ ಒತ್ತಾಯ

423

Get real time updates directly on you device, subscribe now.

ಗುಬ್ಬಿ: ತಾಲ್ಲೂಕಿನ ನಿಟ್ಟೂರು ಹೋಬಳಿ ಸೋಪನಹಳ್ಳಿ ಬಳಿಯಿರುವಂತಹ 2 ಮರಗಳಲ್ಲಿ ಸಾವಿರಾರು ಬಾವಲಿಗಳು ದಶಕಗಳ ಕಾಲದಿಂದಲೂ ಬದುಕನ್ನ ನಡೆಸುತ್ತಿದ್ದು ಅವುಗಳನ್ನು ರಸ್ತೆ ವಿಸ್ತರಣೆಯ ಹಿನ್ನೆಲೆಯಲ್ಲಿ ಎನ್.ಎಚ್.206 ಅಧಿಕಾರಿಗಳು ಅವುಗಳನ್ನು ಕಡಿಯಲೇಬೇಕು ಎಂದು ಹಠ ಮಾಡುತ್ತಿರುವ ಹಿನ್ನೆಲೆಯಲ್ಲಿ ಪರಿಸರ ಪ್ರೇಮಿಗಳು ಹಾಗೂ ಗ್ರಾಮಸ್ಥರು ಅವರ ವಿರುದ್ಧ ಪ್ರತಿಭಟನೆ ಮಾಡಿದ ಘಟನೆ ಶನಿವಾರ ನಡೆಯಿತು.
ಈ ಸಂದರ್ಭದಲ್ಲಿ ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ ಚಂದ್ರಶೇಖರಬಾಬು ಮಾತನಾಡಿ, ತುಮಕೂರಿನಿಂದ ಶಿವಮೊಗ್ಗ ಕಡೆಗೆ ಎನ್ಹೆಚ್ 206 ರಸ್ತೆ ಕಾಮಗಾರಿ ನಡೆಯುತ್ತಿದ್ದು, ಈ ಮಧ್ಯದಲ್ಲಿರುವ ಗುಬ್ಬಿ ತಾಲ್ಲೂಕಿನ ಸೋಪನಹಳ್ಳಿ ಗ್ರಾಮದ 2 ಮರಗಳನ್ನು ಉಳಿಸುವಂತೆ ಆರಂಭದಿಂದಲೂ ಕೇಳಿಕೊಳ್ಳುತ್ತಿದ್ದರು ಸಹ ಅಧಿಕಾರಿಗಳು ಮಾತ್ರ ಇದನ್ನು ಕಡಿಯಲು ಹಠ ಬಿದ್ದಿರುವ ರೀತಿಯಲ್ಲಿ ಮರ ಕಡಿಯಲು ಮುಂದಾಗಿದ್ದು ನಾವು ಸತ್ತರೂ ಪರವಾಗಿಲ್ಲ, ಈ ಮರಗಳನ್ನು ಕಡಿಯಲು ಮಾತ್ರ ಬಿಡುವುದಿಲ್ಲ, ಬಹಳ ಅಪರೂಪವಾದ ಸಾವಿರಾರು ಬಾವಲಿಗಳು ಮರದಲ್ಲಿದ್ದರೂ ಅವುಗಳನ್ನು ಓಡಿಸುವಂತಹ ಶತ ಪ್ರಯತ್ನ ಮಾಡುತ್ತಿದ್ದಾರೆ, ಇವುಗಳನ್ನು ಸಂರಕ್ಷಣೆ ಮಾಡಲೇಬೇಕು ಎಂಬುದು ಪರಿಸರ ಪ್ರೇಮಿಗಳ ಒತ್ತಾಸೆಯಾಗಿರುವುದು ಒಂದು ಕಡೆಯಾದರೆ ಗುಬ್ಬಿಯ ನ್ಯಾಯಾಲಯದಲ್ಲೂ ಈ ಮರಗಳನ್ನು ಉಳಿಸುವಂತೆ ದಾವೆಯನ್ನೂ ಹೂಡಿದ್ದು ನ್ಯಾಯಾಧೀಶರು ಕೂಡ ಸ್ಥಳಕ್ಕೆ ಆಗಮಿಸಿ ಈ ಮರಗಳನ್ನು ಉಳಿಸುವಂತೆ ಮಾಹಿತಿ ನೀಡಿದ್ದರೂ ಅವರಿಗೂ ಕೇರ್ ಮಾಡದಂತಹ ಅಧಿಕಾರಿಗಳು ಈ ಮರಗಳನ್ನು ಕತ್ತರಿಸಲು ಮುಂದಾಗಿರುವುದು ಸರಿಯಲ್ಲ, ಈ ಮರಗಳನ್ನು ಕಡಿಯಲು ಮುಂದಾದರೆ ಗ್ರಾಮಸ್ಥರು ಪರಿಸರ ಪ್ರೇಮಿಗಳು ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ನಡೆಸುವುದಾಗಿ ತಿಳಿಸಿದರು.
ರೈತ ಸಂಘದ ಮುಖಂಡ ಮಹಾದೇವಯ್ಯ ಮಾತನಾಡಿ ಈ 2 ಮರಗಳನ್ನು ಉಳಿಸಿಕೊಂಡಲ್ಲಿ ಸಾವಿರಾರು ಪಕ್ಷಿಗಳ ಸಂಕುಲ ಉಳಿಯುತ್ತದೆ, ಹಾಗಾಗಿ ಎನ್ಎಚ್ 206 ಅಧಿಕಾರಿಗಳು ಇದನ್ನು ಉಳಿಸಲೇಬೇಕು, ಇಲ್ಲದೆ ಹೋದರೆ ಇಡೀ ರೈತ ಸಂಘ ಹೋರಾಟದ ಹಾದಿ ಹಿಡಿಯಬೇಕಾಗುತ್ತದೆ, ಇದೆ ಅಲ್ಲದೆ ಕೆಲವು ಅಧಿಕಾರಿಗಳು ಗ್ರಾಮಸ್ಥರನ್ನು ಎತ್ತಿಕಟ್ಟುವಂತಹ ಕೆಲಸ ಮಾಡುತ್ತಿದ್ದು ಪ್ರತಿನಿತ್ಯ ಅವರ ಮನೆ ಬಳಿಗೆ ಹೋಗಿ ಅಳತೆ ಮಾಡಿ ಅವರನ್ನು ಹೆದರಿಸುವ ಕೆಲಸ ನಡೆಯುತ್ತಿವೆ, ಇದು ಇಲ್ಲೇ ನಡೆಯಬಾರದು ಎಂದರು.
ಸ್ಥಳಕ್ಕೆ ಧಾವಿಸಿದ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳಾದ ಸಿದ್ದರಾಮಪ್ಪ, ಯಶಸ್ವಿನಿ ಪ್ರತಿಭಟನಾ ನಿರತರೊಂದಿಗೆ ಮಾತನಾಡಿ ಕೇವಲ ಸ್ಥಳ ಪರಿಶೀಲನೆ ಮಾಡುತ್ತಿದ್ದೇವೆ, ಮರ ಕಡಿಯುವ ಕೆಲಸಕ್ಕೆ ಮುಂದಾಗಿಲ್ಲ, ಯಾವ ರೀತಿ ಮರಗಳನ್ನು ಉಳಿಸಬೇಕು ಎಂಬ ಬಗ್ಗೆ ಸಮಾಲೋಚನೆ ನಡೆಯುತ್ತಿದೆ ಎಂದು ತಿಳಿಸಿ ಪರಿಸ್ಥಿತಿ ತಿಳಿಗೊಳಿಸಿದರು.

Get real time updates directly on you device, subscribe now.

Comments are closed.

error: Content is protected !!