ಸಾಮೂಹಿಕ ಗಣಪತಿ ವಿಸರ್ಜನಾ ಮಹೋತ್ಸವ

ತಿಪಟೂರಿನಲ್ಲಿ ಅದ್ದೂರಿ ಮೆರವಣಿಗೆ- ಬಿಗಿ ಪೊಲೀಸ್ ಬಂದೋಬಸ್ತ್

31

Get real time updates directly on you device, subscribe now.


ತಿಪಟೂರು: ಗಾಂಧಿನಗರದ ಸಾಮೂಹಿಕ ಗಣಪತಿ ವಿಸರ್ಜನಾ ಮಹೋತ್ಸವ ಪೊಲೀಸ್ ಬಂದೋಬಸ್ತ್ ನಲ್ಲಿ ಶಾಂತಿ ಮತ್ತು ಸೌಹಾರ್ದತೆಯಿಂದ ನೆರವೇರಿತು.
ಗಣಪತಿ ವಿಸರ್ಜನಾ ಉತ್ಸವದ ಅಂಗವಾಗಿ ಇತ್ತೀಚೆಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶಾಂತಿ ಸಭೆ ಸೇರಿಸಿ ಕೆಲವು ನಿಬಂಧನೆಗಳನ್ನು ಸೂಚಿಸಿದ್ದರು, ಮುಸ್ಲಿಮರು ಹೆಚ್ಚು ವಾಸಿಸುವ ಅತಿ ಸೂಕ್ಷ್ಮ ಪ್ರದೇಶವೆಂದು ಗುರುತಿಸಲ್ಪಟ್ಟಿರುವ ಗಾಂಧಿನಗರದಲ್ಲಿ ಪೊಲೀಸ್ ಇಲಾಖೆ ನೀಡಿದ ಮಾರ್ಗಸೂಚಿಯಂತೆ ಉತ್ಸವ ಅದ್ದೂರಿಯಾಗಿ ಸಾಗಿತು, ಕಾರ್ಯಕ್ರಮಕ್ಕೆ ಶಾಸಕ ಕೆ.ಷಡಕ್ಷರಿ, ಮಾಜಿ ಸಚಿವ ಬಿ.ಸಿ.ನಾಗೇಶ್, ನಗರಸಭಾ ಸದಸ್ಯರಾದ, ಪಿ.ಜೆ.ರಾಮ್ ಮೋಹನ್, ಮೆಡಿಕಲ್ ಶ್ರೀನಿವಾಸ್, ತೆಂಗಿನಕಾಯಿ ಹೊಡೆಯುವ ಮುಖಾಂತರ ಚಾಲನೆ ನೀಡಿದರು, ರಸ್ತೆಯುದ್ದಕ್ಕೂ ಹಿಂದೂ ಸಂಘಟನೆಗಳ ಮುಖಂಡರು ಜೈಶ್ರೀರಾಮ್, ಜೈ ಶಿವಾಜಿ ಘೋಷಣೆಯೊಂದಿಗೆ ಕೇಸರಿ ಧ್ವಜದೊಂದಿಗೆ ಸಾಗಿದರು.

27 ಗಣಪತಿಗಳ ಬದಲು 9 ಗಣಪತಿಗಳ ಉತ್ಸವ ನಡೆಯಿತು, ನಗರದ ಅಮಾನಿ ಕೆರೆಯ ಕಲ್ಯಾಣಿಯಲ್ಲಿ ಪೂಜಾ ಕೈಂಕರ್ಯದೊಂದಿಗೆ ವಿಸರ್ಜಿಸಲಾಯಿತು, ಎಸ್ಪಿ ಸೇರಿದಂತೆ, ಇಬ್ಬರು ಡಿವೈಎಸ್ಪಿ, 10 ಇನ್ಸ್ ಪೆಕ್ಟರ್, 24 ಪಿಎಸ್ ಐ, 52 ಎಎಸ್ ಐ, 2 ಕೆಎಸ್ ಆರ್ ಪಿ ವಾಹನ, ಒಂದು ಆರ್ ಐವಿಎ, ಇನ್ನೊಂದು ದಿವ್ಯದೃಷ್ಟಿ ವಾಹನ ಡಿವೈಎಸ್ಪಿ ವಿನಾಯಕ ಶಟೆಗೆರ, ಗ್ರಾಮಾಂತರ ಪೊಲೀಸ್ ಠಾಣೆ ಇನ್ಸ್ ಪೆಕ್ಟರ್ ಸಿದ್ದರಾಮೇಶ್ವರ, ನಗರ ಠಾಣೆ ಇನ್ಸ್ ಪೆಕ್ಟರ್ ವೆಂಕಟೇಶ್ ನೇತೃತ್ವದಲ್ಲಿ ಆಯೋಜನೆಗೊಳಿಸಿತ್ತು.

ಕಳೆದ ಬಾರಿ 24 ಗಣಪತಿಗಳ ಪ್ರತಿಷ್ಠಾಪನೆ ಈ ಭಾಗದಲ್ಲಿ ನಡೆದಿತ್ತು, ಈ ಬಾರಿ ಪೊಲೀಸ್ ಮತ್ತು ವಿವಿಧ ಇಲಾಖೆಗಳ ಕಟ್ಟುನಿಟ್ಟಿನ ಆದೇಶ ಪಾಲನೆಗೆ ಬೇಸತ್ತು 9 ಗಣಪತಿಗಳ ಪ್ರತಿಷ್ಠಾಪನೆ ಹಾಗೂ ಉತ್ಸವ ನಡೆಯಿತು, ಸ್ವಾತಂತ್ರ ಪೂರ್ವ ಹಿಂದೂ ಸಂಘಟನೆಗೆ ಆಚರಿಸಿಕೊಂಡು ಬಂದ ಗಣಪತಿ ಪ್ರತಿಷ್ಠಾಪನೆ ಮುಂದೆ ಕ್ಷಿಣಿಸುವ ಸೂಚನೆ ಕಾಣುತ್ತದೆ, ಈ ಭಾಗದ ನಗರಸಭೆಯ ಅತ್ಯಧಿಕ 11 ಸದಸ್ಯರಲ್ಲಿ ಕೇವಲ ಒಬ್ಬರೆ ನಗರಸಭಾ ಸದಸ್ಯ ಮೆಡಿಕಲ್ ಶ್ರೀನಿವಾಸ್ ಉತ್ಸವದಲ್ಲಿ ಪಾಲ್ಗೊಂಡು ಗಮನ ಸೆಳೆದರು, ಸರ್ಕಾರ ಮುಂದೆ ನಿಬಂಧನೆಗಳನ್ನು ಸಡಿಲಗೂಳಿಸಲಿ ಎಂದು ಸಾರ್ವಜನಿಕರು ಅಭಿಪ್ರಾಯ ವ್ಯಕ್ತಪಡಿಸಿದರು.

Get real time updates directly on you device, subscribe now.

Comments are closed.

error: Content is protected !!