ರವೀಂದ್ರ ಕಲಾನಿಕೇತನದಲ್ಲಿ ವಿಶ್ವ ದೃಶ್ಯಕಲಾ ದಿನಾಚರಣೆ

189

Get real time updates directly on you device, subscribe now.

ತುಮಕೂರು: ಖ್ಯಾತ ಅಂತಾರಾಷ್ಟ್ರೀಯ ಕಲಾವಿದ ಲಿಯನಾರ್ಡೊ ಡಾವೆಂಚಿ ಹುಟ್ಟುಹಬ್ಬದ ಪ್ರಯುಕ್ತ ಪ್ರಪಂಚದಾದ್ಯಂತ ವಿಶ್ವ ದೃಶ್ಯಕಲಾ ದಿನಾಚರಣೆ ಆಚರಿಸಲಾಯಿತು.
ತುಮಕೂರಿನ ರವೀಂದ್ರ ಕಲಾನಿಕೇತನ ಶಾಲೆಯ ಆವರಣದಲ್ಲಿ ವಿಶ್ವ ದೃಶ್ಯ ಕಲಾ ದಿನಾಚರಣೆ ಪ್ರಯುಕ್ತ ಒಂದು ದಿನದ ಕಲೆಯ ಕಾರ್ಯಾಗಾರ ಹಮ್ಮಿಕೊಳ್ಳಲಾಗಿತ್ತು.
ಕರ್ನಾಟಕ ಲಲಿತ ಕಲಾ ಅಕಾಡೆಮಿ ಇದೇ ಮೊಟ್ಟಮೊದಲ ಬಾರಿಗೆ ರಾಜ್ಯದ ಸುಮಾರು 18 ಜಿಲ್ಲೆಗಳಲ್ಲಿ ವಿಶ್ವ ದೃಶ್ಯಕಲಾ ದಿನಾಚರಣೆ ಆಚರಿಸಲು ತೀರ್ಮಾನಿಸಿದ ಪ್ರಯುಕ್ತ ತುಮಕೂರಿನ ರವೀಂದ್ರ ಕಲಾನಿಕೇತನ ಚಿತ್ರಕಲಾ ಮಹಾವಿದ್ಯಾಲಯದ ಸಹಯೋಗದಲ್ಲಿ ಅತ್ಯಂತ ಆಕರ್ಷಕ ಹಾಗೂ ಕ್ರಿಯಾಶೀಲವಾಗಿ ಕಲೆಯ ಕಾರ್ಯಾಗಾರ ನಡೆಯಿತು.
ಸ್ಥಳೀಯ ಹಿರಿಯ ಮತ್ತು ಕಿರಿಯ ಕಲಾವಿದರು ಒಂದೆಡ ಸೇರಿ ಸುಮಾರು 10 ಕಲಾವಿದರು ಪೇಂಟಿಂಗ್, 10 ಕಲಾವಿದರು ಹುಡ್ ಕಟ್ ಮುದ್ರಣ ಕಲೆ, 20 ಕಲಾವಿದರು ರೇಖಾಚಿತ್ರ ರಚಿಸುವುದರ ಮುಖಾಂತರ ವಿಶ್ವ ದೃಶ್ಯಕಲಾ ದಿನಾಚರಣೆಗೆ ಮೆರುಗು ತಂದರು. ಕಲಾವಿದರ ಕೈಯಲ್ಲಿ ಅರಳಿದ ಚಿತ್ರಗಳು ಎಲ್ಲರ ಮನಸೂರೆಗೊಳ್ಳುವಂತಿದ್ದವು.
ಈ ಸಂದರ್ಭದಲ್ಲಿ ಪ್ರಾಚಾರ್ಯ ಕಿಶೋರ್ ಕುಮಾರ್, ಬಾಪೂಜಿ ವಿದ್ಯಾಸಂಸ್ಥೆಯ ಖಜಾಂಚಿ ಟಿ.ಪಿ.ಶಂಕರ ಲಿಂಗಯ್ಯ, ಶಿಬಿರದ ಸಂಚಾಲಕ ಮನು ಚಕ್ರವರ್ತಿ, ಕರ್ನಾಟಕ ಲಲಿತ ಕಲಾ ಅಕಾಡೆಮಿ ಸದಸ್ಯ ನರಸಿಂಹಮೂರ್ತಿ ಎಂ.ಎನ್., ಚಿತ್ರಕಲಾ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ಕೆ.ಎಂ.ರವೀಶ್ ಹಾಗೂ ಶಿಬಿರದಲ್ಲಿ ಕಲಾವಿದರಾದ ರಂಗಸ್ವಾಮಯ್ಯ, ಎಸ್.ವಿ.ಆನಂದ್, ಡಿ.ಜಗದೀಶ್, ಅರ್ಪಿತಾ, ಮಂಜು, ಹರ್ಷ, ನರಸಿಂಹಮೂರ್ತಿ, ಬಸವರಾಜು ಭಾಗವಹಿಸಿದ್ದರು.

Get real time updates directly on you device, subscribe now.

Comments are closed.

error: Content is protected !!