ಸಾರ್ವಜನಿಕ ಆಸ್ಪತ್ರೆ ಮೇಲೆ ಲೋಕಾಯುಕ್ತ ದಾಳಿ

20

Get real time updates directly on you device, subscribe now.


ಕುಣಿಗಲ್: ಲೋಕಾಯುಕ್ತ ನಿರೀಕ್ಷಕರ ತಂಡ ಪಟ್ಟಣದ ಸಾರ್ವಜನಿಕ ಆಸ್ಪತ್ರೆ ಮೇಲೆ ದಾಳಿ ನಡೆಸಿ ವಿವಿಧ ದಾಖಲೆಗಳ ಪರಿಶೀಲನೆ ನಡೆಸಿತು.
ಲೋಕಾಯುಕ್ತ ಅಧೀಕ್ಷಕರ ತಂಡ ಪಟ್ಟಣಕ್ಕೆ ಭೇಟಿ ನೀಡಿ ಸಾರ್ವಜನಿಕರ ಕುಂದು ಕೊರತೆ ಆಲಿಸಿ ಅಹವಾಲು ಸ್ವೀಕರಿಸಿತ್ತು, ಲೋಕಾಯುಕ್ತ ನಿರೀಕ್ಷಕ ಶಿವರುದ್ರಪ್ಪ ತಂಡ ಭೇಟಿ ನೀಡಿದ ವೇಳೆ ಎಕ್ಸ್ ರೆ ತಂತ್ರಜ್ಞ ಕೆಲ ದಾಖಲೆ ಸಿದ್ಧಪಡಿಸುತ್ತಿದ್ದುದನ್ನು ನೋಡಿ ಪರಿಶೀಲಿಸಿ ಕೆಲ ದಾಖಲೆ ವಶಕ್ಕೆ ಪಡೆದು ಔಷಧ ಉಗ್ರಾಣ ಹಾಗೂ ದಾಖಲೆ ನಿರ್ವಹಿಸಿದ್ದ ಕೊಠಡಿಗೆ ಬೀಗ ಜಡಿದು ತೆರಳಿದ್ದು ಗುರುವಾರ ಬೆಳಗ್ಗೆ ಆಗಮಿಸಿದ ತಂಡವೂ ಔಷಧ ಖರೀದಿ, ದಾಸ್ತಾನು ವಿತರಣೆ ಬಗ್ಗೆ ಸಮಗ್ರ ತಪಾಸಣೆ ನಡೆಸಿತು.
ಆಸ್ಪತ್ರೆಯ ಔಷಧ ಖರೀದಿ, ನಿರ್ವಹಣೆ ವಿತರಣೆಗೆ ಸಂಬಂಧಿಸಿದಂತೆ ಎಕ್ಸ್ ರೆ ತಂತ್ರಜ್ಞ ಜನಾರ್ಧನ್ ಎಂಬಾತ ಎಲ್ಲಾ ವಹಿವಾಟು ನಿರ್ವಹಣೆ ಮಾಡುತ್ತಿದ್ದುದರಿಂದ ಸಮಗ್ರ ವಿಚಾರಣೆ ನಡೆಸಿದ ತಂಡ ಖರೀದಿಗೆ ದಾಖಲೆ ಸಿಕ್ಕರೆ ಔಷಧ ವಿತರಣೆಗೆ ಸಂಬಂಧಿಸಿದಂತೆ ಸಮರ್ಪಕ ದಾಖಲೆ ನಿರ್ವಹಣೆ ಮಾಡಿಲ್ಲದ ಬಗ್ಗೆ ಪರಿಶೀಲನೆ ವೇಳೆಯಲ್ಲಿ ತಂಡ ಅಸಮಾಧಾನ ವ್ಯಕ್ತಪಡಿಸಿದ್ದು ಬಂದಂತಹ ಬಹುತೇಕ ಅನುದಾನ ಔಷಧ ಖರೀದಿಗೆ ಬಳಸಲಾಗಿದ್ದು ಈ ಬಗ್ಗೆ ತಂಡವೂ ಸಂಜೆವರೆಗೂ ಸಮರ್ಪಕ ನಡೆಸಿದ್ದು ಕಳೆದ ಒಂದು ವರ್ಷದ ದಾಖಲೆ ಸೇರಿದಂತೆ ವಿವಿಧ ದಾಖಳೆಗಳ ಪರಿಶೀಲನೆ ನಡೆಸಿ ಸಾವಿರಾರು ಪುಟ ಬಿಲ್ ಸೇರಿದಂತೆ ಇತರೆ ದಾಖಲೆಗಳ ನಕಲು ವಶಕ್ಕೆ ಪಡೆದಿದ್ದು, ತನಿಖೆ ಸಂಜೆ ವೇಳೆಯವರೆಗೂ ಮುಂದುವರೆದಿತ್ತು.

Get real time updates directly on you device, subscribe now.

Comments are closed.

error: Content is protected !!