ಸಿದ್ಧಗಂಗಾ ಹೆಲ್ತ್ ರನ್ 10 ಕೆ. ಮ್ಯಾರಥಾನ್

24

Get real time updates directly on you device, subscribe now.


ತುಮಕೂರು: ಸೆಪ್ಟೆಂಬರ್ 29 ರಂದು ಸಿದ್ಧಗಂಗಾ ಆಸ್ಪತ್ರೆ ವತಿಯಿಂದ ನಡೆಯಲಿರುವ ಐತಿಹಾಸಿಕ ಸಿದ್ಧಗಂಗಾ ಹೆಲ್ತ್ ರನ್ 10 ಕೆ. ಮ್ಯಾರಥಾನ್ ನೋಂದಣಿ ಆರಂಭವಾಗಿದ್ದು ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಹೃದ್ರೋಗದ ಕುರಿತು ಅರಿವು ಮೂಡಿಸಲು ನಮ್ಮ ಜೊತೆ ಹೆಜ್ಜೆ ಹಾಕಬೇಕು ಎಂದು ಸಿದ್ಧಗಂಗಾ ಮೆಡಿಕಲ್ ಕಾಲೇಜು ಪ್ರಾಚಾರ್ಯರಾದ ಡಾ.ಶಾಲಿನಿ ತಿಳಿಸಿದರು.
ನಗರದ ಸಿದ್ಧಗಂಗಾ ಆಸ್ಪತ್ರೆಯಲ್ಲಿ ಮ್ಯಾರಥಾನ್ ನೋಂದಣಿಗೆ ಚಾಲನೆ ನೀಡಿ ಮಾತನಾಡಿ, ಅಂದು ಬೆಳಗ್ಗೆ 6 ಗಂಟೆಗೆ ಆಸ್ಪತ್ರೆ ಆವರಣದಲ್ಲಿ ವಿವಿಧ ಗಣ್ಯರು ಹಾಗೂ ಜಿಲ್ಲಾಮಟ್ಟದ ಅಧಿಕಾರಿಗಳ ಸಮ್ಮುಖದಲ್ಲಿ ಸಿದ್ಧಗಂಗಾ ಮಠಾಧ್ಯಕ್ಷ ಸಿದ್ಧಲಿಂಗ ಮಹಾ ಸ್ವಾಮೀಜಿ ಚಾಲನೆ ನೀಡಲಿದ್ದಾರೆ ಎಂದು ಮಾಹಿತಿ ನೀಡಿದರು.

ಸಿದ್ಧಗಂಗಾ ಸೂಪರ್ ಸ್ಪೆಷಾಲಿಟಿ ವಿಭಾಗದ ನಿರ್ದೇಶಕ್ ಹಾಗೂ ಹೃದ್ರೋಗ ತಜ್ಞ ಡಾ.ಭಾನುಪ್ರಕಾಶ್ ಮಾತನಾಡಿ, ಸೆ.29 ಕ್ಕೆ ವಿಶ್ವ ಹೃದಯ ದಿನವನ್ನಾಗಿ ಆಚರಿಸಲಾಗುತ್ತಿದ್ದು, ಇದರ ಭಾಗವಾಗಿ ನಡೆಯಲಿರುವ ಮ್ಯಾರಥಾನ್ ಪುರುಷ- ಮಹಿಳೆಯರ ವಿಭಾಗದಲ್ಲಿ 10ಕಿ.ಮೀ ಹಾಗೂ 5 ಕಿ.ಮೀ. ಹಾಗೂ 50 ವರ್ಷ ಮೇಲ್ಪಟ್ಟವರಿಗೆ 10 ಕಿ.ಮೀ. ಮ್ಯಾರಥಾನ್ ನಡೆಯಲಿದ್ದು 2 ಕಿ.ಮೀ ಮಜಾ ರನ್ ಕೂಡ ಏರ್ಪಡಿಸಲಾಗಿದೆ, ವಿವಿಧ ವಿಭಾಗದ ವಿಜೇತರಿಗೆ ಒಟ್ಟು 1.5 ಲಕ್ಷ (ಒಂದೂವರೆ ಲಕ್ಷ) ಮೌಲ್ಯದ ಬಹುಮಾನವಿರಲಿದೆ ಎಂದರು.

ಸಿದ್ಧಗಂಗಾ ವೈದ್ಯಕೀಯ ಕಾಲೇಜು ಮೇಲ್ವಿಚಾರಕ ಡಾ.ನಿರಂಜನಮೂರ್ತಿ ಮಾತನಾಡಿ, 5 ಕಿ.ಮೀ ಮ್ಯಾರಥಾನ್ ಸಿದ್ಧಗಂಗಾ ಆಸ್ಪತ್ರೆಯಿಂದ ಆರಂಭವಾಗಿ ಕೆಇಬಿ ರಸ್ತೆ ಮೂಲಕ ಸಿದ್ಧಗಂಗಾ ಆಸ್ಪತ್ರೆಯಲ್ಲಿ ಅಂತ್ಯವಾಗಲಿದೆ, 10 ಕೆ ಮ್ಯಾರಥಾನ್ ಆಸ್ಪತ್ರೆಯಿಂದ ಹೊರಟು ಟೌನ್ ಹಾಲ್, ಕಾಲ್ ಟ್ಯಕ್ಸ್, ರಿಂಗ್ ರೋಡ್, ಟಿ.ಪಿ.ಕೈಲಾಸಂ ರಸ್ತೆ ಮೂಲಕ ಸಾಗಿ ಪುನಃ ಆಸ್ಪತ್ರೆಯಲ್ಲಿ ಕೊನೆಗೊಳ್ಳಲಿದೆ ಎಂದರು.

ಸಿಇಓ ಡಾ.ಸಂಜೀವಕುಮಾರ್ ಮಾತನಾಡಿ, ಕಳೆದ 4 ವರ್ಷಗಳಿಂದ ನಡೆಯುತ್ತಿರುವ ಮ್ಯಾರಥಾನ್ ಗೆ ಎಲ್ಲಾ ತಯಾರಿ ಪೂರ್ಣಗೊಂಡಿದ್ದು, ರಾಜ್ಯ ಸೇರಿದಂತೆ ಹೊರ ರಾಜ್ಯಗಳ ಸ್ಪರ್ಧಿಗಳೂ ಕೂಡ ಆಗಮಿಸಲಿದ್ದಾರೆ, ನೋಂದಣಿಗಾಗಿ 7624981879 ಅಥವಾ 9035052784 ಕರೆಮಾಡಬಹುದು ಎಂದರು.

ಅಥ್ಲೆಟಿಕ್ ಅಸೋಸಿಯೇಷನ್ ತುಮಕೂರು ಕಾರ್ಯದರ್ಶಿ ಪ್ರಭಾಕರ್, ದೈಹಿಕ ಶಿಕ್ಷಣದ ನಿರ್ದೇಶಕರಾದ ಜಯಶಂಕರ್,ಯೋಗೀಶ್, ಗೋಲ್ಡ್ ಜಿಮ್ ಪ್ರತಾಪ್ ಹಾಜರಿದ್ದರು.

Get real time updates directly on you device, subscribe now.

Comments are closed.

error: Content is protected !!