ಮಧುಗಿರಿ: 7ನೇ ವೇತನ ಆಯೋಗ ಜಾರಿಯಿಂದಾಗಿ ಸರ್ಕಾರಕ್ಕೆ ವರ್ಷಕ್ಕೆ 20 ಸಾವಿರ ಕೋಟಿ ಹೊರೆಯಾಗಲಿದೆ, ಆದರೂ ಸರ್ಕಾರಿ ನೌಕರರ ಹಿತ ಕಾಯುವ ದೃಷ್ಟಿಯಿಂದ 7 ನೇ ವೇತನ ಆಯೋಗ ಜಾರಿಗೊಳಿಸಲಾಗಿದೆ ಎಂದು ಸಹಕಾರ ಸಚಿವ ಕೆ.ಎನ್. ರಾಜಣ್ಣ ತಿಳಿಸಿದರು.
ಪಟ್ಟಣದ ಮಾಲೀ ಮರಿಯಪ್ಪ ರಂಗ ಮಂದಿರದಲ್ಲಿ ಶನಿವಾರ ಡಾ.ಸರ್ವಪಲ್ಲಿ ರಾಧಾಕೃಷ್ಣನ್ ರವರ 137 ನೇ ಜಯಂತಿ ಹಾಗೂ ಶಿಕ್ಷಕರ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಸರ್ಕಾರ ಸರ್ಕಾರಿ ನೌಕರರ ಬೇಡಿಕೆ ಈಡೇರಿಸಲು ಬದ್ದವಾಗಿದ್ದು, ಸರ್ಕಾರಕ್ಕೆ ವಾರ್ಷಿಕ 20 ಸಾವಿರ ಕೋಟಿ ಹೊರೆಯಾದರೂ ಸಹ 7 ನೇ ವೇತನ ಆಯೋಗ ಜಾರಿಗೊಳಿಸುವ ಮೂಲಕ ಸರ್ಕಾರಿ ನೌಕರರ ಹಿತ ಕಾಯಲಾಗಿದೆ, ಸರ್ಕಾರಿ ನೌಕರರ ಬಹುದಿನಗಳ ಬೇಡಿಕೆಯಾದ ಓಪಿಎಸ್ ಜಾರಿಗೆ ನಮ್ಮ ಪಕ್ಷ ಬದ್ದವಾಗಿದೆ, ಹಿಂಬಡ್ತಿಯಿಂದ ರಾಜ್ಯದ 1.20 ಲಕ್ಷ ಶಿಕ್ಷಕರಿಗೆ ಅನ್ಯಾಯವಾಗಲಿದೆ. ಆದ್ದರಿಂದ ಇದನ್ನು ಪರಿಶೀಲನೆ ನಡೆಸಿ ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪನವರ ಗಮನಕ್ಕೆ ತಂದಿದ್ದು, ಅವರು ಮುಖ್ಯಮಂತ್ರಿ ಗಳ ಗಮನಕ್ಕೆ ತಂದು ಸಮಸ್ಯೆ ಬಗೆಹರಿಸಲಾಗುವುದು ಎಂದು ಭರವಸೆ ನೀಡಿದ್ದು, ಇದರ ಬಗ್ಗೆ ನನ್ನ ಮೇಲೆ ವಿಶ್ವಾಸವಿಡಿ ಎಂದು ಶಿಕ್ಷಕರಿಗೆ ಭರವಸೆ ನೀಡಿದರು.
ಪಿಯು ಡಿಡಿಪಿಐ ಬಾಲ ಗುರುಮೂರ್ತಿ ಮಾತನಾಡಿ, ಶಿಕ್ಷಕ ತಾಯಿಯಂತಿರಬೇಕು, ಜನತೆ ಶಿಕ್ಷಕರ ಮೇಲೆ ಬಹಳಷ್ಟು ನಂಬಿಕೆಯಿರಿಸಿದ್ದು, ಗುಣಮಟ್ಟದ ಶಿಕ್ಷಣ ನೀಡಿದರೆ ಪಲಿತಾಂಶ ತಾನೇಗೇ ಬರುತ್ತದೆ, ಟ್ಯಕ್ಸ್ ಕಟ್ಟುವ ಸಂಬಳ ಪಡೆಯುವ ಶಿಕ್ಷಕರು ಮಕ್ಕಳ ಕಲಿಕೆಗೆ ಹೆಚ್ಚಿನ ಒತ್ತು ನೀಡುವ ಮೂಲಕ ಸಮಾಜದ ಋಣ ತೀರಿಸಬೇಕು, ಶಿಕ್ಷಕರು ಸಮಾಜಕ್ಕೆ ಏನೆಲ್ಲ ಮಾಡಬಹುದು ಎಂಬುದಕ್ಕೆ ರಾಧಾಕೃಷ್ಣನ್, ಸಾವಿತ್ರಿ ಬಾ ಪುಲೆ ಆದರ್ಶ, ಯಶಸ್ವಿ ಶಿಕ್ಷಕ ಎಲೆಮರೆ ಕಾಯಿಯಂತೆ ದೇಶ ಕಟ್ಟುತ್ತಿದ್ದು, ಅಂತಹ ಶಿಕ್ಷಕರಿಗೆ ನಮನಗಳನ್ನು ಸಲ್ಲಿಸಬೇಕಿದೆ, ಶಿಕ್ಷಕ ಮಕ್ಕಳಲ್ಲಿ ಹೊಸ ಐಡಿಯಾಗಳನ್ನು ಹುಟ್ಟು ಹಾಕಬೇಕು, ಅಂತಹ ಕಲಿಕೆಯನ್ನು ಮಕ್ಕಳಿಗೆ ನೀಡಬೇಕು, ಶಿಸ್ತು ಮೂಡಿಸಬೇಕು, ಸಮಾಜ ಕಟ್ಟುವ ದೊಡ್ಡ ಜವಾಬ್ದಾರಿ ಶಿಕ್ಷಕರ ಮೇಲಿದ್ದು, ಯಾರಿಗೂ ನೀಡದ ಗೌರವವನ್ನು ಸಮಾಜ ಶಿಕ್ಷಕರಿಗೆ ನೀಡುತ್ತಿದೆ ಎಂದರು.
ಡಿಡಿಪಿಐ ಗಿರಿಜಾ, ಉಪ ವಿಭಾಗಾದಿಕಾರಿ ಗೋಟೂರು ಶಿವಪ್ಪ, ತಹಶೀಲ್ದಾರ್ ಶೀರಾನ್ ತಾಜ್, ಶಿಕ್ಷಣಾಧಿಕಾರಿ ರಾಜಣ್ಣ, ಕ್ಷೇತ್ರ ಶಿಕ್ಷಣಾಧಿಕಾರಿ, ಹನುಮಂತ ರಾಯಪ್ಪ, ತಾಲೂಕು ಪಂಚಾಯಿತಿ ಕಾರ್ಯ ನಿರ್ವಹಣಾಧಿಕಾರಿ ಲಕ್ಷ್ಮಣ್, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ವೆಂಕಟ ರಂಗಾರೆಡ್ಡಿ, ತಾಲೂಕು ಅಧ್ಯಕ್ಷ ಸಂಜಯ್, ಡಿವೈಎಸ್ಪಿ ರಾಮಚಂದ್ರಪ್ಪ, ಪುರಸಭಾ ಮಾಜಿ ಅಧ್ಯಕ್ಷರಾದ ಗಂಗಣ್ಣ, ನಂಜುಂಡಯ್ಯ, ವಯಸ್ಕರ ಶಿಕ್ಷಣ, ಇಲಾಖೆಯ ನರಸಿಂಹಯ್ಯ ಇತರರು ಇದ್ದರು.
Comments are closed.