ತುಮಕೂರು: ಜಿಲ್ಲಾ ಬ್ರಾಹ್ಮಣ ಸಭಾದ ವತಿಯಿಂದ ನಗರದ ಬಿ.ಹೆಚ್. ರಸ್ತೆಯ ಶೃಂಗೇರಿ ಶಂಕರ ಮಠದಲ್ಲಿ ಅಷ್ಟಾವಧಾನ ಕಾರ್ಯಕ್ರಮ ಶನಿವಾರ ಆಯೋಜಿಸಲಾಗಿತ್ತು.
ಉತ್ತಮ ಕವಿ, ಅತ್ಯುತ್ತಮ ಉಪನ್ಯಾಸಕ, ಖ್ಯಾತ ಚಿಂತಕರೂ ಆಗಿರುವ ಶತಾವಧಾನಿ ಡಾ.ಆರ್.ಗಣೇಶ್ ಅವರು ಅಷ್ಟಾವಧಾನ ಕಾರ್ಯಕ್ರಮದ ಸಾನಿಧ್ಯ ವಹಿಸಿದ್ದರು.
ಅವಧಾನವೆಂದರೆ ಏಕಾಗ್ರತೆ. ಎಂಟು ದಿಕ್ಕುಗಳಿಂದ ಬರುವ ಪ್ರಶ್ನೆಗೆ ಅಷ್ಟಾವಧಾನವೆಂದು. ಹತ್ತು ದಿಕ್ಕುಗಳಿಂದ ಬರುವ ಪ್ರಶ್ನೆಗಳಿಗೆ ದಶಾವಧಾನವೆಂದೋ ಹಾಗೆಯೇ ಶತಾವಧಾನ, ಸಹಸ್ರಾವಧಾನ ನಡೆಯುತ್ತದೆ. ಮನಸ್ಸಿನ ಏಕಾಗ್ರತೆ, ಸಮಚಿತ್ತ, ಒಟ್ಟೊಟ್ಟಿಗೆ ಕೆಲಸಗಳನ್ನ ಮಾಡುವುದು ಎಲ್ಲವನ್ನ ಪರೀಕ್ಷೆ ಮಾಡುವ ಕ್ರಮವಂತು ಬಹಳ ಚೆನ್ನಾಗಿಯೇ ಇರುತ್ತದೆ. ಇಲ್ಲಿ ಪೃಚ್ಛಕ ಅಂದರೆ ಪ್ರಶ್ನೆ ಕೇಳುವವರು. ಎಂಟು ಜನ ವಿಧವಿಧವಾದ ಪ್ರಶ್ನೆಗಳನ್ನ ಕೇಳುತ್ತಾರೆ. ಮಧ್ಯೆ ಮಧ್ಯೆ ಅವರ ಏಕಾಗ್ರತೆ ಭಂಗ ಮಾಡುವವರೊಬ್ಬರು.
ಅವಧಾನಿಗಳು ಕೇಳುವ ಪ್ರಶ್ನೆಗಳಿಗೆ ಉತ್ತರ ರಚಿಸಿ ಅರ್ಥವತ್ತಾದ ಪದ್ಯ ರಚನೆ ಮಾಡಿ ಉತ್ತರ ನೀಡಬೇಕು. ಇಲ್ಲಿರುವ ಪ್ರಶ್ನೆಗಳಾದರೋ ತೀರ ಅಸಂಬದ್ಧವಾಗಿರುತ್ತದೆ. ಅವನ್ನು ಸರಿಯಾದ ರೀತಿಯಲ್ಲಿ ಪರಿಹರಿಸಬೇಕು. ಅಲ್ಲೆಲ್ಲೋ ರಾಮನಿಗೆ ದ್ರೌಪದಿಗೆ ಭೇಟಿ ಸಂದರ್ಭವೇರ್ಪಡಿಸಿದ ಹಾಗೆ ಇರುತ್ತದೆ.
ಸುಮಾರು ಮೂರು ತಾಸು ನಡೆದ ಅವಧಾನ ಕಾರ್ಯಕ್ರಮದಲ್ಲಿ ತುಮಕೂರು ಜಿಲ್ಲಾ ಬ್ರಾಹ್ಮಣ ಸಭಾ ಸದಸ್ಯರು, ಶಂಕರ ಸೇವಾ ಸಮಿತಿಯ ಭಕ್ತ ಮಂಡಳಿ ಹಾಗೂ ನಗರದ ಪ್ರಮುಖರು ವಿಪ್ರ ಬಾಂಧವರು ಭಾಗವಹಿಸಿದ್ದರು.
ಅವಧಾನ ಕಾರ್ಯಕ್ರಮವನ್ನು ತುಮಕೂರು ಹೊಯ್ಸಳ ಕರ್ನಾಟಕ ಸಂಘ ಹಾಗೂ ಶಂಕರ ಸೇವಾ ಸಮಿತಿ ಸಹಯೋಗದಲ್ಲಿ ನಡೆಯಿತು. ತುಮಕೂರಿನಲ್ಲಿ ಇದೇ ಮೊದಲಬಾರಿಗೆ ಅಷ್ಟಾವಧಾನ ಆಯೋಜಿಸಿದ್ದು ನೂರಾರು ಮಂದಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.
Comments are closed.