494 ಮಂದಿಗೆ ಸೋಂಕು: 3 ಸಾವು

ತುಮಕೂರು: ಹೆಚ್ಚುತ್ತಲೇ ಇದೆ ಕೊರೊನಾ ಕಾಟ

491

Get real time updates directly on you device, subscribe now.

ತುಮಕೂರು:ಜಿಲ್ಲೆಯಾದ್ಯಂತ ಇಂದು 494 ಮಂದಿಗೆ ಕೋವಿಡ್-19 ದೃಢಪಟ್ಟಿದೆ. ಒಟ್ಟಾರೆ ಸೋಂಕಿತರ ಸಂಖ್ಯೆ 29,441 ಏರಿಕೆ ಕಂಡಿದೆ. 2,590 ಸಕ್ರಿಯ ಪ್ರಕರಣಗಳ ಪೈಕಿ 200 ಮಂದಿ ಬಿಡುಗಡೆ ಹೊಂದಿದ್ದಾರೆ.
ಹೊಸದಾಗಿ ತುಮಕೂರು ತಾಲ್ಲೂಕಿನಲ್ಲಿ 181, ಚಿನಾಹಳ್ಳಿ 20, ಗುಬ್ಬಿ 43, ಕೊರಟಗೆರೆ 35, ಕುಣಿಗಲ್ 38, ಮಧುಗಿರಿ 38, ಪಾವಗಡ 31, ಶಿರಾ 35, ತಿಪಟೂರು 30, ತುರುವೇಕೆರೆಯಲ್ಲಿ 43 ಮಂದಿಗೆ ಕೊರೊನಾ ಸೋಂಕು ತಗುಲಿದೆ. ಇಂದು ಒಟ್ಟು ಮೂವರು ಮೃತಪಟ್ಟಿದ್ದು, ಕೋವಿಡ್ ಸೋಂಕಿನಿಂದ ತುಮಕೂರು ನಗರದ ಉಪ್ಪಾರಹಳ್ಳಿಯ ಮಹಿಳೆ (60) ಒಬ್ಬರು ಮೃತಪಟ್ಟಿದ್ದಾರೆ, ಅನ್ಯ ಕಾರಣದಿಂದ ಶಿರಾ ತಾಲೂಕಿನ ಭುವನ ಹಳ್ಳಿಯ ವ್ಯಕ್ತಿ (61) ಮತ್ತು ಕುಣಿಗಲ್ ತಾಲೂಕಿನ ಮಡಪ್ಪನಹಳ್ಳಿಯ ವ್ಯಕ್ತಿ (62) ಮೃತಪಟ್ಟಿದ್ದಾರೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ತಿಳಿಸಿದೆ.

Get real time updates directly on you device, subscribe now.

Comments are closed.

error: Content is protected !!