ವಿವಿ ಕ್ಯಾಂಪಸ್ ನಲ್ಲಿ ಜೀವ ವೈವಿಧ್ಯಅಭಯಾರಣ್ಯ

ವಿಪ್ರೋ ಸಹಯೋಗ- 15 ಎಕರೆಯಲ್ಲಿ 3000 ಸಸ್ಯವೈವಿಧ್ಯ

8

Get real time updates directly on you device, subscribe now.


ತುಮಕೂರು: ವಿಪ್ರೋ ಸಂಸ್ಥೆಯು ತುಮಕೂರು ವಿಶ್ವ ವಿದ್ಯಾಲಯದ ಸಹಯೋಗದೊಂದಿಗೆ ಬಿದರೆಕಟ್ಟೆಯಲ್ಲಿರುವ ವಿವಿಯ ಹೊಸ ಕ್ಯಾಂಪಸ್ ನಲ್ಲಿ15 ಎಕರೆ ವಿಸ್ತೀರ್ಣದಲ್ಲಿ ನಿರ್ಮಾಣವಾಗುತ್ತಿರುವ ಜೀವ ವೈವಿಧ್ಯ ಅಭಯಾರಣ್ಯದ ಪ್ರಗತಿ ಪರಿಶೀಲಿಸಲು ವಿಪ್ರೋ ಸಂಸ್ಥೆಯ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ ಮತ್ತು ಕಾರ್ಯ ನಿರ್ವಾಹಕ ನಿರ್ದೇಶಕ ವಿನೀತ್ ಅಗರವಾಲ್ ಭೇಟಿ ನೀಡಿದ್ದರು.

ಸ್ಥಳೀಯ ಸಸ್ಯ ಪ್ರಭೇದಗಳನ್ನು ಸಂರಕ್ಷಿಸುವ ನಿಟ್ಟಿನಲ್ಲಿ ಅರಣ್ಯ ಪರಿಸರ ವ್ಯವಸ್ಥೆಯ ಸ್ಥಾಪನೆ ಉತ್ತೇಜಿಸಲು ವಿಪ್ರೋ ಸಂಸ್ಥೆ ಮುಂದಾಗಿದ್ದು, ದೀರ್ಘಾವಧಿಯ ಜೀವ ವೈವಿಧ್ಯ ಉದ್ಯಾನದ ಸ್ಥಾಪನೆ ಮತ್ತು ನಿರ್ವಹಣೆ ಪ್ರಾಯೋಜಿಸುತ್ತಿದೆ, ಮೂರು ವರ್ಷಗಳ ಈ ಒಪ್ಪಂದದಲ್ಲಿ 3000ಕ್ಕೂ ಹೆಚ್ಚು ಸ್ಥಳೀಯ ಸಸ್ಯ ಪ್ರಭೇದ ಅವುಗಳ ನೈಸರ್ಗಿಕ ಜನಸಂಖ್ಯೆಗೆ ಅಪಾಯವಾಗದಂತೆ ಸಂಶೋಧನಾ ಉದ್ದೇಶಗಳಿಗಾಗಿ ಸುಲಭವಾಗಿ ಲಭ್ಯವಾಗುವಂತೆ ಮಾಡುವ ಉದ್ದೇಶ ಈ ಯೋಜನೆಯದ್ದಾಗಿದೆ ಎಂದು ವಿನೀತ್ ಅಗರವಾಲ್ ಈ ಸಂದರ್ಭದಲ್ಲಿ ತಿಳಿಸಿದರು.

ವಿವಿ ಕುಲಸಚಿವೆ ನಾಹಿದಾ ಜಮ್ ಜಮ್, ವಿವಿಯ ಕೌಶಲ್ಯಾಭಿವೃದ್ಧಿ ಕೇಂದ್ರದ ಸಂಯೋಜಕ ಪ್ರೊ.ಕೆ.ಜಿ. ಪರಶುರಾಮ, ಉಪ ಕುಲಸಚಿವ ಡಾ.ಬಿ.ಕೆ.ಸುರೇಶ್, ಪ್ರೊ.ಮೋಹನ್ ರಾಮ್, ವಿಪ್ರೋ ಸಂಸ್ಥೆಯ ಹಿರಿಯ ಕಾರ್ಯಕ್ರಮ ವ್ಯವಸ್ಥಾಪಕ ಬಿ.ಸಿ.ಪ್ರವೀಣ್, ಮಾನವ ಸಂಪನ್ಮೂಲ ವಿಭಾಗದ ಮುಖ್ಯಸ್ಥ ಹನುಮಂತರಾಯಪ್ಪ, ತುಮಕೂರು ಘಟಕದ ಉತ್ಪಾದನಾ ವಿಭಾಗದ ಉಪಾಧ್ಯಕ್ಷ ವಿಶ್ವನಾಥ್ ಕಾರ್ಕಡ, ಖಾತೆಗಳ ವ್ಯವಸ್ಥಾಪಕ ವಿನಯ್.ಎಂ, ಸುರಕ್ಷತಾ ಅಧಿಕಾರಿ ಸಂಪತ್ ಕುಮಾರ್, ವಾಣಿಜ್ಯ ವಿಭಾಗದ ವ್ಯವಸ್ಥಾಪಕ ಈಶ್ವರಪ್ಪ.ಎಸ್.ಆರ್, ನಿರ್ಮಾಣ ವಿಭಾಗದ ವ್ಯವಸ್ಥಾಪಕ ದಯಾನಂದ, ಸಹಾಯಕ ವ್ಯವಸ್ಥಾಪಕ ದಾಮೋಧರನ್ ಇದ್ದರು.

Get real time updates directly on you device, subscribe now.

Comments are closed.

error: Content is protected !!