ಬೈಕ್ ನಲ್ಲಿ ವೃದ್ಧನ ಶವ ಸಾಗಾಟ ಪ್ರಕರಣ

ಎಚ್ಚೆತ್ತ ಅಧಿಕಾರಿಗಳು- ಆ್ಯಂಬುಲೆನ್ಸ್ ಸೇವೆ ಆರಂಭ

23

Get real time updates directly on you device, subscribe now.


ವೈ.ಎನ್.ಹೊಸಕೋಟೆ: ಗ್ರಾಮದ ಸರ್ಕಾರಿ ಆಸ್ಪತ್ರೆಯ ಬಳಿ ನಡೆದ ಹೃದಯ ವಿದ್ರಾವಕ ಘಟನೆಯಿಂದ ಎಚ್ಚೆತ್ತುಕೊಂಡ ವೈದ್ಯಕೀಯ ಇಲಾಖೆ ಅಧಿಕಾರಿಗಳು ಗುರುವಾರ ಸಮುದಾಯ ಆರೋಗ್ಯ ಕೇಂದ್ರಕ್ಕೆ ಸರ್ಕಾರಿ ಆ್ಯಂಬುಲೆನ್ಸ್ ಸೇವೆ ಒದಗಿಸಿದರು.
ಬುಧವಾರ ಚಿಕಿತ್ಸೆಗಾಗಿ ಬಂದಿದ್ದ ದಳವಾಯಿಹಳ್ಳಿ ಗ್ರಾಮದ ಹೊನ್ನೂರಪ್ಪ ಎಂಬ ವ್ಯಕ್ತಿ ಮೃತರಾಗಿದ್ದರು, ಆತನ ಮೃತ ದೇಹ ಸಾಗಿಸಲು ಆಸ್ಪತ್ರೆಯಲ್ಲಿ ಆ್ಯಂಬುಲೆನ್ಸ್ ಸೇವೆ ಇಲ್ಲದ್ದಿದ್ದರಿಂದ ಮಕ್ಕಳು ಗೋಪಾಲಪ್ಪ ಮತ್ತು ಚಂದ್ರಣ್ಣ ದ್ವಿಚಕ್ರ ವಾಹನದಲ್ಲಿ ಸ್ವಗ್ರಾಮಕ್ಕೆ ಕರೆದೊಯ್ದಿದ್ದರು, ಈ ಘಟನೆ ಮಾಧ್ಯಮಗಳಲ್ಲಿ ಪ್ರಸಾರವಾಗಿ ಸಂಬಂಧಿಸಿದ ಇಲಾಖೆ ಎಚ್ಚೆತ್ತುಕೊಂಡಿದೆ, ಜಿಲ್ಲಾ ಆರೋಗ್ಯಾಧಿಕಾರಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ಮಾಡಿ ತಾಲ್ಲೂಕು ಕೇಂದ್ರದಲ್ಲಿದ್ದ ಆ್ಯಂಬುಲೆನ್ಸ್ ಗಳ ಪೈಕಿ ಒಂದನ್ನು ವೈ.ಎನ್.ಹೊಸಕೋಟೆ ಸಮುದಾಯ ಆರೋಗ್ಯ ಕೇಂದ್ರಕ್ಕೆ ನಿಯೋಜನೆ ಮಾಡಿದ್ದಾರೆ.

ಈ ಹಿಂದೆ ಇದ್ದ ಆ್ಯಂಬುಲೆನ್ಸ್ ವಾಹನ ಹಳೆಯದಾಗಿತ್ತು, ಡ್ರೈವರ್ ಸಮಸ್ಯೆ ಇದ್ದಿತು, ಈ ಕಾರಣದಿಂದ 2019 ರಿಂದ ಇಲ್ಲಿನ ರೋಗಿಗಳಿಗೆ ಸರ್ಕಾರಿ ಆ್ಯಂಬುಲೆನ್ಸ್ ಸೇವೆ ಸ್ಥಗಿತಗೊಂಡಿತ್ತು, ಅಗತ್ಯವಿದ್ದಾಗ 108 ಸೇವೆಗೆ ಕರೆ ಮಾಡಿ ಆ ವಾಹನ ಬಂದಾಗ ತುರ್ತು ಸೇವೆಗಳನ್ನು ಪಡೆಯಲಾಗುತ್ತಿತ್ತು, ಕೆಲವೊಮ್ಮೆ 108 ವಾಹನ ಬರುವುದು ತಡವಾಗಿ ಹಲವು ಅವಘಡ ಮತ್ತು ತೊಂದರೆಗಳಾಗುತ್ತಿದ್ದವು, ಆದಾಗಿ ಸಾರ್ವಜನಿಕರು ಮತ್ತು ಸಂಘ ಸಂಸ್ಥೆಗಳು ಸರ್ಕಾರಿ ಆ್ಯಂಬುಲೆನ್ಸ್ ಸೇವೆಗಾಗಿ ಸಂಬಂಧಿಸಿದ ಇಲಾಖೆ ಮತ್ತು ಜನಪ್ರತಿನಿಧಿಗಳನ್ನು ಒತ್ತಾಯಿಸುತ್ತಾ ಬಂದಿದ್ದರೂ ಯಾವುದೇ ಪ್ರಯೋಜನ ಆಗಿರಲಿಲ್ಲ, ಪ್ರಸ್ತುತ ಘಟನೆಯಿಂದ ಸರ್ಕಾರಿ ಆ್ಯಂಬುಲೆನ್ಸ್ ಸೇವೆ ಪ್ರಾರಂಭವಾಗಿದೆ, ಅದು ನಿರಂತರವಾಗಿ ರೋಗಿಗಳಿಗೆ ದೊರೆಯಬೇಕು ಎಂದು ಜನತೆ ಕೋರಿದ್ದಾರೆ.

Get real time updates directly on you device, subscribe now.

Comments are closed.

error: Content is protected !!