ಮಧುಗಿರಿ: ಮುಂದಿನ ದಿನಗಳಲ್ಲಿ ಮಧುಗಿರಿ ಪುರಸಭೆಯನ್ನು ನಗರಸಭೆಯನ್ನಾಗಿ ಮೇಲ್ದರ್ಗೆಗೇರಿಸುವ ಗುರಿ ಹೊಂದಲಾಗಿದೆ ಎಂದು ಸಹಕಾರ ಸಚಿವ ಕೆ.ಎನ್.ರಾಜಣ್ಣ ತಿಳಿಸಿದರು.
ಪಟ್ಟಣದ ಪುರಸಭೆಯಲ್ಲಿ ಗುರುವಾರ ಹಮ್ಮಿಕೊಂಡಿದ್ದ ಸಾಮಾನ್ಯ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಈಗಾಗಲೇ ಪಟ್ಟಣದ ಅಭಿವೃದ್ಧಿ ಗೆ 25 ಕೋಟಿ, ಅಲ್ಪಸಂಖ್ಯಾತ ನಡುವೆ ನಿಗಮದ ವತಿಯಿಂದ 5 ಕೋಟಿ ಸೇರಿ 30 ಕೋಟಿ ಮಂಜೂರಾಗಿದ್ದು, ಅಮೃತ ಯೋಜನೆಯಡಿ 30 ಕೋಟಿ ಮತ್ತು ಅಲ್ಪಸಂಖ್ಯಾತರ ನಿಗಮದ ವತಿಯಿಂದ 5 ಕೋಟಿ ಮಂಜೂರಾಗಲಿದ್ದು, ಪಟ್ಟಣದ ಅಭಿವೃದ್ಧಿ ಗೆ ವಿನಿಯೋಗಿಸಿಕೊಂಡು ಪಟ್ಟಣವನ್ನು ಹೈಟೆಕ್ ಮಾದರಿಯಲ್ಲಿ ಅಭಿವೃದ್ಧಿ ಗೊಳಿಸುವುದರ ಜೊತೆಗೆ ನಗರಸಭೆಯನ್ನಾಗಿ ಮೇಲ್ದರ್ಜೆಗೇರಿಸಲು ಏನೆಲ್ಲ ಬೇಕೋ ಅದೆಲ್ಲವನ್ನೂ ಒದಗಿಸಲಾಗುವುದು, ಪಟ್ಟಣದಲ್ಲಿ ಒಳ್ಳೆಯ ಸ್ಥಳ ಹುಡುಕಿ ಅಕ್ಕ ಕ್ಯಾಂಟೀನ್ ಆರಂಭಿಸೋಣ, ಎಲ್ಲರೂ ಪಟ್ಟಣದ ಸ್ವಚ್ಛತೆಗೆ ಆದ್ಯತೆ ನೀಡಿ, ರಸ್ತೆ, ಚರಂಡಿಗಳ ಸ್ವಚ್ಛತೆಯ ಕಡೆ ಗಮನ ಹರಿಸುವ ಮೂಲಕ ಪಟ್ಟಣವನ್ನು ಸುಂದರವಾಗಿಟ್ಟುಕೊಳ್ಳಿ, ಏನೇ ಮಾಡಿದರೂ ಜನರಿಗೆ ಅನುಕೂಲವಾಗುವಂತೆ ಮಾಡಿ ಎಂದು ಕಿವಿಮಾತು ಹೇಳಿದರು.
ಮುಂದಿನ ತಿಂಗಳು ಮಧುಗಿರಿ ಪಟ್ಟಣಕ್ಕೆ ಶೃಂಗೇರಿ ಶ್ರೀಗಳು ಬರಲಿದ್ದು, ಈ ಭಾಗದಲ್ಲಿ ರಸ್ತೆಗಳನ್ನು ನಿರ್ಮಿಸಿ ಸ್ವಚ್ಛತೆಗೆ ಆದ್ಯತೆ ನೀಡಿ ಎಂದು ಸಚಿವರು ಸೂಚನೆ ನೀಡಿದರು.
ಉಪ ವಿಭಾಗಾಧಿಕಾರಿ ಗೋಟೂರು ಶಿವಪ್ಪ, ಪುರಸಭಾ ಅಧ್ಯಕ್ಷ ಲಾಲಪೇಟೆ ಮಂಜುನಾಥ್, ಉಪಾಧ್ಯಕ್ಷರಾದ ಸುಜಾತಾ ಶಂಕರ್ ನಾರಾಯಣ್, ಪುರಸಭಾ ಮುಖ್ಯ ಅಧಿಕಾರಿ ಸುರೇಶ್, ಪುರಸಭಾ ಸದಸ್ಯ ಗೋವಿಂದರಾಜು, ಎಂ.ಆರ್.ಜಗನ್ನಾಥ್, ಪುರಸಭಾ ವ್ಯವಸ್ಥಾಪಕ ಗುರುಪ್ರಸಾದ್, ಕಂದಾಯ ಅಧಿಕಾರಿ ವಸಂತ ಕುಮಾರಿ, ಸಮುದಾಯ ಸಂಘಟಕಿ ಬಿ.ಆರ್.ವರಲಕ್ಷ್ಮಿ, ಆರೋಗ್ಯ ನಿರೀಕ್ಷಕ ಬಾಲಾಜಿ ಹಾಜರಿದ್ದರು.
Comments are closed.