ಕುಣಿಗಲ್: ರಾಜ್ಯರಾಜಕಾರಣದ ಇತಿಹಾಸದಲ್ಲಿ ಶಾಸಕ ಮುನಿರತ್ನ ಮಾಡಿರುವ ಕೃತ್ಯ ಅಕ್ಷಮ್ಯವಾಗಿದ್ದು ಇಂತಹ ಶಾಸಕರನ್ನು ಕೂಡಲೆ ಶಾಸಕ ಸ್ಥಾನದಿಂದ ವಜಾ ಮಾಡುವಂತೆ ಆಗ್ರಹಿಸಿ ಕಾಂಗ್ರೆಸ್ ಪಕ್ಷದ ಮುಖಂಡರು,ಕಾರ್ಯಕರ್ತರು ಪ್ರತಿಭಟನೆ ನಡೆಸಿ ತಹಶೀಲ್ದಾರ್ ಮನವಿ ಸಲ್ಲಿಸಿದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಂಗಣ್ಣಗೌಡ ನೇತೃತ್ವದಲ್ಲಿ ತಾಲೂಕು ಕಚೇರಿ ಮುಂದೆ ಜಮಾವಣೆಗೊಂಡ ಕಾಂಗ್ರೆಸ್ ಕಾರ್ಯ ಕರ್ತರು, ಮುಖಂಡರು ಶಾಸಕ ಮುನಿರತ್ನ ಕ್ರಮ ಖಂಡಿಸಿದರು.
ಈ ವೇಳೆ ರಂಗಣ್ಣಗೌಡ ಮಾತನಾಡಿ, ರಾಜ್ಯ ರಾಜಕಾರಣದ ಇತಿಹಾಸದಲ್ಲಿ ಶಾಸಕನಾಗಿ ಆಯ್ಕೆಯಾದ ವ್ಯಕ್ತಿಯೊಬ್ಬ ಏಡ್ಸ್ ಸೋಂಕು ಪೀಡಿತರನ್ನು ಬಳಸಿಕೊಂಡು ವಿರೋಧಿಗಳ ಹಣಿಯಲಿಲ್ಲ, ಆದರೆ ಆರ್ ಆರ್ ನಗರದ ಶಾಸಕರ ಕೃತ್ಯ ದಿನಕ್ಕೊಂದರಂತೆ ಹೊರಬರುತ್ತಿದೆ, ಮೊದಲಿಗೆ ದಲಿತ ಸಮುದಾಯ, ಒಕ್ಕಲಿಗ ಹೆಣ್ಣು ಮಕ್ಕಳ ಮೇಲೆ ಅಶ್ಲೀಲವಾಗಿ ನಿಂದಿಸಿದ್ದು ನಂತರ ತನ್ನ ಅಧಿಕಾರ ಬಳಸಿಕೊಂಡು ಮಹಿಳೆಯೊಬ್ಬರ ಮೇಲೆ ಅತ್ಯಚಾರ ಎಸಗಿ ಏಡ್ಸ್ ಸೋಂಕಿತರನ್ನು ಬಳಸಿ ರಾಜಕೀಯ ಎದುರಾಳಿಗಳ ಮಟ್ಟ ಹಾಕಲು ಮುಂದಾಗಿದ್ದು ಇದೊಂದು ರೀತಿಯ ಭಯೋತ್ಪಾದನೆ ಕೃತ್ಯಕ್ಕಿಂತ ಕಡೆಯಾಗಿದ್ದು ಇಂತಹ ಸಮಾಜ ಘಾತುಕ ವ್ಯಕ್ತಿಯನ್ನು ಶಾಸಕ ಸ್ಥಾನದಿಂದ ವಜಾ ಮಾಡಿ ಯುಎಪಿಎಇ ಕಾಯಿದೆಯಡಿಯಲ್ಲಿ ಬಂಧಿಸಬೇಕೆಂದು ಆಗ್ರಹಿಸಿದರು.
ತಾಲೂಕು ಗ್ಯಾರಂಟಿ ಯೋಜನೆ ಸಮಿತಿ ಅಧ್ಯಕ್ಷ ವಿಶ್ವನಾಥ್ ಮಾತನಾಡಿ, ರಾಜಕಾರಣ ಎಂದರೆ ಸಮಾಜಸೇವೆ ಎಂಬ ಅರ್ಥವಿದ್ದು ಆರ್ಆರ್ ನಗರ ಶಾಸಕ ಮುನಿರತ್ನ ನಡೆ ಇಂದು ರಾಜಕಾರಣಕ್ಕೆ ಹೆಣ್ಣುಮಕ್ಕಳು ಬರಲೂ ಯೋಚನೆ ಮಾಡುವಂತಹ ಆತಂಕಕಾರಿ ಸನ್ನಿವೇಶ ಸೃಷ್ಟಿಸಿದೆ, ಆಂಧ್ರ ಪ್ರದೇಶದಿಂದ ಬಂದಂತಹ ಶಾಸಕ ಮುನಿರತ್ನ ರಾಜ್ಯ ರಾಜಕಾರಣದ ಇತಿಹಾಸದಲ್ಲಿ ಯಾರೂ ಮಾಡಬಾರ ದಂತಹ ಅಕ್ಷಮ್ಯಕೃತ್ಯ ಎಸಗಿದ್ದು ಇಂತಹವರು ನಾಗರಿಕ ಸಮಾಜದಲ್ಲಿ ಬದುಕಲು ಹಾಗೂ ರಾಜಕಾರಣದಲ್ಲಿ ಇರಲು ಅರ್ಹರಲ್ಲ, ಕೂಡಲೆ ರಾಜ್ಯಪಾಲರು ಮುನಿರತ್ನ ಶಾಸಕ ಸ್ಥಾನ ರದ್ದುಗೊಳಿಸಿ ಅವರ ಮೇಲೆ ಕಠಿಣ ಕ್ರಮ ಜರುಗಿಸಬೇಕೆಂದು ಒತ್ತಾಯಿಸಿದರು.
ಬ್ಲಾಕ್ ಕಾಂಗ್ರೆಸ್ ಮಾಜಿ ಅಧ್ಯಕ್ಷ ಶಂಕರ್ ಮಾತನಾಡಿ, ಸುಸಂಸ್ಕೃತರೆಂದು ಹೇಳಿಕೊಳ್ಳುವ ಬಿಜೆಪಿ ಪಕ್ಷದ ಶಾಸಕರ ಹಲವು ಕೃತ್ಯಗಳು ಬಯಲಾಗಿದ್ದು ಇನ್ನಾದರೂ ಬಿಜೆಪಿ ಮುಖಂಡರು ಇಂತಹ ಸಮಾಜ ವಿರೋಧಿ ಕ್ರಿಮಿಗಳ ಮೇಲೆ ಕ್ರಮ ಜರುಗಿಸಬೇಕು ಎಂದರು.
ಅಮೃತೂರು ಕಾಂಗ್ರೆಸ್ ಮುಖಂಡ ಹರೀಶ್ ಮಾತನಾಡಿ, ಲೋಕಸಭೆ ಚುನಾವಣೆಯಲ್ಲಿ ಮೈತ್ರಿ ಮಾಡಿಕೊಂಡು ಜೆಡಿಎಸ್, ಬಿಜೆಪಿ ಎರಡೂ ಪಕ್ಷದ ಮುಖಂಡರು ಶಾಸಕ ಮುನಿರತ್ನರ ಲೀಲೆಗಳನ್ನು ಕಂಡು ಮೌನಕ್ಕೆ ಶರಣಾಗಿದ್ದಾರೆ, ಇನ್ನಾದರೂ ಎಚ್ಚೆತ್ತು ಈ ನಿಟ್ಟಿನಲ್ಲಿ ಧ್ವನಿ ಎತ್ತಿ ನಾಗರಿಕ ಸಮಾಜದ ತಲೆತಗ್ಗಿಸುವ ಕೃತ್ಯ ಮಾಡಿರುವ ಮುನಿರತ್ನರ ಮೇಲೆ ಕ್ರಮ ಜರುಗಿಸಬೇಕೆಂದರು. ಮುಖಂಡರಾದ ಜೆಸಿಬಿ ರಾಜಣ್ಣ, ಶೇಷ ಮಾತನಾಡಿದರು, ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಸುಮತಿ, ಪುರಸಭೆಯ ಕಾಂಗ್ರೆಸ್ ಸದಸ್ಯರು ಮುಖಂಡರಾದ ಶಿವಶಂಕರ್, ಹಾಲುವಾಗಿಲು ಸ್ವಾಮಿ, ಬೋರೇಗೌಡ, ಮೂರ್ತಿ, ರಾಜಣ್ಣ, ಏಜಾಸ್, ಪಾರ್ಥ ಸಾರಥಿ, ಅಕ್ರಂ, ನಾಗರಾಜ ಇತರರು ಇದ್ದರು, ತಹಶೀಲ್ದಾರ್ ಅವರಿಗೆ ಮನವಿ ಸಲ್ಲಿಸಿದರು.
Comments are closed.