ಮಹಿಳೆಯರು ಹೆಚ್ಚು ಆರೋಗ್ಯ ಕಾಳಜಿ ಹೊಂದಲಿ

23

Get real time updates directly on you device, subscribe now.


ತುಮಕೂರು: ಮಹಿಳೆ ಕುಟುಂಬದ ಆರೋಗ್ಯದ ಜೊತೆಗೆ ತನ್ನ ದೇಹದಲ್ಲಾಗುವ ಬದಲಾವಣೆಗಳು ಹಾಗೂ ಅನಾರೋಗ್ಯ ಸಮಸ್ಯೆಗಳ ಬಗ್ಗೆ ಹೆಚ್ಚು ಗಮನ ಹರಿಸಬೇಕು ಎಂದು ಸಿದ್ಧಗಂಗಾ ವೈದ್ಯಕೀಯ ಮಹಾವಿದ್ಯಾಲಯದ ನಿರ್ದೇಶಕ ಡಾ.ಎಸ್.ಪರಮೇಶ್ ತಿಳಿಸಿದರು.
ಸಿದ್ಧಗಂಗಾ ವೈದ್ಯಕೀಯ ಮಹಾ ವಿದ್ಯಾಲಯದಲ್ಲಿ ಬ್ರೆಸ್ಟ್ ಹಾಗೂ ಬ್ರೆಸ್ಟ್ ಫೀಡಿಂಗ್ ಕಮಿಟಿ, ಆನ್ಕೋ ಕಮಿಟಿ, ಕೆ ಎಸ್ ಒ ಜಿ ಎ, ಟಿ ಎಸ್ ಒ ಜಿ ಹಾಗೂ ತುಮಕೂರು ಪ್ರಸೂತಿ ಹಾಗೂ ಸ್ತ್ರೀರೋಗ ತಜ್ಞರ ಸೊಸೈಟಿ ವತಿಯಿಂದ ನಡೆದ ಬ್ರೆಸ್ಟ್ ಕಾನ್ ವಿಚಾರ ಸಂಕಿರಣ ಉದ್ಘಾಟಿಸಿ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಹೆಚ್ಚುತ್ತಿರುವ ಆನಾರೋಗ್ಯಕರ ಅಭ್ಯಾಸಗಳು ಹಾಗೂ ಜೀವನ ಶೈಲಿಯಿಂದ ಮಹಿಳೆಯರಲ್ಲಿ ಬ್ರೆಸ್ಟ್ ಸಂಬಂಧಿಸಿದ ಸಮಸ್ಯೆ ಹೆಚ್ಚುತ್ತಿದ್ದು ಮಹಿಳೆ ತನ್ನ ಆರೋಗ್ಯದ ಬಗ್ಗೆ ಕಾಳಜಿ ವಹಿಸಿದರೆ ಇಡೀ ಸಮಾಜದ ಆರೋಗ್ಯ ಸುಧಾರಿಸುತ್ತದೆ ಎಂದು ಕರೆ ನೀಡಿದರು.

ಎಸ್ ಎಫ್ ಬಿ ಸಿ ಅಧ್ಯಕ್ಷೆ ಡಾ.ಚಾರುಲತಾ ಬಪಾಯಿ ಮಾತನಾಡಿ ಗಟ್ಟಿಯಾದ ಸ್ತನಗಳು, ಸ್ತನಗಳ ತೊಟ್ಟುಗಳಲ್ಲಿ ಸ್ರವಿಸುವಿಕೆ, ಅಸಮತೂಕ ಮುಂತಾದ ಲಕ್ಷಣಗಳು ಕಂಡು ಬಂದಾಗ ಮಹಿಳೆ ಕೂಡಲೇ ಹತ್ತಿರದ ಸ್ತ್ರೀರೋಗ ತಜ್ಞರನ್ನ ಭೇಟಿ ಮಾಡುವುದು ಒಳಿತು. ಸ್ತನಗಳಲ್ಲಿ ಗಂಟು ಕಂಡು ಬಂದು ತೀವ್ರ ನೋವಿದ್ದರೂ ಕೂಡ ಆತಂಕಕಾರಿಯಾಗಿದ್ದು ಕ್ಯಾನ್ಸರ್ ತರುವ ಅಪಾಯ ಹೆಚ್ಚಿಸುವ ಸಾಧ್ಯತೆಯಿದೆ ಎಂದರು.

ಡಾ.ಲಿಲಿತಾ, ಡಾ.ಸುಪ್ರಾ, ಡಾ.ರವಿಶಂಕರ್, ಡಾ.ಆನಂದ್, ಡಾ.ಭಾರತಿ ರಾಜಶೇಖರ್ ಬ್ರೆಸ್ಟ್ ಸಮಸ್ಯೆಗಳಿಗೆ ಸಂಬಂಧಿಸಿದ ವಿವಿಧ ವಿಷಯಗಳ ಕುರಿತು ಉಪನ್ಯಾಸ ನೀಡಿದರು.
ಕೆ ಎಸ್ ಓ ಜಿ ಎ ಭಾವಿ ಅಧ್ಯಕ್ಷ ಡಾ.ದುರ್ಗಾದಾಸ್ ಅಸ್ರನ್ನ, ಸ್ತ್ರೀರೋಗ ಹಾಗೂ ಪ್ರಸೂತಿ ತಜ್ಞರಾದ ಡಾ.ರೇಖಾ ಗುರುಮೂರ್ತಿ, ಡಾ.ರಚನಾ, ಡಾ.ಹೇಮಾ, ಸೇರಿದಂತೆ ಸಿದ್ಧಗಂಗಾ ವೈದ್ಯಕೀಯ ಕಾಲೇಜಿನ ವಿದ್ಯಾರ್ಥಿಗಳು ಹಾಗೂ ಉಪನ್ಯಾಸಕರು ಹಾಜರಿದ್ದರು.

Get real time updates directly on you device, subscribe now.

Comments are closed.

error: Content is protected !!