ಕುಣಿಗಲ್: ಒಕ್ಕಲಿಗರ ಸಂಘದ ಆಶ್ರಯದಲ್ಲಿ ನಡೆಯುತ್ತಿರುವ ಪಟ್ಟಣದ ಜ್ಞಾನಭಾರತಿ ಪದವಿ ಪೂರ್ವ ಕಾಲೇಜಿನ 28 ವಿದ್ಯಾರ್ಥಿಗಳು ಜಿಲ್ಲಾಮಟ್ಟದ ವಿವಿಧ ಕ್ರೀಡೆಗಳಲ್ಲಿ ಭಾಗವಹಿಸಿ ರಾಜ್ಯಮಟ್ಟಕ್ಕೆ ಆಯ್ಕೆಯಾಗುವ ಮೂಲಕ ಉತ್ತಮ ಸಾಧನೆ ಮಾಡಿದ್ದಾರೆ.
2024- 25ನೇ ಸಾಲಿನ ಜಿಲ್ಲಾ ಮಟ್ಟದ ಪದವಿ ಪೂರ್ವ ಕಾಲೇಜುಗಳ ಕ್ರೀಡಾಕೂಟ ಇತ್ತೀಚೆಗೆ ತಿಪಟೂರಿನಲ್ಲಿ ನಡೆದಿದ್ದು, ಕ್ರೀಡಾಕೂಟದಲ್ಲಿ ಜಿಲ್ಲೆಯ ಹತ್ತು ತಾಲ್ಲೂಕುಗಳಿಂದ ಒಂದು ಸಾವಿರಕ್ಕೂ ಅಧಿಕ ವಿದ್ಯಾರ್ಥಿಗಳು ಭಾಗವಹಿಸಿದ್ದರು, ತಾಲ್ಲೂಕು ಮಟ್ಟದ ಕ್ರೀಡಾಕೂಟದಲ್ಲಿ ಸತತ 9 ಬಾರಿ ಚಾಂಪಿಯನ್ ಶಿಪ್ ಪಡೆದಿದ್ದ ಜ್ಞಾನಭಾರತಿ ಪ.ಪೂ. ಕಾಲೇಜಿನ ವಿದ್ಯಾರ್ಥಿಗಳು ಸತತ ಸಾಧನೆ ಮೂಲಕ ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ, ಆಯ್ಕೆಯಾದ ಕ್ರೀಡಾಳುಗಳನ್ನು ಅಭಿನಂದಿಸಿದ ಒಕ್ಕಲಿಗರ ಸಂಘದ ಅಧ್ಯಕ್ಷ ಬಿ.ಬಿ.ರಾಮಸ್ವಾಮಿಗೌಡ ಮಾತನಾಡಿ, ಕಾಲೇಜು ವಿದ್ಯಾರ್ಥಿಗಳು ಸಾಧನೆ ತುಂಬಾ ಸಂತೋಷದಾಯಕ ಸಂಗತಿ, ವಿದ್ಯಾರ್ಥಿಗಳು ರಾಜ್ಯಮಟ್ಟದಲ್ಲೂ ಮತ್ತಷ್ಟು ಉತ್ತಮವಾಗಿ ಸಾಧಿಸಿ ಹೆತ್ತವರಿಗೆ, ಸಮಾಜಕ್ಕೆ ಹಾಗೂ ಕಾಲೇಜಿಗೂ ಉತ್ತಮ ಹೆಸರು ತರಲಿ ಎಂದರು.
ದೈಹಿಕ ಶಿಕ್ಷಣ ಶಿಕ್ಷಕ ಅಜೀಜ್ ಉಲ್ಲಾಖಾನ್ ಆಯ್ಕೆಯಾದ ವಿದ್ಯಾರ್ಥಿಗಳ ವಿವರ ನೀಡಿದರು.
ಬಾಲಕರ ವಿಭಾಗ: ಅಥ್ಲೆಟಿಕ್ಸ್ ನಲ್ಲಿ 100 ಮೀಟರ್, 200 ಮೀಟರ್ ಓಟ ಶ್ರೀಶೈಲ, 5000 ಮೀಟರ್ ನಡಿಗೆ ದಿಲೀಪ್ ಗೌಡ, ತ್ರಿವಿಧ ಜಿಗಿತ ಚಂದನ್ ಗೌಡ.ಎಂ.ಜಿ, ಗುಂಡು ಎಸೆತ ಲಿಖಿತ್ ಗೌಡ, ಕಬ್ಬಡಿಯಲ್ಲಿ ಅಶೋಕ.ಪಿ, ಮದನ್.ಜೆ.ಪಿ, ವಾಲಿಬಾಲ್ ನಲ್ಲಿ ಪ್ರೀತಂಗೌಡ.ಬಿ.ಎಸ್, ಹಿತೇಶ್ ಗೌಡ.ಎಂ.ಆರ್, ಥ್ರೋ ಬಾಲ್ ನಲ್ಲಿ ಮಿಥುನ್.ಕೆ.ಆರ್, ಮನೀಶ್ ಗೌಡ.ಕೆ.ಎಂ, ಮೊಹಮ್ಮದ್ ಅಬ್ರಾರ್, ಮನೋಹರ್.ಎಚ್.ಎಸ್, ಲಿಖಿತ್.ಹೆಚ್.ಆರ್, ಖೋಖೊ ನಲ್ಲಿ ರೋಹಿತ್ ಕುಮಾರ್.ಜಿ, ಯೋಗೀಶ್, ಚೆಸ್ ನಲ್ಲಿ ಉಮೇಶ್ ಆಯ್ಕೆಯಾಗಿದ್ದು, ಬಾಲಕಿಯರ ವಿಭಾಗದಲ್ಲಿ ಅಥ್ಲೆಟಿಕ್ಸ್ ನಲ್ಲಿ 1500 ಮೀಟರ್ ಹಾಗೂ 3000 ಮೀಟರ್ ಓಟ ಕಾವ್ಯ, 400 ಮೀಟರ್ ಓಟ ಶಾಲಿನಿ ಓಟ ಶಾಲಿನಿ.ಪಿ.ಯು, 800 ಮೀಟರ್ ಓಟ ಬಿಂದು.ಎಂ, ಖೋಖೊ ನಲ್ಲಿ ಪುಷ್ಪ.ಕೆ.ಆರ್, ಶಾಲಿನಿ.ಪಿ.ಯು, ಭಾವನಾ.ಎಸ್.ಆರ್, ಬಾಲ್ ಬ್ಯಾಡ್ಮಿಂಟನ್ ನಲ್ಲಿ ಲಾವಣ್ಯ.ಎಂ.ಎಸ್, ಗಾಯಿತ್ರಿ.ಎಂ.ವಿ, ಯಶಸ್ವಿನಿ.ಹೆಚ್.ಜಿ, ಶಟಲ್ ಬ್ಯಾಡ್ಮಿಂಟನ್.ನಲ್ಲಿ ಜಯಲಕ್ಷ್ಮಿ ಚೆಸ್.ನಲ್ಲಿ ಅನ್ನಪೂರ್ಣ ಆಯ್ಕೆಯಾಗಿದ್ದಾರೆ ಎಂದರು.
ಸಂಘದ ಲಕ್ಷ್ಮಣ್ ಗೌಡ, ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಕಪನಿಪಾಳ್ಯ ರಮೇಶ, ಮುಖ್ಯೋಪಾಧ್ಯಾಯ ಗೋವಿಂದೇಗೌಡ, ಪ್ರಕಾಶ್ ಮೂರ್ತಿ, ಉಪನ್ಯಾಸಕ ಶಿವಕುಮಾರ್ ಹಾಜರಿದ್ದರು.
Comments are closed.