ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಹೋರಾಟ

4

Get real time updates directly on you device, subscribe now.


ಕುಣಿಗಲ್: ತಮ್ಮ ವಿವಿಧ ಬೇಡಿಕೆಗಳ ಈಡೇರಿಸುವಂತೆ ಆಗ್ರಹಿಸಿ ಗ್ರಾಮ ಆಡಳಿತಾಧಿಕಾರಿಗಳು ತಾಲೂಕು ಕಚೇರಿ ಆವರಣದಲ್ಲಿ ಕರ್ತವ್ಯದಿಂದ ಹೊರಗುಳಿದು ಕಪ್ಪುಪಟ್ಟಿ ಧರಿಸಿ ಧರಣಿ ನಡೆಸಿದರು.
ಗ್ರಾಮ ಆಡಳಿತ ಅಧಿಕಾರಿಗಳ ಸಂಘದ ತಾಲೂಕು ಆಧ್ಯಕ್ಷ ಪುರುಷೋತ್ತಮ್ ನೇತೃತ್ವದಲ್ಲಿ ಸಂಘಟಿತರಾದ ಗ್ರಾಮ ಆಡಳಿತಾಧಿಕಾರಿಗಳು ಅಂಬೇಡ್ಕರ್, ಮಹಾತ್ಮಗಾಂಧಿ ಭಾವಚಿತ್ರಕ್ಕೆ ನಮಿಸಿ ಧರಣಿ ಕುಳಿತರು, ಬೇಡಿಕೆ ಕುರಿತು ಮಾತನಾಡಿದ ಪುರುಷೋತ್ತಮ್, ತಾಲೂಕಿ ನಲ್ಲಿ 69 ಗ್ರಾಮ ವೃತ್ತಗಳಿವೆ, 40 ಮಂದಿ ಗ್ರಾಮ ಆಡಳಿತಾಧಿಕಾರಿಗಳು ಕರ್ತವ್ಯ ನಿರ್ವಹಿಸುತ್ತಿದ್ದಾರೆ, ಮೊಬೈಲ್ ಆಪ್ ಮೂಲಕವೆ ಎಲ್ಲಾ ದಾಖಲೆ ಸೇರಿದಂತೆ ಸರ್ಕಾರದ ವಿವಿಧ ತತ್ರಾಂಶ ಬಳಸಿಕೊಂಡು 17 ಕ್ಕೂ ಹೆಚ್ಚು ರೀತಿಯ ಕೆಲಸ ನಿರ್ವಹಿಸಬೇಕಾಗಿದೆ, ಆದರೆ ಸರ್ಕಾರ ಯಾವುದೇ ಮೋಬೈಲ್, ಲ್ಯಾಪ್ ಟ್ಯಾಪ್ ನೀಡುತ್ತಿಲ್ಲ, ಅಲ್ಲದೆ ನೆಟ್ವರ್ಕ್ ಇಲ್ಲದ ಪ್ರದೇಶದಲ್ಲೂ ಕೆಲಸ ಮಾಡುವ ಒತ್ತಡ ಇದೆ.

ಯಾವುದೇ ಗ್ರಾಮ ವೃತ್ತದಲ್ಲೂ ಕೆಲಸ ನಿರ್ವಹಿಸಲು ಮೂಲಭೂತ ಸೌಕರ್ಯವನ್ನು ಸರ್ಕಾರ ಕಲ್ಪಿಸಿಲ್ಲ, ಸೇವ ನಿರ್ವಹಣೆ ವಿಷಯದಲ್ಲೂ ಬಡ್ತಿ ಸೇರಿದಂತೆ ವರ್ಗಾವಣೆ ಸಮರ್ಪಕವಾಗಿ ನಿರ್ವಹಿಸುತ್ತಿಲ್ಲ, ಪತಿ- ಪತ್ನಿ ವರ್ಗಾವಣೆ ವಿಷಯದಲ್ಲಿ ಹಲವು ಪ್ರಕರಣ ಬಾಕಿಇವೆ, ಕೆಪಿಎಸ್ ಅರ್ ನಿಯಮಾವಳಿಯಂತೆ ಸರ್ಕಾರಿ ರಜೆ ದಿನಗಳಲ್ಲಿ ಕರ್ತವ್ಯಕ್ಕೆ ಅಧಿಕಾರಿಗಳು ಮೆಮೋ ಹಾಕಬಾರದು, ಒಂದು ವೇಳೆ ಮೆಮೋ ಹಾಕಿದಲ್ಲಿ ಅಂತಹ ಅಧಿಕಾರಿ ಮೇಲೆ ಕ್ರಮ ಕೈಗೊಳ್ಳಬೇಕು, ಕಂದಾಯ ಇಲಾಖೆಯ ಬೇರುಗಳ ಹಾಗೆ ಗ್ರಾಮ ಆಡಳಿತಾಧಿಕಾರಿಗಳು ಕಾರ್ಯ ನಿರ್ವಹಿಸುತ್ತಿದ್ದು ಸರ್ಕಾರ ಅಗತ್ಯ ಸೌಲಭ್ಯ ಕಲ್ಪಿಸಬೇಕಿದೆ ಎಂದರು.

ಮೂರು ವರ್ಷ ಸೇವೆ ಪರಿಗಣಿಸಿ ಅಂತರ್ ಜಿಲ್ಲಾ ವರ್ಗಾವಣೆ, ಪ್ರಯಾಣ ಭತ್ಯೆವನ್ನು 500 ರಿಂದ 3000ಕ್ಕೆ ಏರಿಸುವುದು, ಆಯುಕ್ತಾಲಯದಲ್ಲಿ ರಾಜ್ಯಮಟ್ಟದ ಜೇಷ್ಠತೆ ಪರಿಗಣಿಸ ಬೇಕು, ಕೆಲಸದ ಅವಧಿ ಮುನ್ನ ಹಾಗೂ ನಂತರ ಎಲ್ಲಾ ವರ್ಚುಯಲ್ ಸಭೆ ಕಡ್ಡಾಯವಾಗಿ ನಿಷೇಧಿಸಬೇಕೆಂದು ಒತ್ತಾಯಿಸಿ, ಸರ್ಕಾರ ಅಗತ್ಯ ಸೌಕರ್ಯ ಕಲ್ಪಿಸುವವರೆಗೂ ಮೊಬೈಲ್ ಮೂಲಕ ನಿರ್ವಹಿಸಲಾಗುತ್ತಿರುವ ಆಧಾರ್ ಸೀಡ್, ಲ್ಯಾಂಡ್ ಬೀಟ್, ಬಗರ್ ಹುಕಂ, ಹಕ್ಕುಪತ್ರ, ನಮೂನೆ 1-5 ವೆಬ್ ಅರ್ಜಿ, ಪೌತಿ ಆಂದೋಲನ ಆಪ್ ಕೆಲಸ ನಿರ್ವಹಿಸದಂತೆ ತೀರ್ಮಾನಿಸಲಾಗಿದೆ ಎಂದರು.

ಸಂಘದ ಉಪಾಧ್ಯಕ್ಷ ವಿಜಯಕುಮಾರ, ಕಾರ್ಯದರ್ಶಿ ನಿಖಿಲೇಶ್ ಇತರರು ಇದ್ದರು, ತಹಶೀಲ್ದಾರ್ ರಶ್ಮಿ ಮೂಲಕ ಸರ್ಕಾರದ ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿಗೆ ಮನವಿ ಸಲ್ಲಿಸಿದರು.

Get real time updates directly on you device, subscribe now.

Comments are closed.

error: Content is protected !!