ಪ್ರತಿಷ್ಠಿತ ಸಿದ್ದಗಂಗಾ ಆಸ್ಪತ್ರೆಯಲ್ಲಿ ಕ್ಯಾನ್ಸರ್ ವಿಭಾಗ ಆರಂಭ

ಇನ್ನು ತುಮಕೂರಿನಲ್ಲೇ ಕ್ಯಾನ್ಸರ್ ಗೆ ಚಿಕಿತ್ಸೆ

586

Get real time updates directly on you device, subscribe now.

ತುಮಕೂರು: ಕ್ಯಾನ್ಸರ್ ಕ್ಷಿಪ್ರವಾಗಿ ಸಾವು ತರುವ ರೋಗ, ರೋಗಕ್ಕಿಂತ ಹೆಚ್ಚಾಗಿ ಸರಿಯಾದ ಚಿಕಿತ್ಸೆ ಇಲ್ಲದೆ ಸಾವನ್ನಪ್ಪುವವರು ಹೆಚ್ಚಾಗುತ್ತಿದ್ದಾರೆ ಹಾಗಾಗಿ, ಕ್ಯಾನ್ಸರ್ ರೋಗಿಗಳಿಗೆ 24 ಗಂಟೆಯೂ ಚಿಕಿತ್ಸೆ ಒದಗಿಸಲು ಸಿದ್ಧಗಂಗಾ ಆಸ್ಪತ್ರೆ ಕ್ಯಾನ್ಸರ್ ವಿಭಾಗದ ಸೇವೆ ಆರಂಭಿಸಿದ್ದು, ಖ್ಯಾತ ಕ್ಯಾನ್ಸರ್ ಸ್ಪೆಷಲಿಸ್ಟ್ ಡಾ.ಕಿರಣ್ ಕುಮಾರ್ ಸಜ್ಜನ್ ಶೆಟ್ಟಿ ನಮ್ಮ ತಂಡಕ್ಕೆ ಸೇರಿಕೊಂಡಿದ್ದಾರೆ ಎಂದು ಸಿದ್ಧಗಂಗಾ ಆಸ್ಪತ್ರೆ ಎಂಡಿ ಡಾ.ಎಸ್.ಪರಮೇಶ್ ತಿಳಿಸಿದ್ದಾರೆ.
ಸಿದ್ಧಗಂಗಾ ಆಸ್ಪತ್ರೆಯಲ್ಲಿ ನೂತನ ವೈದ್ಯರಿಗೆ ಸ್ವಾಗತ ನೀಡಿ ಮಾತನಾಡಿದ ಅವರು ಯಾವುದೇ ಹಂತದ ಕ್ಯಾನ್ಸರ್ ಸಮಸ್ಯೆಗಳಿಗೆ ಬೇಕಾದ ಮೆಡಿಸಿನ್ಸ್, ಕಿಮೋಥೆರಪಿ, ಸರ್ಜಿಕಲ್ ಚಿಕಿತ್ಸೆ ನಿರಂತರವಾಗಿ ದೊರೆಯಲಿದ್ದು ಮಹಾನಗರ ವ್ಯಾಪ್ತಿಯಲ್ಲಿ ಕ್ಯಾನ್ಸರ್ ಚಿಕಿತ್ಸೆ ಆರಂಭಿಸಿದ ಜಿಲ್ಲೆಯ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಎನ್ನುವ ಹೆಗ್ಗಳಿಕೆಗೆ ನಾವು ಪಾತ್ರರಾಗಿದ್ದೇವೆ, ಕ್ಯಾನ್ಸರ್ ಚಿಕಿತ್ಸೆಗೆ ಬೆಂಗಳೂರು ಅವಲಂಬಿಸುವವರು ಸನಿಹದಲ್ಲಿಯೇ ಇರುವ ನಮ್ಮ ಆಸ್ಪತ್ರೆ ಸೇವೆ ಉಪಯೋಗಿಸಿಕೊಳ್ಳಬೇಕು ಎಂದರು.
ಸಿದ್ಧಗಂಗಾ ಆಸ್ಪತ್ರೆ ಸಿಇಓ ಡಾ.ಸಂಜೀವ್ ಕುಮಾರ್ ಮಾತನಾಡಿ ದೇಹದ ಜೀರ್ಣಾಗ ವ್ಯೂಹದ ವಿಭಾಗಗಳಾದ ಬಾಯಿ ಅನ್ನನಾಳ, ಜಠರ, ಯಕೃತ್, ಪಿತ್ತಜನಕಾಂಗ, ಮೇದೋಜೀರಕ ಗ್ರಂಥಿ, ಬೊಜ್ಜಿನ ಸಮಸ್ಯೆ ಸೇರಿದಂತೆ ಎಲ್ಲಾ ಸಮಸ್ಯೆಗಳಿಗೆ ಅಡ್ವಾನ್ಸ್ ಎಂಡೋಸ್ಕೋಪಿಯಿಂದ ಚಿಕಿತ್ಸೆ ನೀಡಲು ಗ್ಯಾಸ್ಟ್ರೋ ಎಂಟರಾಲಜಿ ಮತ್ತು ಹೆಪಟಾಲಜಿ ವಿಭಾಗ ತೆರೆಯಲಾಗಿದೆ. ನಮ್ಮಲ್ಲಿ ಈಗಾಗಲೇ ಸುಸಜ್ಜಿತ ಸರ್ಜಿಕಲ್ ಗ್ಯಾಸ್ಟ್ರೋ ಎಂಟರಾಲಜಿ ವಿಭಾಗ ನಮ್ಮಲ್ಲಿ ಕಾರ್ಯ ನಿರ್ವಹಿಸುತ್ತಿದೆ, ಜೀರ್ಣಾಗ ವ್ಯೂಹದ ಮೆಡಿಕಲ್ ಗ್ಯಾಸ್ಟ್ರೋ ಎಂಟರಲಾಜಿಸ್ಟ್, ಹೆಪಟಾಲಜಿಸ್ಟ್, ಅಡ್ವಾನ್ಸ್ ಇಂಟರ್ವೆನ್ಶಲ್ ಎಂಡೋಸ್ಕೋಪಿಸ್ಟ್ ಡಾ.ಈಶ್ವರ್ ಅಮಲಝರಿ ಸಿದ್ಧಗಂಗಾ ಆಸ್ಪತ್ರೆಯಲ್ಲಿ ಸೇವೆ ನೀಡುತ್ತಿರುವುದು ನಮಗೆ ಮತ್ತಷ್ಟು ಶಕ್ತಿ ಬಂದಿದ್ದು ಸಾರ್ವಜನಿಕರು ನಮ್ಮ ಸೇವೆ ಪಡೆಯಬೇಕು ಎಂದರು.

Get real time updates directly on you device, subscribe now.

Comments are closed.

error: Content is protected !!